ದಲಿತ ಮಹಿಳೆ ನೀರು ಕುಡಿದ ಕಾರಣ ಗೋಮೂತ್ರದಿಂದ ಟ್ಯಾಂಕ್ ಶುದ್ಧೀಕರಿಸಿದ ವ್ಯಕ್ತಿಯ ಬಂಧನ!

Chamarajnagar : ಕರ್ನಾಟಕ ರಾಜ್ಯದ ಗಡಿ ಜಿಲ್ಲೆಯಾದ ಚಾಮರಾಜನಗರದಲ್ಲಿ ದಲಿತ ಮಹಿಳೆಯೊಬ್ಬರು(Dalit Woman) ಟ್ಯಾಂಕಿನಲ್ಲಿ ನೀರು ಕುಡಿದ ನಂತರ,

ಟ್ಯಾಂಕಿನ ನೀರನ್ನು ಹೊರಹಾಕಿ ಗೋಮೂತ್ರದಿಂದ ಶುದ್ಧೀಕರಿಸಿದ ಆರೋಪದ ಮೇಲೆ 62 ವರ್ಷದ ವ್ಯಕ್ತಿಯನ್ನು ಕಠಿಣ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಬಂಧಿಸಲಾಗಿದೆ.

ಆರೋಪಿ ಮಹದೇವಪ್ಪ ಎಂದು ಗುರುತಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಿವಮ್ಮ ಎಂಬ ಮಹಿಳೆ ನವೆಂಬರ್ 18 ರಂದು ಹೆಗ್ಗಟೋರಾ ಗ್ರಾಮದ ಮೇಲ್ಜಾತಿ ಪ್ರದೇಶದ ಟ್ಯಾಂಕ್‌ನಿಂದ ನೀರನ್ನು ಕುಡಿದಿದ್ದಾರೆ.

ಮಹಿಳೆ ನೀರು ಕುಡಿದು ಬಳಿಕ ಅಲ್ಲಿಂದ ಹೋದ ಬೆನ್ನಲ್ಲೇ ಅದನ್ನು ಶುದ್ಧೀಕರಿಸಲು ಮಹದೇವಪ್ಪ ಮುಂದಾಗಿದ್ದರು ಎನ್ನಲಾಗಿದೆ.

ನೀರು ತುಂಬಿದ್ದ ಟ್ಯಾಂಕಿನಿಂದ ಪೂರ್ತಿ ನೀರನ್ನು ಹೊರ ಹರಿಯಲು ಬಿಟ್ಟಿದ್ದಾರೆ.

ಟ್ಯಾಂಕಿನ ನೀರು ಸಂಪೂರ್ಣ ಕಾಲಿಯಾದ ಬಳಿಕ ಗೋಮೂತ್ರ ತಂದು ಶುದ್ಧೀಕರಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗುತ್ತಿದ್ದಂತೆ ಈ ವಿಷಯದ ಬಗ್ಗೆ ವಿಚಾರಿಸಲು ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿದರು.

ಇದನ್ನೂ ಓದಿ : https://vijayatimes.com/tips-to-men/

ವರದಿಯ ಅನುಸಾರ, ಹೆಚ್.ಡಿ.ಕೋಟೆ(HD Kote) ತಾಲೂಕಿನ ಸರಗೂರು ಮೂಲದ ಶಿವಮ್ಮ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ ಹೇಳಿದ್ದು ಹೀಗೆ,

ಮದುವೆಗೆಂದು ಹೆಗ್ಗಟೋರಕ್ಕೆ ಭೇಟಿ ನೀಡಿದ್ದೆ. ಊಟದ ನಂತರ, ನಾನು ಬಸ್ ಹತ್ತುವ ಮೊದಲು ಟ್ಯಾಂಕ್‌ನಿಂದ ನೀರನ್ನು ಕುಡಿದಿದ್ದೆ ಅಷ್ಟೇ!

ನಾನು ನೀರು ಕುಡಿಯುತ್ತಿದ್ದಾಗ ಅಲ್ಲೇ ಇದ್ದ ಒಬ್ಬ ವ್ಯಕ್ತಿ ತನ್ನ ಜಾತಿಯ ಬಗ್ಗೆ ಕೇಳಿದನು ಮತ್ತು ನಾನು ದಲಿತ ಸಮುದಾಯದವಳು ಎಂದು ತಿಳಿದ ಕೂಡಲೇ ನೀರು ಕುಡಿಯಬೇಡಿ ಎಂದು ಹೇಳಿದರು.

ಆದ್ರೆ, ನಾನು ಅಷ್ಟರೊಳಗೆ ನೀರು ಕುಡಿದು ಬಳಿಕ ಬಸ್ ಹತ್ತಿ ಇತ್ತ ಬಂದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ತಹಸೀಲ್ದಾರ್ ಐ.ಇ.ಬಸವರಾಜು ಗ್ರಾಮಕ್ಕೆ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ, ನೀರಿನ ಟ್ಯಾಂಕ್ ಸಾರ್ವಜನಿಕ ಆಸ್ತಿಯಾಗಿದ್ದು, ಪ್ರತಿಯೊಬ್ಬರೂ ಅದರಲ್ಲಿ ನೀರು ಕುಡಿಯಬಹುದು ಎಂದು ಗ್ರಾಮಸ್ಥರಿಗೆ ಒತ್ತಿ ಹೇಳಿದ್ದಾರೆ.

ಬಸವರಾಜು ಅವರು 20 ಕ್ಕೂ ಹೆಚ್ಚು ದಲಿತರೊಂದಿಗೆ ಗ್ರಾಮದ ಸಾರ್ವಜನಿಕ ಕುಡಿಯುವ ನೀರಿನ ನಲ್ಲಿಗಳಿಗೆ ನೀರು ಕುಡಿಯಲು ತೆರಳಿದರು.

ಗ್ರಾಮದಲ್ಲಿ ಬೇರೆ ಯಾವುದೇ ಸಾಮಾಜಿಕ ಸಮಸ್ಯೆಗಳಿಲ್ಲ. ಜನರು ಪರಸ್ಪರ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ ಕೆಲವು ಪೂರ್ವಾಗ್ರಹ ಪೀಡಿತರು ಇರುತ್ತಾರೆ ಮತ್ತು ಈ ಪ್ರಕರಣದಲ್ಲಿ ಆರೋಪಿ ಕೂಡ ಅಂತಹ ಮನಸ್ಥಿತಿಯ ವ್ಯಕ್ತಿಯಾಗಿದ್ದಾರೆ.

ಇದರಲ್ಲಿ ಭಾಗಿಯಾಗಿರುವುದು ಅವರೊಬ್ಬರೇ ಹೊರತು ಬೇರೆ ಯಾರೂ ಅಲ್ಲ ಎಂದು ಬಸವರಾಜು ಸ್ಪಷ್ಟಪಡಿಸಿದ್ದಾರೆ.

https://youtu.be/cViS_eJ77Vo ಕ್ರಷರ್ ನಿಂದ ನೆಮ್ಮದಿ ಕಳೆದುಕೊಂಡ ಸೌದತ್ತಿ ಗ್ರಾಮಸ್ಥರು!

ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ಭೇಟಿ ಮಾಡಿ ದಲಿತರಿಗೆ ಇಂತಹ ಘಟನೆಗಳು ಮರುಕಳಿಸಿದರೆ ಹೇಗೆ ದೂರು ನೀಡಬೇಕು ಎಂದು ತಿಳಿ ಹೇಳಿದರು.

ನಾವು ನೀರಿನ ಟ್ಯಾಂಕ್‌ಗಳು ಸಾರ್ವಜನಿಕ ಆಸ್ತಿ ಮತ್ತು ಪ್ರತಿಯೊಬ್ಬರೂ ಅವುಗಳನ್ನು ಬಳಸಲು ಸ್ವತಂತ್ರರು ಎಂಬ ಬೋರ್ಡ್‌ಗಳನ್ನು ಸಹ ಹಾಕಿದ್ದೇವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಿದರು.

Exit mobile version