ಮೇಘನಾ ರಾಜ್ ಕುಟುಂಬಕ್ಕೆ ಕೊರೊನಾ ಆಘಾತ

ಬೆಂಗಳೂರು, ಡಿ. 08: ಮಗನ ಆಗಮನದ ಸಂತಸದಲ್ಲಿದ್ದ ನಟಿ ಮೇಘನಾ ರಾಜ್ ಕುಟುಂಬಕ್ಕೆ ಕೊರೊನಾ ಆತಂಕ ಎದುರಾಗಿದೆ. ನಟಿ ಮೇಘನಾ ರಾಜ್‌, ಪುತ್ರ, ಸುಂದರ್‌ ರಾಜ್‌, ಪ್ರಮಿಳಾ ಜೋಷಾಯ್‌ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ನಟಿ ಪ್ರಮಿಳಾ ಜೋಷಾಯ್‌ ಅವರಿಗೆ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಬೆನ್ನಲ್ಲೇ ಎಲ್ಲರಿಗೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ಇರುವುದು ಖಚಿತವಾಗಿದೆ. ಪ್ರಮೀಳಾ
ಜೋಷಾಯ್‌ ಅವರು ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದರ ಬೆನ್ನಲ್ಲೇ ಕುಟುಂಬದ ಇತರರಿಗೂ ಸೋಂಕು ಇರುವುದು ದೃಢಪಟ್ಟಿರುವುದು ಕುಟುಂಬ ಸದಸ್ಯರಲ್ಲಿ ಆತಂಕ ಮೂಡಿಸಿದೆ. яндекс

Exit mobile version