ಕಾಣಿಸಿದನ್ನೆಲ್ಲ ಲೈವ್‌ ಮಾಡುವ, ಫೋಟೋ ತೆಗೆಯುವ ಹೊಸ ಕನ್ನಡಕ ಬಿಡುಗಡೆ ಮಾಡಿದ ಮೆಟಾ

Washington: ಮೆಟಾ ಕಂಪನಿಯು ಫೇಸ್‌ಬುಕ್‌ನ ಒಡೆತನ ಹೊಂದಿದ್ದು, ‘ರೇಬಾನ್‌ ಮೆಟಾ ಸ್ಮಾರ್ಟ್‌ ಗ್ಲಾಸ್‌’ (Raybon Meta Smart Glass) ಹೆಸರಿನ ಹೊಸ ಕನ್ನಡಕವನ್ನು ಬಿಡುಗಡೆ ಮಾಡಿದೆ. ಈ ಕನ್ನಡಕವನ್ನು ಧರಿಸಿದರೆ ನೋಡಿದ್ದನ್ನೆಲ್ಲ ಫೇಸ್‌ಬುಕ್‌ನಲ್ಲಿ ಲೈವ್‌ ಮಾಡಬಹುದಾಗಿದ್ದು, ಬೇಕೆನಿಸಿದ ಫೋಟೋವನ್ನೂ ಕ್ಲಿಕ್ಕಿಸಬಹುದಾಗಿದೆ. ಎಐ ಬಳಸಿ ಈ ನೂತನ ಸ್ಮಾರ್ಟ್‌ ಗ್ಲಾಸ್‌ (Smart Glass) ಅನ್ನು ಮೆಟಾ ಅಭಿವೃದ್ಧಿಪಡಿಸಲಾಗಿದೆ.

ಇತ್ತೀಚಿಗೆ ಗೂಗಲ್‌ ಮತ್ತು ಮೈಕ್ರೋಸಾಫ್ಟ್‌ ಕಂಪನಿಗಳು ಈ ತಂತ್ರಜ್ಞಾನದಲ್ಲಿ ಭಾರೀ ಹೂಡಿಕೆ ಮಾಡುತ್ತಿದ್ದು, ಈ ಓಟದಲ್ಲಿ ಫೇಸ್‌ಬುಕ್‌ (Facebook) ಒಡೆತನ ಹೊಂದಿರುವ ಮೆಟಾ ಸ್ವಲ್ಪ ಹಿಂದುಳಿದಿದೆ. ಆದರೆ ಮೆಟಾ ತನ್ನದೇ ಆದ ಎಐ ಅಸಿಸ್ಟೆಂಟ್‌ (AI Assistant) ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಇದಕ್ಕೆ ಮೆಟಾ ಎಐ ಎಂದೇ ಹೆಸರಿಡಲಾಗಿದೆ.

ತುಂಬಾ ಹಗುರ ಮತ್ತು ಆರಾಮದಾಯಕವಾಗಿದ್ದು, ಮೆಟಾದ ಮೊದಲ ಸ್ಮಾರ್ಟ್‌ ಗ್ಲಾಸ್‌ ಇದಾಗಿದೆ ಇವುಗಳನ್ನು ಮುಂದಿನ ಪೀಳಿಗೆಯ ಸ್ಮಾರ್ಟ್‌ ಗ್ಲಾಸ್‌ ಎಂದೂ ವಿವರಿಸಲಾಗಿದೆ. ಈ ಸ್ಮಾರ್ಟ್‌ ಗ್ಲಾಸ್‌ಗಳನ್ನು ಧರಿಸಿ ನೀವು ನೋಡುವ ಎಲ್ಲವನ್ನೂ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಲೈವ್‌ ಸ್ಟ್ರೀಮ್‌ (Live Stream) ಮಾಡಬಹುದು.

ಇದರಲ್ಲಿ 12 ಮೆಗಾ ಪಿಕ್ಸೆಲ್‌ ಅಲ್ಟ್ರಾ ವೈಡ್‌ ಕ್ಯಾಮೆರಾವನ್ನು ಬಳಸಲಾಗಿದ್ದು, ಈ ಸ್ಮಾರ್ಟ್‌ ಗ್ಲಾಸ್‌ ಬಳಸಿ ಫೋಟೋಗಳನ್ನು ತೆಗೆಯಬಹುದು. ವಿಡಿಯೋಗಳನ್ನು ರೆಕಾರ್ಡ್‌ ಮಾಡಬಹುದು. ‘Qualcomm Snapdragon AR 1‘ ಪ್ಲಾಟ್‌ಫಾರ್ಮ್‌ (Platform) ಬಳಕೆಯಿಂದಾಗಿ, ಫೋಟೋಗಳು ಮತ್ತು ವೀಡಿಯೊಗಳು ಉತ್ತಮ ಸ್ಪಷ್ಟತೆಯೊಂದಿಗೆ ಬರುತ್ತವೆ.

ನೀವು WhatsApp, Messengerನಲ್ಲಿ ಈ ಸ್ಮಾರ್ಟ್‌ ಗ್ಲಾಸ್‌ ಮೂಲಕ ಇತರರೊಂದಿಗೆ ಸಂವಹನ ನಡೆಸಬಹುದು. ಬ್ರೌಸಿಂಗ್‌ (Browsing) ಕೂಡ ಮಾಡಬಹುದಾಗಿದ್ದು, Meta AI ಅಸಿಸ್ಟೆಂಟ್‌ ನಿಮಗೆ ಅಗತ್ಯವಿರುವ ಸಹಾಯವನ್ನು ನೀಡುತ್ತದೆ. ಈ ಸ್ಮಾರ್ಟ್‌ ಗ್ಲಾಸ್‌ಗಳು ಚಾರ್ಜಿಂಗ್‌ ಕೇಸ್‌ನೊಂದಿಗೆ ಬರುತ್ತವೆ. ಒಂದೇ ಚಾರ್ಜ್‌ನಲ್ಲಿ 36 ಗಂಟೆಗಳವರೆಗೆ ಬಳಸಬಹುದು.

ಹೇ ಮೆಟಾ ಎಂದರೆ ಸಾಕು, ಈ ಮೆಟಾ ಎಐನಿಂದ ಸಹಾಯ ಪಡೆಯಬಹುದಾಗಿದ್ದು, ನಿಮ್ಮ ಧ್ವನಿಯ ಮೂಲಕ ಸಂವಹನವನ್ನು ಮುಂದುವರಿಸಬಹುದು ಮತ್ತು ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೂಡ ಪಡೆಯಬಹುದು.

ಭವ್ಯಶ್ರೀ ಆರ್.ಜೆ

Exit mobile version