ಪೊಲೀಸ್ ವರಿ‍ಷ್ಠಾಧಿಕಾರಿಯ ಸರ್ವಾಧಿಕಾರಿ ಧೋರಣೆಗೆ ಮರಗಳು ಬಲಿ

 ಮಂಡ್ಯ ಸೆ 14 : ಪೊಲೀಸ್ ವರಿಷ್ಠಾಧಿಕಾರಿಯು ಸರ್ವಾಧಿಕಾರಿ ಧೋರಣೆ ನಡೆಸಿ  ಸರ್ಕಾರಿ ನಿವಾಸದಲ್ಲಿ ಬಳಿಯಿದ್ದ 10ಕ್ಕೂ ಹೆಚ್ಚು ಮರಗಳನ್ನು ಕಡಿದು ಉರುಳಿಸಲಾಗಿದೆ. ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಈ ರೀತಿ ಮರಗಳನ್ನು ಕಡಿಸಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯೆಕ್ತವಾಗಿದೆ.  

ಐಪಿಎಸ್ ಅಧಿಕಾರಿಯ ಅವಾಂತರದಿಂದ ಬಹಳಷ್ಟು ಮರಗಳು ಧರೆಗುರುಳಿದ ಘಟನೆ ಮಂಡ್ಯದಲ್ಲಿ ನಡೆದಿದ್ದು, ಮಂಡ್ಯದ ಎಸ್‌ ಪಿ ಡಾ. ಅಶ್ವಿನಿ ಅವರ ಸರ್ಕಾರಿ ನಿವಾಸದಲ್ಲಿ 10ಕ್ಕೂ ಹೆಚ್ಚು ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಡಿದು ಪೊಲೀಸ್ ವಾಹನದಲ್ಲೇ ಮರಗಳನ್ನು ಕಡಿದು ಸಾಗಿಸಲು ಬಳಸಲಾಗಿದೆ. ತರಬೇತಿಯಲ್ಲಿರೋ ಪೇದೆಗಳನ್ನೇ ಈ ಕೆಲಸಕ್ಕೆ ಬಳಸಲಾಗಿದೆ. ಇದೀಗ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದು ಮಾತ್ರವಲ್ಲದೆ ಕೆಲವು ತಿಂಗಳ ಹಿಂದೆ 50ಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಣೆ ಮಾಡಿದ ಆರೋಪವೂ ಕೂಡ ಇವರ ಮೇಲೆ ಕೇಳಿ ಬರುತ್ತಿದೆ

Exit mobile version