ಮ್ಯಾಟ್ರಿಮೋನಿ ಸೈಟ್‌ನಲ್ಲಿ ರಿಜಿಸ್ಟರ್ ಆಗಿದ್ದೀರಾ? ಎಚ್ಚರ..

ಬೆಂಗಳೂರು ,ಜ. 4: ಮದುವೆಯಾಗದ, ವಿಚ್ಚೇದಿತವಾದ ಗಂಡಸರು ಹೆಂಗಸರು ಇತ್ತೀಚೆಗೆ ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ಸಂಗಾತಿಯ ಹುಡುಕಾಟಕ್ಕಾಗಿ ಬಯೋಡಾಟಾಗಳನ್ನು ಪೋನ್‌ನಂಬರ್‌ಗಳನ್ನೂ ಹಣ ಕಟ್ಟಿ ಅಪ್‌ಲೋಡ್ ಮಾಡ್ತಾರೆ. ಅದರಲ್ಲಿ ಅನೇಕರು ಇನ್ನೊಬ್ಬರಿಗೆ ಮೋಸ ಮಾಡಲು ಕೂಡಾ ಈ ಸೈಟ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಾರೆ.ಇದೀಗ  ಈ ಚಿತ್ರದಲ್ಲಿ ಕಾಣಿಸುತ್ತಿರುವ ಹೆಣ್ಣು ಅಂತಿಂಥವಳಲ್ಲ, ಭಾರಿ ಖತರ್ನಾಕ್‌ ಹೆಣ್ಣಿವಳು. ಮ್ಯಾಟ್ರಿಮೋನಿ ಸೈಟ್‌ಗಳೇ ಇವಳ ಬಂಡವಾಳ. ಅಲ್ಲಿ ಪೋಸ್ಟ್‌ ಮಾಡುವ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರೇ ಈಕೆಯ ಟಾರ್ಗೆಟ್‌!

ಹೌದು. ಅವಿವಾಹಿತ ಹಾಗೂ ವಿಚ್ಛೇದಿತರನ್ನು ಪುರುಷರನ್ನೇ ಟಾರ್ಗೆಟ್ ಮಾಡಿ, ಅವರಿಗೆ ಇಲ್ಲಸಲ್ಲದ ಆಮಿಷ ತೋರಿ, ಸ್ವರ್ಗ ತೋರಿಸುತ್ತೇನೆ ಎಂದು ಕರೆಯುತ್ತಾಳೆ. ಹೀಗೆ ಸ್ವರ್ಗದ ಆಸೆಯಲ್ಲಿ ಹೋದ ಹಲವಾರು ಪುರುಷರು ಇದೀಗ ಅಕ್ಷರಶಃ ನರಕಕ್ಕೆ ಹೋಗಿದ್ದಾರೆ!

ಅಷ್ಟಕ್ಕೂ ಈ ಭಯಂಕರ ಹೆಣ್ಣಿನ ಹೆಸರು ಕವಿತಾ. ಹಿಂದೊಮ್ಮೆ ಶಿಕ್ಷಕಿಯಾಗಿ ಕೆಲಸ ಕಳೆದುಕೊಂಡವಳಿವಳು. ಕೆಲಸ ಇಲ್ಲದ ಮೇಲೆ ದುಡ್ಡಿಗಾಗಿ ಹನಿಟ್ರ್ಯಾಪ್‌ ಮಾರ್ಗವನ್ನು ತನ್ನದಾಗಿಸಿಕೊಂಡಿದ್ದಾಳೆ. ಮ್ಯಾಟ್ರಿಮೋನಿ ಸೈಟ್‌ಗಳನ್ನು ತಡಕಾಡುವ ಈಕೆ ಅಲ್ಲಿ ಬರುವ ಅವಿವಾಹಿತರು ಮತ್ತು ವಿಚ್ಛೇದಿತ ಪುರುಷರ ಮಾಹಿತಿ ಕಲೆ ಹಾಕಿ. ಅವರ ಸಂಪರ್ಕ ಸಾಧಿಸುತ್ತಾಳೆ.

ಇವಳ ಬಣ್ಣ ಬಣ್ಣದ ಮಾತಿಗೆ ಮರುಳಾಗಿ ಇವಳ ಹಿಂದೆ ಹೋದರೆ ಆಗುವುದೇ ಬೇರೆ. ಬಂದವರ ಜತೆ ದೈಹಿಕ ಸಂಪರ್ಕವನ್ನೂ ಮಾಡಿ ನಂತರ ಅದನ್ನು ವಿಡಿಯೋ ಮಾಡಿ ಹನಿಟ್ರ್ಯಾಪ್‌ ಮಾಡುತ್ತಾಳೆ. ಒಮ್ಮೆ ನೀವು ಸಿಕ್ಕಿಬಿದ್ದರೆ ಮುಗಿಯಿತು. ಇದ್ದಬಿದ್ದ ಹಣ ವಸೂಲಿ ಮಾಡುತ್ತಾಳೆ. ಇಲ್ಲದಿದ್ದರೆ ರೇಪ್‌ ಕೇಸ್‌ ಮೇಲೆ ಠಾಣೆಗೆ ದೂರು ದಾಖಲಿಸುತ್ತಾಳೆ. ಸದ್ಯ ಈಕೆ ಬೆಂಗಳೂರಿನ ಇಂದಿರಾನಗರ ಠಾಣಾ ಪೊಲೀಸರ ಅತಿಥಿಯಾಗಿದ್ದಾಳೆ.

ಈ ಕವಿತಾ ಕಳೆದ 22ನೇ ತಾರೀಖಿನಂದ ಯುವಕನೊಬ್ಬನನ್ನು ಇದೇ ರೀತಿ ಹನಿಟ್ರ್ಯಾಪ್‌ ಮಾಡಿದ್ದಾಳೆ. ಆತನ ಜತೆಗಿರುವ ಖಾಸಗಿ ಕ್ಷಣಗಳನ್ನು ಚಿತ್ರಿಸಿಕೊಂಡಿದ್ದಾಳೆ. ನಂತರ ಆತನ ಬಳಿ ಎರಡು ಲಕ್ಷದ ಬೇಡಿಕೆ ಇಟ್ಟಿದ್ದಾಳೆ. ಕೊಡದಿದ್ದರೆ ಪೊಲೀಸರಲ್ಲಿ ರೇಪ್‌ ಕೇಸ್‌ ಹಾಕುವುದಾಗಿ ಹೇಳಿದ್ದಾಳೆ. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಸಂದೇಹ ಶುರುವಾಗಿದೆ. ನಂತರ ತನಿಖೆ ಕೈಗೊಂಡಾಗ ಈಕೆಯ ಅಸಲಿಯತ್ತು ಬಯಲಾಗಿದೆ. ಹೀಗೆ ಯುವಕನ ವಿರುದ್ಧ ದೂರು ನೀಡಲು ಹೋಗಿ ತಾನೇ ಸಿಕ್ಕಿಬಿದ್ದಿದ್ದಾಳೆ ಈ ಕಳ್ಳಿ. ನಂತರ ಇದೇ ರೀತಿ ಹಲವಾರು ಪುರುಷರಿಗೆ ಮೋಸ ಮಾಡಿರುವುದಾಗಿ ಪೊಲೀಸರಿಗೆ ತಿಳಿದಿದೆ.

ಇಷ್ಟೇ ಅಲ್ಲದೇ ದುಡ್ಡು ಕೊಡದ ಕಾರಣ, ಅನೇಕ ಪೊಲೀಸ್‌ ಠಾಣೆಗಳಲ್ಲಿ ಈತನ ವಿರುದ್ಧ ಕೇಸ್‌ ದಾಖಲು ಮಾಡಿಸಿದ್ದಳು. ಒಂದು ಪೊಲೀಸ್‌ ಠಾಣೆಯಲ್ಲಿ ದಾಖಲಾದ ಕೇಸಿಗೆ ಸಂಬಂಧಿಸಿದಂತೆ ಯುವಕನನ್ನು ಬಂಧನ ಕೂಡ ಮಾಡಿದ್ರು. ಇಂತವರಿಂದ ಎಚ್ಚರವಿರಿ.

Exit mobile version