ಭಾರತೀಯ ಸೇನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ (Indian Army Recruitment 2024) ನೇಮಕಾತಿಗೆ ಅಧಿಕೃತ ಅರ್ಜಿ ಆಹ್ವಾನಿಸಲಾಗಿದೆ. ಕೇವಲ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಮತ್ತು
ಇನ್ನೂ ಕೆಲವು ಹುದ್ದೆಗಳನ್ನು ಪರ್ಮನೆಂಟ್ ಕಮಿಷನ್ಗೆ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
140ನೇ ಬ್ಯಾಚ್ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ (Indian Army Recruitment 2024) ಇದಾಗಿದ್ದು, 2025ನೇ ಸಾಲಿನ ಜನವರಿ ತಿಂಗಳಲ್ಲಿ ಆರಂಭವಾಗಲಿದೆ.
ನೇಮಕಾತಿ ಪ್ರಾಧಿಕಾರ : ಶಾರ್ಟ್ ಸರ್ವೀಸ್ ಕಮಿಷನ್
ಹುದ್ದೆ ಹೆಸರು : ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್
ಹುದ್ದೆಗಳ ಸಂಖ್ಯೆ : 30
ವಿದ್ಯಾರ್ಹತೆ : ಯಾವುದೇ ಇಂಜಿನಿಯರಿಂಗ್ ಪದವಿ
ಕಮಿಷನ್ : ಪರ್ಮನೆಂಟ್ ಕಮಿಷನ್
ವಯೋಮಿತಿ : ಕನಿಷ್ಠ 20 ವರ್ಷ ಪೂರೈಸಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.
ವೇತನ : ಅಭ್ಯರ್ಥಿಗಳಿಗೆ ತರಬೇತಿ ಸಂದರ್ಭದಲ್ಲಿ ಮಾಸಿಕ ರೂ.56,100 ಸ್ಟೈಫಂಡ್ ನೀಡಲಾಗುತ್ತದೆ.
ನೇಮಕಾತಿ ವಿಧಾನ : ಲಿಖಿತ ಪರೀಕ್ಷೆ ಜೊತೆಗೆ ಎಸ್ಎಸ್ಬಿ ವತಿಯಿಂದ ನೇರ ಸಂದರ್ಶನ ನಡೆಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ನೀಡಿ ನಂತರ, ಪರ್ಮನೆಂಟ್
ಕಮಿಷನ್ಗೆ ಸೇರಿಸಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 10-04-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 09-05-2024
ಅರ್ಜಿ ಸಲ್ಲಿಸಲು ಭಾರತೀಯ ಮಿಲಿಟರಿ ಅಧಿಕೃತ ವೆಬ್ ವಿಳಾಸ https://joinindianarmy.nic.in ಕ್ಕೆ ಭೇಟಿ ನೀಡಿ.
ಇದನ್ನು ಓದಿ: ಸಿದ್ದು-ಡಿಕೆಯ ಅತಿಯಾದ ಓಲೈಕೆಯಿಂದಲೇ ಮತಾಂಧ ಬ್ರದರ್ಸ್ಗಳು ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ – ಬಿಜೆಪಿ ವಾಗ್ದಾಳಿ