ನಾವು ನೀವೆಲ್ಲಾ ಅಡುಗೆಗೆ ಬಳಸುವ ಸ್ಪೈಸಿ ಪದಾರ್ಥಗಳು (Spicy Foods) ಆರೋಗ್ಯಕ್ಕೆ ಒಳ್ಳೆಯದಾ (MDH-Everest Banned-Hongkong) ಎನ್ನುವ ಪ್ರಶ್ನೆ ಮೂಡಿದೆ? ಕೆಲವು ಬ್ರಾಂಡ್ಗಳ
ಮಸಾಲೆ ಪದಾರ್ಥಗಳನ್ನು ಅಡುಗೆಯಲ್ಲಿ ಬಳಸುವುದಕ್ಕೆ ಇಷ್ಟ ಪಡ್ತಿವಿ ಇದೀಗ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದ ಬೆನ್ನಲ್ಲೇ, ಭಾರತದ ಜನಪ್ರಿಯ ಎರಡು ರೆಡಿಮೇಡ್ ಮಸಾಲೆ ಕಂಪನಿಗಳ
ಪ್ರಾಡೆಕ್ಟ್ಗಳು (MDH-Everest Banned-Hongkong) ವಿದೇಶದಲ್ಲಿ ಬ್ಯಾನ್ (Ban) ಆಗಿದೆ.

ಹಾಂಗ್ ಕಾಂಗ್ ಸರ್ಕಾರ, MDH ಮತ್ತು ಎವರೆಸ್ಟ್ಗಳ (Everest) ಸ್ಪೈಸಿ ಪ್ರಾಡಕ್ಟ್ಗಳನ್ನು ಬ್ಯಾನ್ ಮಾಡಿದ್ದು, ತನ್ನ ನಾಗರಿಕರ ಆರೋಗ್ಯ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿದೆ ಹಾಂಗ್ ಕಾಂಗ್ನ
ಫುಡ್ ಸೇಫ್ಟಿ ವಾಚ್ಡಾಗ್ (Food safety watchdog) ಬ್ಯಾನ್ ಮಾಡಿ ಆದೇಶ ಹೊರಡಿಸಿದೆ.
MDH ಪ್ರಾಡೆಕ್ಟ್ನ ಮೂರು ಪೌಡರ್ಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ ಅಂಶಗಳು ಪತ್ತೆಯಾಗಿದ್ದು, ಮದ್ರಾಸ್ ಕರಿ ಪೌಡರ್ (Madras Curry Powder), ಮಿಕ್ಸ್ಡ್ ಮಸಾಲಾ ಪೌಡರ್ (Mixed Masala
Powder), ಸಾಂಬರ್ ಮಸಾಲ (Sambhar Masala)ದಲ್ಲಿ ಕ್ರಿಮಿನಾಶಕಕ್ಕೆ ಬಳಸುವ ಕೆಮಿಕಲ್ಸ್ ಪತ್ತೆಯಾಗಿದೆ. ಜೊತೆಗೆ ಎವರೆಸ್ಟ್ನ ಫಿಶ್ ಕರಿ ಮಸಾಲಾದಲ್ಲೂ (Ethylene oxide) ಅಂಶ ಪತ್ತೆಯಾಗಿದೆ
ಎಂದು ಆಹಾರ ಸಂಸ್ಕರಣಾ ಕೇಂದ್ರ (Centre for Food Safety) ಏಪ್ರಿಲ್ 5 ರಂದು ಘೋಷಣೆ ಮಾಡಿತ್ತು.

ಈ ಬಗ್ಗೆ ವೈಜ್ಞಾನಿಕ ಪ್ರಯೋಗಾಲಯದಲ್ಲಿ ದೃಢಪಟ್ಟ ಬೆನ್ನಲ್ಲೇ, ಹಾಂಗ್ ಕಾಂಗ್ (Hong Kong) ಆಹಾರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದೆ. ಹಾಂಗ್ ಕಾಂಗ್ನಲ್ಲಿ ಭಾರತದ ಎವರೆಸ್ಟ್ ಮತ್ತು
ಎಂಡಿಹೆಚ್ ಪ್ರಾಡೆಕ್ಟ್ಗಳನ್ನು ನಿಷೇಧ ಮಾಡಿದೆ.
ಹೆಚ್ಚುವರಿಯಾಗಿ, ಎವರೆಸ್ಟ್ ಗ್ರೂಪ್ನ ಫಿಶ್ ಕರಿ (Fish Curry) ಮಸಾಲಾದಲ್ಲಿ ಕೀಟನಾಶಕ ಇರುವುದು ಕಂಡುಬಂದಿದ್ದು, ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ನಿಂದ (International
Agency for Research on Cancer) ಗ್ರೂಪ್ 1 ಕಾರ್ಸಿನೋಜೆನ್ ಎಂದು ವರ್ಗೀಕರಿಸಲಾದ ಎಥಿಲೀನ್ ಆಕ್ಸೈಡ್, ಸ್ತನ ಕ್ಯಾನ್ಸರ್ನ ಹೆಚ್ಚಿನ ಅಪಾಯವನ್ನು ಒಳಗೊಂಡಂತೆ ಗಂಭೀರವಾದ ಆರೋಗ್ಯ
ಅಪಾಯಗಳನ್ನು ಉಂಟುಮಾಡುತ್ತದೆ.
ಇದನ್ನು ಓದಿ: ಭಾರತೀಯ ಮಿಲಿಟರಿಯಿಂದ ಇಂಜಿನಿಯರಿಂಗ್ ಪದವೀಧರರ ನೇಮಕಾತಿ : ಇಂದೇ ಅರ್ಜಿ ಸಲ್ಲಿಸಿ