ಮಾಂಡೌಸ್ ಎಫೆಕ್ಟ್ : ಎಚ್ಚರ! ನಾಳೆ ರಾಜ್ಯಾದ್ಯಂತ ಬಿರುಗಾಳಿಯೊಂದಿಗೆ ಮಳೆ ಅಬ್ಬರ !

Karnataka : ದಕ್ಷಿಣ ಒಳನಾಡಿನಲ್ಲಿ ಮುಂದಿನ 24 ಗಂಟೆಗಳಲ್ಲಿ 15 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ 3 ದಿನಗಳ ಕಾಲ ರಾಜ್ಯಾದ್ಯಂತ (Mandous Effect in karnataka) ಗುಡುಗು, ಬಿರುಗಾಳಿಯ ಜೊತೆಗೆ ಮಳೆಯಾಗಲಿದೆ.

ಡಿಸೆಂಬರ್ 15 ರವರೆಗೆ ಹೆಚ್ಚಿನ ಮಳೆಯ ಮುನ್ಸೂಚನೆ (IMD) ನೀಡಿದೆ.

ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ(Mandous Effect in karnataka), ತಮಿಳುನಾಡು ಸೇರಿ ಕೆಲ ರಾಜ್ಯಗಳಿಗೆ ಕಾಡುತ್ತಿರುವ ಮ್ಯಾಂಡೌಸ್‌ ಚಂಡಮಾರುತಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್(United Arab Emirates) ಹೆಸರು ನೀಡಿದೆ.

ವಿಶ್ವ ಹವಾಮಾನ ಸಂಸ್ಥೆಯ ಸದಸ್ಯನಾಗಿರುವ ಯುಎಇ 2020 ರಲ್ಲಿ ಈ ರಣಭೀಕರ ಚಂಡಮಾರುತಕ್ಕೆ ಮ್ಯಾಂಡೌಸ್‌ ಎಂಬ ಹೆಸರನ್ನು ನೀಡಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಟ್ವಿಟ್ಟರ್‌ನಲ್ಲಿ ತಿಳಿಸಿದೆ.

ಮ್ಯಾಂಡೌಸ್‌(Mandous) ಅಂದರೆ ಅರೇಬಿಕ್ ಭಾಷೆಯಲ್ಲಿ, ‘ನಿಧಿ ಪೆಟ್ಟಿಗೆ’(Treasure Box) ಎಂದರ್ಥ ಮತ್ತು ಇದನ್ನು ‘ಮ್ಯಾನ್-ಡೌಸ್’ ಎಂದು ಕರೆಯಲಾಗುತ್ತೆ.

ಇದನ್ನೂ ನೋಡಿ : https://fb.watch/hmLFyfTGth/ ಕಾಸಿದ್ರೆ ಟ್ರೀಟ್ಮೆಂಟ್‌ ! ಕಡು ಬಡವರ ರಕ್ತ ಹೀರುತ್ತಿದ್ದಾರೆ ವೈದ್ಯರು.

ಮ್ಯಾಂಡೌಸ್‌ ಚಂಡಮಾರುತ ಇದರ ಲಕ್ಷಣವೂ ನಿಧಾನವಾಗಿ ಚಲಿಸುವ ಗುಣ ಹೊಂದಿದ್ದು, ತೇವಾಂಶಯುಕ್ತವಾದ ತಣ್ಣನೆ ಗಾಳಿಯನ್ನು ಬೀಸುವುದರ ಜೊತೆಗೆ ಈ ಚಂಡಮಾರುತವು ವಾಯು ಶಕ್ತಿಯ ರೂಪದಲ್ಲಿ ಅತ್ಯಂತ ಬಲವನ್ನು ಪಡೆದು ಜನಜೀವನ ಅಸ್ತವ್ಯಸ್ಥ ಮಾಡುತ್ತದೆ.

ಡಿಸೆಂಬರ್ 15 ರವರೆಗೆ ಹೆಚ್ಚಿನ ಮಳೆಯಿಂದಾಗಿ ತಮಿಳುನಾಡಿನ(Tamil Nadu) ಕೆಲವು ಪ್ರದೇಶಗಳಲ್ಲಿ ಶಾಲೆಗಳು ಮುಚ್ಚಲ್ಪಡುತ್ತವೆ.

ಮ್ಯಾಂಡೌಸ್‌ ಚಂಡಮಾರುತದಿಂದಾಗಿ ನೆರೆ ರಾಜ್ಯಗಳಾದ ಚೆನ್ನೈ(chennai), ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಬೆಂಗಳೂರು(Bengaluru) ಸೇರಿದಂತೆ ಹಲವು ಕಡೆಯಲ್ಲಿ ಭಾರೀ ಮಳೆಯಾಗುತಿದೆ.

ಇದನ್ನೂ ಓದಿ : https://vijayatimes.com/rahul-gandhi-questiond-bjp/

ಇದರ ಪರಿಣಾಮದಿಂದಾಗಿ ದಕ್ಷಿಣ ಒಳನಾಡು ಹಾಗು ಉತ್ತರ ಒಳನಾಡುನ ಕೆಲವು ಜಿಲ್ಲೆಗಳಲ್ಲಿ ಹಾಗೂ ಕರ್ನಾಟಕ ಕರವಳಿ ಭಾಗದಲ್ಲು ಮಳೆಯಾಗಲಿವೆ.

ಡಿ.10ರಂದು ರಾಜ್ಯ ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ ಚಿತ್ತೂರಿನಲ್ಲಿ 22 ಮಿ.ಮೀ,

ಅನ್ನಮಯ್ಯ ಜಿಲ್ಲೆಯಲ್ಲಿ 20.5 ಮಿ.ಮೀ, ಎಸ್‌ಪಿಎಸ್‌ಆರ್ ನೆಲ್ಲೂರು ಜಿಲ್ಲೆಯಲ್ಲಿ 23.4 ಮಿ.ಮೀ, ಪ್ರಕಾಶಂ 10.1 ಮಿ.ಮೀ,

ವೈಎಸ್‌ಆರ್‌ನಲ್ಲಿ 13.2 ಮಿ.ಮೀ ಮತ್ತು ತಿರುಪತಿ ಜಿಲ್ಲೆಯಲ್ಲಿ 2.4 ಮಿ.ಮೀ ಮಳೆ ದಾಖಲಾಗಿದೆ.

ಮ್ಯಾಂಡೌಸ್‌ ಚಂಡಮಾರುತದಿಂದಾಗಿ ಹಲವು ರಾಜ್ಯಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಹಾಗೂ ತೀವ್ರ ಚಳಿಯಿಂದಾಗಿ ಜನರ ವಾರಾಂತ್ಯದ ಕೆಲಸಕಾರ್ಯ ಅಸ್ತವ್ಯಸ್ತಗೊಂಡಿವೆ.

ತಮಿಳುನಾಡಿನ ಮಾಮಲ್ಲಪುರಂನಲ್ಲಿ ಚಂಡಮಾರುತದ ಆರ್ಭಟದಿಂದ ಭೂಕುಸಿತ ಉಂಟಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ರೆಡ್ ಅಲರ್ಟ್(Red Alert) ಘೋಷಿಸಿದೆ ಏಕೆಂದರೆ ಈ ರಾಜ್ಯಗಳು ‘ಮಂಡೌಸ್’ ಚಂಡಮಾರುತದಿಂದ

ಇನ್ನು ಕೆಲ ದಿನಗಳ ಕಾಲ ಭಾರಿ ಮಳೆಯಾಗಲಿದೆ ಹಾಗೂ ಗಾಳಿಯ ವೇಗ ಗಂಟೆಗೆ 85 ಕಿ.ಮೀ ವರೆಗೆ ದಾಟಲಿದೆ ಎಂದು IMD ಈಗಾಗಲೇ ಭವಿಷ್ಯ ನುಡಿದಿದೆ ಆದ್ದರಿಂದ ರೆಡ್ ಅಲರ್ಟ್ ಘೋಷಿಸಿದೆ .

ಇದನ್ನೂ ಓದಿ : https://vijayatimes.com/central-election-commission/

ಜೊತೆಗೆ ದಕ್ಷಿಣ ಒಳನಾಡಿನ ಮುಂದಿನ 24 ಗಂಟೆಯಲ್ಲಿ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್(Orange Alert) ಘೋಷಿಸಲಾಗಿದೆ. ಇನ್ನೂ 3ದಿನಗಳ ಕಾಲ ಗುಡುಗು, ಬಿರುಗಾಳಿಯ ಜೊತೆಗೆ ಮಳೆಯಾಗಲಿದೆ.

ಇದು ಬಹುತೇಕ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Exit mobile version