ಜಮ್ಮು-ಕಾಶ್ಮೀರದ ಶಾಲೆಗಳಲ್ಲಿ ಗಾಂಧಿ ಭಜನೆಗೆ ಆದೇಶ ; ಇದು ಹಿಂದುತ್ವದ ಅಜೆಂಡಾ ಎಂದ ಮುಫ್ತಿ ಮೆಹಬೂಬಾ

mufti

Jammu Kashmir : ಜಮ್ಮು-ಕಾಶ್ಮೀರದ(Jammu Kashmir) ಶಾಲೆಗಳಲ್ಲಿ ಭಜನೆ ಹಾಡುವುದಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಅಧಿಕೃತ ಆದೇಶವನ್ನು ಜಮ್ಮು ಮತ್ತು ಕಾಶ್ಮೀರದ ಸರ್ಕಾರ ಹೊರಡಿಸಿದೆ. ಆದರೆ ಈ ಆದೇಶದ ವಿರುದ್ದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ(Mehbooba mufti controversial statement) ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಾಲೆಗಳಲ್ಲಿ ಭಜನೆ ಹಾಡುವುದಕ್ಕೆ ಅವಕಾಶ ನೀಡಬಾರದು ಎಂದಿದ್ದಾರೆ.

ಇನ್ನು ಪಿಡಿಪಿ ಅಧ್ಯಕ್ಷೆ(PDP President) ಮೆಹಬೂಬಾ ಮುಫ್ತಿ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿರುವ ನ್ಯಾಷನಲ್ ಕಾನ್ಫರೆನ್ಸ್(National Conference) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ(Farookh Abdullaha), “ನಾವು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ನಂಬಲಿಲ್ಲ.

ಇದನ್ನೂ ಓದಿ : https://vijayatimes.com/benefits-of-vitamin-c/

ಭಾರತ ಕೋಮುವಾದಿ ಅಲ್ಲ ಮತ್ತು ಭಾರತ ಜಾತ್ಯತೀತ. ನಾನು ಭಜನೆ ಮಾಡುತ್ತಿದ್ದೇನೆ. ನಾನು ಭಜನೆ ಮಾಡುತ್ತಿದ್ದರೆ ಅದು ತಪ್ಪೇ?” ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ನಾವು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ನಂಬಲಿಲ್ಲ. ಹಿಂದೂ ವ್ಯಕ್ತಿ ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿದರೆ, ಅವನು ಮುಸ್ಲಿಂ ಆಗಿ ರೂಪಾಂತರಗೊಳ್ಳುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.

ಇದು ಬಿಜೆಪಿಯ(BJP) ‘ಹಿಂದುತ್ವ’ ಅಜೆಂಡಾ : ಮೆಹಬೂಬಾ ಟೀಕೆ! ಕಾಶ್ಮೀರದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಮಹಾತ್ಮ ಗಾಂಧಿಯವರ(Mahatma Gandhi) ನೆಚ್ಚಿನ ಭಜನೆ ಎಂದು ಪರಿಗಣಿಸಲಾದ ‘ರಘುಪತಿ ರಾಘವ್ ರಾಜಾ ರಾಮ್’ ಗೀತೆಯನ್ನು ಪಠಿಸುತ್ತಿರುವ ವಿಡಿಯೋವನ್ನು ಟ್ವೀಟ್‌(Tweet) ಮಾಡಿರುವ ಮೆಹಬೂಬಾ ಮುಫ್ತಿ ಅವರು,

https://youtu.be/aSn4h_sSjpA ನಮ್ಮ ದೇಶದ ರಾಷ್ಟ್ರಪತಿ ಯಾರು?

“ಧಾರ್ಮಿಕ ವಿದ್ವಾಂಸರನ್ನು ಜೈಲಿಗಟ್ಟುವುದು, ಮಸೀದಿಯನ್ನು ಮುಚ್ಚುವುದು ಮತ್ತು ಇಲ್ಲಿನ ಶಾಲಾ ಮಕ್ಕಳಿಗೆ ಹಿಂದೂ ಗೀತೆಗಳನ್ನು ಹಾಡಲು ನಿರ್ದೇಶಿಸುವುದು, ಹಿಂದುತ್ವದ ಅಜೆಂಡಾವನ್ನು ಬಹಿರಂಗಪಡಿಸುತ್ತದೆ” ಎಂದು ಟೀಕಿಸಿದ್ದಾರೆ.
Exit mobile version