ಪಂಜಾಬ್, ಮೇ. 21: ಭಾರತೀಯ ವಾಯುಪಡೆಯ (IAF) ಮಿಗ್-21 ಯುದ್ಧವಿಮಾನ ಪಂಜಾಬ್ನ ಮೋಗ ಜಿಲ್ಲೆಯಲ್ಲಿ ಪತನಗೊಂಡಿದೆ.
ಪಂಜಾಬ್‌ನ ಮೋಗ ಜಿಲ್ಲೆಯ ಲಂಗಿಯಾನ ಗ್ರಾಮದಲ್ಲಿ ನಡೆದ Mig-21 ವಿಮಾನ ದುರಂತದಲ್ಲಿ ಐಎಎಫ್ ಪೈಲಟ್ ಸ್ಕ್ವಾರ್ಡನ್ ಲೀಡರ್ ಅಭಿನವ್ ಚೌಧರಿ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೈಲಟ್ ಅಭಿನವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯರಾತ್ರಿ 1 ಗಂಟೆಗೆ ಮಿಗ್-21 ವಿಮಾನ ಪತನವಾಗಿದೆ. ಈ ಬಗ್ಗೆ ಭಾರತೀಯ ವಾಯುಪಡೆ ಟ್ವಿಟ್ಟರ್ನಲ್ಲಿ ಖಚಿತಪಡಿಸಿದೆ.