Weird : ಈ ವಿಚಿತ್ರ ವ್ಯಕ್ತಿಯ ಊಟದ ಮೆನುವಿನಲ್ಲಿರುವುದು ಕಬ್ಬಿಣದ ಚೂರುಗಳು ಹಾಗೂ ಗಾಜು!

Viral : ಊಟದ ಮೆನುವಿನಲ್ಲಿ(Menu) ತರಹೇವಾರಿ ಆಹಾರ ಪದಾರ್ಥಗಳಿರುವುದನ್ನು ನೀವು ನೋಡಿರಬಹುದು. ಆದರೆ ಮೈಕಲ್ ಲೊಲಿಟೋ(Micheal Lotito) ಎಂಬ ವಿಚಿತ್ರ ವ್ಯಕ್ತಿಯ ಊಟದ ಮೆನುವಿನಲ್ಲಿ ಕಬ್ಬಿಣದ ಚೂರುಗಳು, ಗಾಜು ಇತ್ಯಾದಿ ಪದಾರ್ಥಗಳಿರುತ್ತವೆ.

ಅಲ್ಲದೇ ಅವೆಲ್ಲವನ್ನೂ ಅವನು ನುಂಗಿ ನೀರು ಕುಡಿಯುತ್ತಾನೆ. ವಿಚಿತ್ರವೆಂದರೆ ಇಷ್ಟೆಲ್ಲಾ ವಸ್ತುಗಳನ್ನು ತಿಂದು ತೇಗಿದರೂ ಈತನಿಗೆ ಏನೂ ಆಗಿಲ್ಲ. ಅಲ್ಲದೇ ಮೈಕಲ್ ಲೊಲಿಟೋಗೆ ಇವುಗಳನ್ನು ತಿನ್ನುವುದೆಂದರೆ ಬಲು ಇಷ್ಟವಂತೆ. ಊಟದ ಬದಲಿಗೆ ಕಬ್ಬಿಣ, ಗಾಜುಗಳೇ ಈತನಿಗೆ ಹೆಚ್ಚು ಟೇಸ್ಟಿಯಾಗಿ ಇರುತ್ತವಂತೆ.

ಅಬ್ಬಾ! ಇವನೇನು ಐರನ್ ಮ್ಯಾನ್ ಎಂದು ಆಶ್ಚರ್ಯವಾಗದಿರದು. ಆದರೆ, ಇಂತಹ ವ್ಯಕ್ತಿಗಳು ಗಿನ್ನಿಸ್ ದಾಖಲೆ ಮಾಡುವ ಚಟಕ್ಕೆ ಹೀಗೆ ಕಸ ಹಾಗೂ ಮೆಟಲ್ ತಿನ್ನುವುದಿಲ್ಲ, ಇದೊಂದು ಮಾನಸಿಕ ಕಾಯಿಲೆ. ಹೌದು, ಇದನ್ನು ಪೀಕಾ(Pika) ಎನ್ನುತ್ತಾರೆ. ಆಹಾರವಲ್ಲದ್ದನ್ನು ತಿನ್ನುವ ಈ ದುರಭ್ಯಾಸ ಒಂದು ಈಟಿಂಗ್ ಡಿಸಾರ್ಡರ್ ಆಗಿದ್ದು, ಸ್ಕೀಜೋಫ್ರೀನಿಯಾ, ಇಂಟೆಲೆಕ್ಚುಯಲ್ ಡಿಸೆಬಿಲಿಟಿ, ಆಟಿಸಂ ಮುಂತಾದ ಇತರೆ ಮಾನಸಿಕ ಕಾಯಿಲೆಗಳೊಂದಿಗೆ ಇದು ಕಾಣಿಸಿಕೊಳ್ಳುವ ಸಂಭವ ಹೆಚ್ಚು.

https://vijayatimes.com/rishi-sunak-and-liz-truss/

ಸಾಮಾನ್ಯವಾಗಿ ಮಣ್ಣು, ಕೊಳೆ, ಪೇಯಿಂಟ್ ಫ್ಲೇಕ್‌ಗಳನ್ನು ಬಹುತೇಕ ಪೀಕಾ ಈಟಿಂಗ್ ಡಿಸಾರ್ಡರ್ ಇರುವವರು ತಿನ್ನುತ್ತಾರೆ. ಗಂಭೀರ ಕೇಸ್‌ಗಳಲ್ಲಿ ಗಮ್, ಕೂದಲು, ಸಿಗರೇಟ್ ಆ್ಯಶ್, ಮೆಟಲ್ಸ್ ಮುಂತಾದವನ್ನು ತಿನ್ನುತ್ತಾರೆ. ಇನ್ನು, ಪೀಕಾಗೆ ಇಂಥದ್ದೇ ಕಾರಣವೆಂದಿಲ್ಲವಾದರೂ ಸಾಮಾನ್ಯವಾಗಿ ಬಾಲ್ಯದಿಂದಲೇ ಬೇಡದ್ದನ್ನು ತಿನ್ನುವ ಈ ಅಭ್ಯಾಸ ಆರಂಭವಾಗುತ್ತದೆ.

ಸುಮಾರು ಜನಸಂಖ್ಯೆಯ ಶೇ.4 ರಿಂದ ಶೇ.26 ರಷ್ಟು ಮಂದಿಗೆ ಹೀಗೆ ಆಹಾರೇತರ ವಸ್ತುಗಳನ್ನು ತಿನ್ನುವ ಅಭ್ಯಾಸವಿರುತ್ತದಂತೆ. ಅದರಲ್ಲೂ ಕಳೆದೊಂದು ದಶಕದಲ್ಲಿ ಪೀಕಾ ಕಾಯಿಲೆಯಿಂದಾಗಿ ಆಸ್ಪತ್ರೆ ಸೇರುವವರ ಸಂಖ್ಯೆ ಡಬಲ್ ಆಗಿದೆ ಎನ್ನುತ್ತದೆ ಹೆಲ್ತ್‌ಕೇರ್ ಕಾಸ್ಟ್ ಹಾಗೂ ಯುಟಿಲೈಜೇಶನ್ ಪ್ರಾಜೆಕ್ಟ್.


ಓಹಿಯೋ ಯೂನಿವರ್ಸಿಟಿಯ ಮನಶಾಸ್ತ್ರಜ್ಞ ಯೇಗರ್ ಪ್ರಕಾರ, ಆತಂಕ, ಖಿನ್ನತೆ ಹಾಗೂ ಈಟಿಂಗ್ ಡಿಸಾರ್ಡರ್‌ಗಳ ಮಧ್ಯೆ ಒಂದು ಕನೆಕ್ಷನ್ ಇದೆ ಎಂದು ಹೇಳುತ್ತಾರೆ. ಇದಕ್ಕೆ ಪ್ರಥಮ ಚಿಕಿತ್ಸೆ ಎಂದರೆ, ವ್ಯಕ್ತಿಯ ದೇಹದಲ್ಲಿ ಮಿನರಲ್ಸ್ ಹಾಗೂ ನ್ಯೂಟ್ರಿಯೆಂಟ್ಸ್‌ ಕೊರತೆ ಇದೆಯೇ ಎಂದು ಪರಿಶೀಲಿಸುವುದು. ಇಂತಹ ಕೊರತೆ ಇದ್ದಾಗ, ಅದಕ್ಕಾಗಿ ಸಪ್ಲಿಮೆಂಟ್ಸ್ ನೀಡಿದಾಗ ಹಲವಾರು ಪೀಕಾ ರೋಗಿಗಳು ಆಶ್ಚರ್ಯಕರ ರೀತಿಯಲ್ಲಿ ವಾಸಿಯಾಗಿದ್ದಾರೆ.

ನಂತರದ ಚಿಕಿತ್ಸಾ ವಿಧಾನದಲ್ಲಿ ವೈದ್ಯರು ಥೆರಪಿಯನ್ನು ಬಳಸುತ್ತಾರೆ. ಪೀಕಾ ಇರುವ ವ್ಯಕ್ತಿಯು ಹೊಟ್ಟೆನೋವು, ಮಲವಿಸರ್ಜನೆಯಲ್ಲಿ ರಕ್ತ, ಹಲ್ಲು ಮುರಿದು ಹೋಗುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಬಾರಿ ಈ ದೈಹಿಕ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋದಾಗಲೇ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇರುವುದು ಬೆಳಕಿಗೆ ಬರುತ್ತದೆ.

https://vijayatimes.com/rajasthan-widow-women-got-educated-and-remarried/


ಇದಕ್ಕೆ ಬೇಗ ಚಿಕಿತ್ಸೆ ತೆಗೆದುಕೊಂಡಷ್ಟೂ ಕಾಯಿಲೆ ಗುಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ, ನಿಮ್ಮ ಸುತ್ತಮುತ್ತಲೂ ಯಾರಿಗಾದರೂ ಪೀಕಾ ಸಮಸ್ಯೆ ಇದೆ ಎಂಬುದು ಅರಿವಿಗೆ ಬಂದರೆ, ಮೊದಲು ಅವರಲ್ಲಿ ಗೌರವಯುತವಾಗಿ ಮಾತನಾಡಿ. ಪ್ರೀತಿಯಿಂದ ವಿಷಯ ತಿಳಿಸಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಎಂದು ಸಲಹೆ ನೀಡುತ್ತಾರೆ ಯೇಗರ್.

Exit mobile version