ಮತ್ತೊಂದು ಮೈಲಿಗಲ್ಲಿನತ್ತ ಇಸ್ರೋ

We are going to Mars

ಚೆನ್ನೈ, ನ. 07: ಬಾಹ್ಯಾಕಾಶ ಜಗತ್ತಿನಲ್ಲಿ ಆನೇಕ ಯಶಸ್ಸಿನ ಧ್ವಜಗಳನ್ನು ಸ್ಥಾಪಿಸಿರುವ ಇಸ್ರೋ ಇಂದು ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಹೊರಟಿದೆ. ಇಮೇಜಿಂಗ್ ಉಪಗ್ರಹ ಇಒಎಸ್​-01 ಸೇರಿ 10 ಉಪಗ್ರಹಗಳನ್ನು ಇಂದು ಉಡಾವಣೆ ಮಾಡುವುದಕ್ಕೆ ಇಸ್ರೋ ಸಜ್ಜಾಗಿದೆ. ಈಗಾಗಲೇ ಇದಕ್ಕೆ ಕೌಂಟ್​ ಡೌನ್ ಶುರುವಾಗಿದ್ದು, ಶ್ರೀಹರಿ ಕೋಟಾದ ಮೊದಲನೇ ಲಾಂಚ್​ ಪ್ಯಾಡ್​ನಿಂದ ಅಪರಾಹ್ನ 3.02 ಗಂಟೆಗೆ ಉಡಾವಣೆಯಾಗಲಿದೆ.

ಇಒಎಸ್​-01 ಉಪಗ್ರಹ ಈ ಮೊದಲು ರಿಯಾಸ್ಯಾಟ್​-2ಬಿಆರ್​2 ಆಗಿತ್ತು. ಅದರಲ್ಲಿ ಸಿಂಥೆಟಿಕ್​ ಅಪರ್ಚರ್​ ರಾಡಾರ್ ಇದ್ದು, ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಫೋಟೋ ತೆಗೆಯುವ ಸಾಮರ್ಥ್ಯ ಹೊಂದಿದೆ. ಹಗಲು ಮತ್ತು ರಾತ್ರಿ ನಿಗಾ ಇರಿಸುವ ದೃಷ್ಟಿಯಿಂದ ಈ ಉಪಗ್ರಹ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಎಲ್ಲ ರೀತಿಯ ನಾಗರಿಕ ಚಟುವಟಿಕೆಗಳೂ ಇದರಲ್ಲಿ ದಾಖಲಾಗಲಿವೆ. ಭದ್ರತೆ, ಸುರಕ್ಷತೆಯ ದೃಷ್ಟಯಿಂದ ನಿಗಾ ಇರಿಸುವುದಕ್ಕೆ ಇದನ್ನು ಉಪಯೋಗಿಸಲಾಗುತ್ತಿದೆ. ಇಂದಿನ ಉಡಾವಣೆಯೊಂದಿಗೆ ಒಟ್ಟಾರೆಯಾಗಿ ಒಟ್ಟು 328 ವಿದೇಶಿ ಉಪಗ್ರಹ ಉಡಾವಣೆ ಮಾಡಿದ ಕೀರ್ತಿ ಇಸ್ರೋ ಗಿದೆ.

Exit mobile version