ಮಂಡ್ಯದ ಇಬ್ಬರು ವೈದ್ಯರು ಆತ್ಮಹತ್ಯೆಗೆ ಶರಣು: ಅನುಮಾನ ಮೂಡಿಸುತ್ತಿರುವ ಈ ಇಬ್ಬರ ಆತ್ಮಹತ್ಯೆ

Bengaluru: ಬೆಂಗಳೂರಿನ (Bengaluru) ಮಹಾಲಕ್ಷ್ಮಿ ಲೇಔಟ್ನಲ್ಲಿ ಮಂಡ್ಯ ಡಿಎಚ್ಒ ಡಾ. ಮೋಹನ್ (DHO Dr. Mohan) ಕಿರುಕುಳದಿಂದ (Mandya Doctors Suicide Case) ಬೇಸತ್ತ

ವೈದ್ಯರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ನಟರಾಜ್ ಎಂಬುವವರು (Mandya Doctors Suicide Case) ಆತ್ಮಹತ್ಯೆಗೆ ಶರಣಾದ ವೈದ್ಯರಾಗಿದ್ದಾರೆ.

ಇವರು ಮಂಡ್ಯ (Mandya) ಆರೋಗ್ಯ ಇಲಾಖೆಯ ವೆಲ್ಫೇರ್ ಆಫೀಸರ್ (Welfare Officer) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇಂದು (ಡಿ.2) ಮಹಾಲಕ್ಷ್ಮಿ ಲೇಔಟ್ ಅಲ್ಲಿರುವ

ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೃದಯಾಘಾತಕ್ಕೊಳಗಾದ ಹಿನ್ನೆಲೆ ಕಳೆದ ಕೆಲ ದಿನಗಳಿಂದ ನಟರಾಜ್ (Nataraj) ರಜೆಯಲ್ಲಿದ್ದರು. ಆದರೆ ಇಂದು

ಕೆಲಸಕ್ಕೆ ರಿಪೋರ್ಟ್ (Report) ಮಾಡಿಕೊಳ್ಳಬೇಕಿತ್ತು.

ಆದರೆ ಮಂಡ್ಯ ಡಿಎಚ್ಒ ಇವರಿಗೆ ರಿಪೋರ್ಟ್ ಮಾಡಿಕೊಳ್ಳದಂತೆ ಸೂಚನೆ ನೀಡಿದ್ದು, ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಬೆಟ್ಟಸ್ವಾಮಿ

ಎಂಬ ಅಧಿಕಾರಿಯನ್ನು ಪಾಂಡವಪುರ ಟಿಎಚ್ಒ (Pandavapura THO) ಆಗಿ ವರ್ಗಾವಣೆ ಮಾಡಲಾಗಿತ್ತು. ಇನ್ನು ಬೆಟ್ಟಸ್ವಾಮಿ ಪಾಂಡವಪುರದಲ್ಲಿ ರಿಪೋರ್ಟ್ ಮಾಡಿಕೊಂಡಿರಲಿಲ್ಲ.

ಹಾಗಾಗಿ ಡಿಎಚ್ಒ ಬೆಟ್ಟಸ್ವಾಮಿ (DHO Bettaswamy) ಪರವಾಗಿ ಇದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಭ್ರೂಣ ಲಿಂಗ ಪತ್ತೆ, ಹತ್ಯೆ ಕೇಸ್: ಆರೋಪಿ ಡಾ. ಸತೀಶ್​​ ಆತ್ಮಹತ್ಯೆ
ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣದ ಆರೋಪಿ ಎನ್ನಲಾಗಿದ್ದ ವೈದ್ಯರೊಬ್ಬರು ಕಾರಿನಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಘಟನೆಯು

ಕುಶಾಲನಗರದ (Kushalnagara) ಆನೆಕಾಡು ಬಳಿ ನಡೆದಿದೆ.

ಡಾ. ಸತೀಶ್ (Dr. Sathish) ಆತ್ಮಹತ್ಯೆ ಮಾಡಿಕೊಂಡ ಆಯುರ್ವೇದ ವೈದ್ಯ. ಇವರು ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ​ ಪಿರಿಯಾಪಟ್ಟಣದ (Piriyapattana) ಕೊಣನೂರಿನಲ್ಲಿ ಕೆಲಸ

ಮಾಡುತ್ತಿದ್ದರು. ಇದರ ಜೊತೆಗೆ ಶಿವಳ್ಳಿ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಎನ್ನುವ ಹೆಸರಲ್ಲಿ ಕ್ಲಿನಿಕ್​ (Clinic) ನಡೆಸುತ್ತಿದ್ದರು. ಇದು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಹುಳ್ಳೇನಹಳ್ಳಿ (Hullenahalli)

ಸಮೀಪವೇ ಇದೆ. ಇಡೀ ರಾಜ್ಯವೇ ಬೆಚ್ಚಿ ಬಿದ್ದಿದ್ದ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಕೇಸ್‌ನಲ್ಲಿ ಡಾ. ಸತೀಶ್ ಶಂಕಿತ ಆರೋಪಿಯಾಗಿದ್ದನು. ಪ್ರಕರಣ ಬೆಳಕಿಗೆ ಬಂದ ಮೇಲೆ ವೈದ್ಯನ ಮೇಲೆ ಸ್ಥಳೀಯರು

ಸಾಕಷ್ಟು ಗಂಭೀರ ಆರೋಪಗಳನ್ನು ಮಾಡಿದ್ದರು.

ಸ್ಕ್ಯಾನಿಂಗ್ (Scanning) ನಡೆಯುತ್ತಿದ್ದ ಆಲೆಮನೆಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ (Dinesh Gundurao) ಭೇಟಿ ನೀಡಿದ್ದ ವೇಳೆ ವೈದ್ಯ ಸತೀಶ್ ವಿರುದ್ಧ ಸ್ಥಳೀಯರು ದೂರು ನೀಡಿ ಕ್ರಮ

ಕೈಗೊಳ್ಳುವಂತೆ ಆಗ್ರಹಿಸಿದ್ದರು. ಹೀಗಾಗಿ ತಕ್ಷಣ ತನಿಖೆ ನಡೆಸುವಂತೆ ಸಚಿವರು ಸೂಚಿಸಿದ್ದರು. ಎಲ್ಲಿ ತನಿಖೆಯಲ್ಲಿ ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ.

ಇದನ್ನು ಓದಿ: 5 ರಾಜ್ಯಗಳಲ್ಲಿ ಮತ ಎಣಿಕೆ ಮೇಲ್ವಿಚಾರಣೆ ಮಾಡಲು ಉಸ್ತುವಾರಿ, ವೀಕ್ಷಕರಿಗೆ ನಿರ್ದೇಶನ: ಮಲ್ಲಿಕಾರ್ಜುನ ಖರ್ಗೆ

ಭವ್ಯಶ್ರೀ ಆರ್ ಜೆ

Exit mobile version