ಮೆಗಾ ಕ್ಯಾಬಿನೆಟ್‌ ಪುನರ್‌ರಚನೆ ಅಂತಿಮ; ಇಂದು ಸಂಜೆ ಅಂತಿಮ ಪಟ್ಟಿ ಬಿಡುಗಡೆ

ನವದೆಹಲಿ, ಜು. 07: ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅವಧಿಯ ಮೊದಲ ಮೆಗಾ ಕ್ಯಾಬಿನೆಟ್ ಪುನರ್ರಚನೆ ಅಂತಿಮವಾಗಿದ್ದು, ಈ ಬಾರಿಯ ಕ್ಯಾಬಿನೆಟ್​ನಲ್ಲಿ ಒಬಿಸಿ, ಎಸ್‌ಸಿ – ಎಸ್‌ಟಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯ ರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಕ್ಯಾಬಿನೆಟ್​ನಲ್ಲಿ ಅತ್ಯಂತ ಕಿರಿಯರಿಗೆ, ಯುವಕರಿಗೆ ಸ್ಥಾನ ನೀಡಲಾಗಿದೆ ಎಂದು ತಿಳಿದುಬಂ ದಿದೆ. ಇಂದು ಸಂಜೆ 6 ಗಂಟೆಗೆ ಘೋಷಿಸಲಿರುವ ಹೊಸ ಕ್ಯಾಬಿನೆಟ್‌ನಲ್ಲಿ ದೀನದಲಿತ ಮತ್ತು ಬುಡಕಟ್ಟು ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ ಎಂದು ಮೂಲಗಳು ಸಿಎನ್‌ಎನ್-ನ್ಯೂಸ್ 18 ಗೆ ತಿಳಿಸಿವೆ. ಪರಿಶಿಷ್ಟ ಜಾತಿ ಸಮುದಾಯಗಳ ದಾಖಲೆಯ ಪ್ರಾತಿನಿಧ್ಯಕ್ಕೂ ಕೌನ್ಸಿಲ್ ಸಾಕ್ಷಿಯಾಗಲಿದೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಸುಮಾರು 24 ಸಂಸದರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲಾಗುವುದು ಎಂಬ ಮಾಹಿತಿ ಇದೆ.

ಪ್ರತಿಯೊಂದು ರಾಜ್ಯ ಮತ್ತು ಅವುಗಳಿಗೆ ಸಂಬಂಧಿತ ಪ್ರದೇಶಗಳ ಮೇಲೆ ಕೇಂದ್ರೀಕರಿಸುವ ಮೂಲಕ ಸಣ್ಣ ಸಮುದಾಯಗಳಿಗೆ ಸಹ ಪ್ರಾತಿನಿಧ್ಯವನ್ನು ನೀಡುವುದು ಸರ್ಕಾರದ ಯೋಜನೆಯಾಗಿದೆ. ಸಂಸತ್​ನಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲಾಗುವುದು ಮತ್ತು ಯುವಕರಿಗೆ ಹಚ್ಚಿನ ಅವಕಾಶ ನೀಡಲು ಬಿಜೆಪಿ ಹೈಕಮಾಂಡ್ ಮನಸ್ಸು ಮಾಡಿದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಸಂಜೆ 5 ಗಂಟೆಗೆ ಉನ್ನತ ಸಚಿವರು ಮತ್ತು ಬಿಜೆಪಿ ಮುಖ್ಯಸ್ಥರೊಂದಿಗೆ ಅವರ ನಿವಾಸದಲ್ಲಿ ಸಭೆ ನಡೆಸಿದರು. ಕಳೆದ ಹಲವು ವಾರಗಳಿಂದ ಸಂಪುಟವನ್ನು ಪುರ್ರಚನೆ ಮಾಡುವ ಸಂಬಂಧ ಒತ್ತಾಯಗಳು ಕೇಳಿ ಬರುತ್ತಲೇ ಇದೆ. ಹೀಗಾಗಿ ಪ್ರಧಾನಿ ಮೋದಿ ಸಂಪುಟ ಪುನರ್ರಚನೆ ಕೊನೆಗೂ ಮನಸ್ಸು ಮಾಡಿದ್ದಾರೆ. ಹೀಗಾಗಿ ನಿನ್ನೆಯ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇತರರು ಸಭೆಯಲ್ಲಿ ಭಾಗವಹಿ ಚರ್ಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್​ನಲ್ಲಿ ಮಿತ್ರ ಪಕ್ಷವಾದ ಜೆಡಿಯು ಗೆ ಸಾಕಷ್ಟು ನಿರೀಕ್ಷೆ ಇದೆ. ತಮ್ಮ ಪಕ್ಷದವರಿಗೆ ಕೇಂದ್ರದ ಕ್ಯಾಬಿನೆಟ್​ನಲ್ಲಿ ಅಧಿಕ ಸ್ಥಾನ ಬೇಕು ಎಂದು ಬಿಹಾರದ ಸಿಎಂ ನಿತೀಶ್​ ಕುಮಾರ್​ ತನ್ನ ಮಹತ್ವಾಕಾಂಕ್ಷೆಯನ್ನು ಈಗಾಗಲೇ ಬಿಜೆಪಿ ಹೈಕಮಾಂಡ್​ಗೆ ತಿಳಿಸಿದ್ದಾರೆ. ಆದರೂ ಪ್ರಧಾನಿ ಮೋದಿ ಅವರ ನಿರ್ಧಾರಕ್ಕೆ ತಾವು ಬದ್ಧ ಎಂದು ನಿತೀಶ್​ ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿತೀಶ್ ಕುಮಾರ್, “ಬಿಜೆಪಿಯ ನಿಯಮಗಳಿಗೆ ಅನುಗುಣವಾಗಿ ಈ ಬಾರಿ ಸಂಯುಕ್ತ ಜನತಾದಳವು ಕೇಂದ್ರ ಸರ್ಕಾರದ ಭಾಗವಾಗಲಿದೆ ಎಂಬ ವಿಶ್ವಾಸವಿದೆ. ಜೊತೆಗೆ ನನಗೆ ಯಾವುದೇ ಫಾರ್ಮಲಾಗಳ ಬಗ್ಗೆ ತಿಳಿದಿಲ್ಲ. ಆದರೆ, ಗೌರವಾನ್ವಿತ ಪ್ರಧಾನ ಮಂತ್ರಿ ಏನೇ ನಿರ್ಧರಿಸಿದರೂ ನಾವು ಒಪ್ಪಿಕೊಳ್ಳುತ್ತೇವೆ.

ಜನತಾದಳದ ಪ್ರಮುಖ ಮತ ಬ್ಯಾಂಕ್‌ಗಳಾಗಿರುವ, ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಮಹಾದಲಿತರು ಮತ್ತು ಒಬಿಸಿಗಳ (ಇತರ ಹಿಂದುಳಿದ ವರ್ಗಗಳು) ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಗರಿಷ್ಠ ಸ್ಥಾನಗಳನ್ನು ಪಡೆಯಲು ಬಿಜೆಪಿಯೊಂದಿಗೆ ಮಾತುಕತೆ ನಡೆಯುತ್ತಿದೆ” ಎಂದು ಅವರು ತಿಳಿಸಿದ್ದಾರೆ.

Exit mobile version