ಜೂನ್ 2 ರಿಂದ 11ರ ವರೆಗೆ ಲಾಲ್​ಬಾಗ್​ನಲ್ಲಿ ನಡೆಯಲಿದೆ ವಾರ್ಷಿಕ ಮಾವು ಮೇಳ

Bengaluru : ಕರ್ನಾಟಕ ತೋಟಗಾರಿಕೆ ಇಲಾಖೆಯು (Karnataka Horticulture Department) ಲಾಲ್‌ಬಾಗ್‌ನಲ್ಲಿ (Lalbagh) ಆಯೋಜಿಸುವ ವಾರ್ಷಿಕ ಮಾವು ಮೇಳವು ಈ ವರ್ಷ ಜೂನ್ 2 ರಂದು ಪ್ರಾರಂಭವಾಗಲಿದೆ. ಬೆಂಗಳೂರಿನ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ ಮಾವು ಮೇಳ ನಡೆಯಲಿದೆ. ಮಾವು ಮೇಳವು (Mango Mela in Lalbagh) ಜೂನ್ 2 ರಿಂದ 11 ರವರೆಗೆ 9 ದಿನಗಳವರೆಗೆ ನಡೆಯಲಿದ್ದು, ಎಲ್ಲಾ ಗ್ರಾಹಕರಿಗೆ ಉಚಿತ ಪ್ರವೇಶವಿದೆ.

ಈ ಬಾರಿ ಮಾವು ಮೇಳ ವಿಳಂಬಕ್ಕೆ ಕಾರಣವೇನು?

ಮಾವು ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳ ಬೆಳೆಗಾರರು ಮಾವು ಮಾರಾಟ ಮಾಡಲು ಮಳಿಗೆಗಳನ್ನು ಹಾಕಲಿದ್ದು,

ಪ್ರತಿ ವರ್ಷ ಮಾವು ಮೇಳದಲ್ಲಿ ಸುಮಾರು 100 ರಿಂದ 120 ಮಳಿಗೆಗಳು ಕಾಣಿಸಿಕೊಳ್ಳುತ್ತವೆ ಎಂದು ತೋಟಗಾರಿಕಾ ಇಲಾಖೆ (Mango Mela in Lalbagh) ತಿಳಿಸಿದೆ.

ಆದರೆ, ಇಳುವರಿ ಕಡಿಮೆಯಾಗಿರುವುದರಿಂದ ಈ ವರ್ಷ ಮಳಿಗೆಗಳ ಸಂಖ್ಯೆ 40ಕ್ಕೆ ಇಳಿಯಲಿದೆ ಎಂದು ವರದಿಯೊಂದು ತಿಳಿಸಿದೆ.

https://youtu.be/nW8-3qJD4wA

ಈ ವರ್ಷ ಆಲಿಕಲ್ಲು ಮಳೆಗೆ ಬೆಳೆಯು ತುತ್ತಾಗಿದ್ದು, ಮಾವಿನ ಉತ್ಪಾದನೆ ತೀರಾ ಕಡಿಮೆಯಾಗಿದೆ. ಇದರಿಂದಾಗಿ ಕಡಿಮೆ ಮಳಿಗೆಗಳನ್ನು ತೆರೆಯಲಾಗಿತ್ತು.

ಮಾವು ಮೇಳ ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಾಲ್ಬಾಗ್ನಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಸಂಸತ್ ಚುನಾವಣೆಯ ಕಾರಣದಿಂದ ಮುಂದೂಡಲಾಗಿದೆ.

ಬೆಂಗಳೂರು ಮತ್ತು ಕರ್ನಾಟಕದ (Karnataka) ವಿವಿಧ ಭಾಗಗಳಿಂದ ಮಾವು ಬೆಳೆಗಾರರು ಇಲ್ಲಿ ಮಳಿಗೆಗಳನ್ನು ಸ್ಥಾಪಿಸಿದ್ದಾರೆ.

ಈ ಬಾರಿ ಅನೇಕ ತಳಿಗಳ ಹಣ್ಣುಗಳು ಮಾವು ಪ್ರಿಯರನ್ನು ಸೆಳೆಯುತ್ತವೆ. ಸೆಂಧೂರ,ಮಾಲ್ಗೋವಾ, ಮಲ್ಲಿಕಾ, ಸಕ್ಕರೆಗುತ್ತಿ ಮುಂತಾದ ಮಾವಿನ ಹಣ್ಣುಗಳನ್ನು ಮಾವು ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ.

Exit mobile version