ಇಂದು(ಅ.03) ಮುಂಜಾನೆ ನಮ್ಮ ಮೆಟ್ರೊ (Namma Metro) ಹಸಿರು ಮಾರ್ಗದಲ್ಲಿ ರೀ ರೈಲು ಹಳಿ ತಪ್ಪಿತ್ತು. ಹೌದು, ಇದೀಗ ಹಳಿಯನ್ನು ಹೈಡ್ರಾಲಿಕ್ ಕ್ರೇನ್ (Hydraulic Crane) ಬಳಸಿ ಸ್ಥಳಾಂತರಿಸಲಾಗಿದೆ. ಈ ಹಿನ್ನಲೆ ಮೆಟ್ರೋ ಮಾರ್ಗದ ಸುರಕ್ಷತೆಯನ್ನು ಪರಿಶೀಲಿಸಿ, ಇದೀಗ ಎಂದಿನಂತೆ ಪ್ರಾರಂಭವಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ರಾಜಾಜಿನಗರ ನಿಲ್ದಾಣದ ಟ್ರ್ಯಾಕ್ನಲ್ಲಿ ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ತೊಂದರೆ ಉಂಟಾದಾಗ ಅದನ್ನು ಸರಿಪಡಿಸಲು ಬಳಸುವ ರೀ ರೈಲು ಹಳಿ ತಪ್ಪಿದ್ದು, ಇದೀಗ ಹಳಿಯನ್ನು ಹೈಡ್ರಾಲಿಕ್ ಕ್ರೇನ್ ಬಳಸಿ ಸ್ಥಳಾಂತರಿಸಲಾಗಿದೆ. ಕ್ರೇನ್ ಮೂಲಕ ರೀ ರೈಲು ಲಿಫ್ಟಿಂಗ್ (Lifting) ಕಾರ್ಯ ಶುರು ಮಾಡಿದ್ದ ಬಿಎಂಆರ್ಸಿಎಲ್
ದೊಡ್ಡ ಕ್ರೇನ್ ಮೂಲಕ ನಾಲ್ಕು ಕಡೆಗೂ ಬೆಲ್ಟ್ ಬಳಸಿ ನಿಧಾನವಾಗಿ ಮೇಲೆತ್ತಿ, ನಂತರ ಯಶಸ್ವಿಯಾಗಿ ರೀ ರೈಲನ್ನು ಕೆಳಗೆ ಇಳಿಸಲಾಗಿದೆ. ಆದರೆ ಈ ರೀತಿಯ ಸಮಸ್ಯೆ ಯಾವತ್ತೂ ಆಗಿರಲಿಲ್ಲ. ರೀ ರೈಲು ರಸ್ತೆ ಮತ್ತು ಟ್ರ್ಯಾಕ್ ಮೇಲೆ ಸಂಚರಿಸುತ್ತೆ. ನಿನ್ನೆ ಟ್ರ್ಯಾ ಕ್ (Track) ಮೇಲೆ ವೀಲ್ ಜಾಮ್ ಆಗಿತ್ತು. ಇದರಿಂದ ಸಮಸ್ಯೆಯಾಗಿತ್ತು.
‘ಆಪರೇಷನ್ ಆಂಡ್ ಮೆಂಟೇನೆನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಂಕರ್ ಅವರು ಘಟನೆ ಕುರಿತು ಮಾತನಾಡಿದ್ದು, ಅರ್ಧ ಗಂಟೆಯ ಬಳಿಕ ಎಂದಿನಂತೆ ಮೆಟ್ರೋ ಸಂಚರಿಸುತ್ತದೆ. ಸದ್ಯಕ್ಕೆ ಎಲ್ಲಾ ದೋಷಗಳು ಕ್ಲಿಯರ್ ಆಗಿದ್ದು, ಟ್ರ್ಯಾಕ್ ನಲ್ಲಿ ಯಾವ ಸಮಸ್ಯೆ ಇಲ್ಲ. ರೀ ರೈಲಿನ ಚಕ್ರ ಸಿಲುಕಿದ್ದರಿಂದ ಸಮಸ್ಯೆಯಾಗಿತ್ತು ಎಂದಿದ್ದರು.
ದೆಹಲಿ ಎಕ್ಸ್ ಪರ್ಟ್ ಗಳ ಜೊತೆ ಸಭೆ
ಇಂಜಿನಿಯರ್ಗಳು (Engineer) ಹಳಿ ತಪ್ಪಿದ ರೀ ರೈಲ್ ಸರಿಪಡಿಸಲು ಹರಸಾಹಸ ಪಟ್ಟಿದ್ದು, ಹಳಿ ತಪ್ಪಿರುವ ರೀ ರೈಲ್ ವೆಹಿಕಲ್ ಹಳಿಗೆ ತರುವ ಬಗ್ಗೆ ಹಿರಿಯ ಇಂಜಿನಿಯರ್ ಗಳಿಂದ ಮಾಹಿತಿ ಕೂಡ ಸಂಗ್ರಹಿಸಿದ್ದರು. ಹೇಗೆ ಟ್ರ್ಯಾಕ್ ಗೆ ತರುವುದು ಎನ್ನುವುದರ ಬಗ್ಗೆ ದೆಹಲಿ ಎಕ್ಸ್ ಪರ್ಟ್ ಗಳ ಜೊತೆ ವರ್ಚುವಲ್ ಸಭೆ ನಡೆಸಿ ಸಮಾಲೋಚನೆ ನಡೆಸಲಾಗಿತ್ತು. ಈಗ ಹಸಿರು ಮಾರ್ಗ ದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷ ಯಶಸ್ವಿಯಾಗಿದ್ದು, ಎಂದಿನಂತೆ ಸಂಚಾರ ಆರಂಭವಾಗಲಿದೆ.
ಭವ್ಯಶ್ರೀ ಆರ್.ಜೆ