Bengaluru: ಬಹುತೇಕ ಹೊಸ ಸೈನಿಕ ಶಾಲೆಗಳ ಹಸ್ತಾಂತರ ಕುರಿತು ಮಹತ್ವದ ಮಾಹಿತಿಯೊಂದು ಕೇಂದ್ರ ಸರ್ಕಾರದ ಪತ್ರಿಕಾ ಪ್ರಕಟಣೆಗಳು ಮತ್ತು ಮಾಹಿತಿ ಹಕ್ಕು (RTI) ಪ್ರತ್ಯುತ್ತರಗಳಿಂದ ಹೊರ ಬಿದ್ದಿವೆ. ಇನ್ನು ದಿ ರಿಪೋರ್ಟರ್ಸ್ ಕಲೆಕ್ಟಿವ್ ವರದಿಯ ಪ್ರಕಾರ 62% ಹೊಸ ಸೈನಿಕ ಶಾಲೆಗಳ ಸಂಘ ಪರಿವಾರ ಬಿಜೆಪಿ (BJP) ನಾಯಕರ ಅಂಗ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಹಸ್ತಾಂತರ ಮಾಡಿದೆ.
ವೃಂದಾವನದಲ್ಲಿರುವ ಸಿದ್ಧಾಂತಿ ಸಾಧ್ವಿ ಋತಂಭರಾ ಬಾಲಕಿಯರ ಶಾಲೆ ಮತ್ತು ಹಿಮಾಚಲ ಪ್ರದೇಶದ ಸೋಲನ್‌ನಲ್ಲಿರುವ ‘ರಾಜ್ ಲಕ್ಷ್ಮಿ ಸಂವಿದ್ ಗುರುಕುಲಂ (Raj Lakshmi Samvid Gurukulam)’ ಇತ್ತೀಚೆಗೆ ಸ್ವಾಯತ್ತ ಸಂಸ್ಥೆಯಾದ ಸೈನಿಕ್ ಸ್ಕೂಲ್ಸ್ ಸೊಸೈಟಿ (SSS) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಕನಿಷ್ಠ 40 ಶಾಲೆಗಳ ಪಟ್ಟಿಗೆ ಸೇರಿದೆ. ಸೈನಿಕ್ ಸ್ಕೂಲ್ಸ್ ಸೊಸೈಟಿ ರಕ್ಷಣಾ ಸಚಿವಾಲಯದ ಅಧೀನದ ಸ್ವಾಯುತ್ತ ಸಂಸ್ಥೆಯಾಗಿದೆ. ಇದರಲ್ಲಿ ಸೈನಿಕ್ ಶಾಲೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ನಡೆಸಲಾಗುತ್ತದೆ.
ಇನ್ನು ಇದುವರೆಗೆ 40 ಹೊಸ ಸೈನಿಕ ಶಾಲಾ (Militory School) ಒಪ್ಪಂದಗಳಲ್ಲಿ ಕನಿಷ್ಠ ಶೇಕಡಾ 62ರಷ್ಟು ರಾಷ್ಟ್ರೀಯ ಸ್ವಯಂಸೇವಕ ಸಂಘ (SSS) ಗೆ ಸಂಬಂಧಿಸಿದ ಶಾಲೆಗಳನ್ನು ಹಸ್ತಾಂತರಿಸಲಾಗಿದೆ ಎಂದು ಸಂಶೋಧನೆಗಳ ಮೂಲಕ ಪಡೆದ ಮಾಹಿತಿ ಬಹಿರಂಗವಾಗಿದೆ.
ಕೇಂದ್ರ ಸರ್ಕಾರವು ಈ ಶಾಲೆಗಳನ್ನು ನಡೆಸಲು 2021 ರಿಂದ ಅನುದಾನವನ್ನು ಪಡೆಯಲು ಆರಂಭಿಸಿದೆ. ಇದಕ್ಕಿಂತ ಆಘಾತಕಾರಿ ಸಂಗತಿ ಎಂದರೆ ಇದುವರೆಗಿನ 40 ಸೈನಿಕ ಶಾಲೆಯ ಒಪ್ಪಂದಗಳಲ್ಲಿ ಕನಿಷ್ಠ 62%ದಷ್ಟು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಮಿತ್ರ ಸಂಘಟನೆಗಳು, ಭಾರತೀಯ ಜನತಾ ಪಕ್ಷದ (BJP) ರಾಜಕಾರಣಿಗಳು, ಬಿಜೆಪಿ (BJP) ಜೊತೆಗಿನ ಮೈತ್ರಿ ಪಕ್ಷಗಳು ಮತ್ತು ನಾಯಕರು, ಹಿಂದುತ್ವ ಸಂಸ್ಥೆಗಳು, ಹಿಂದೂ ಧಾರ್ಮಿಕ ಸಂಘಟನೆಗಳ ಅಧೀನದ ಸಂಸ್ಥೆಗಳು, ನಾಯಕರು ಮತ್ತು ಹಿಂದುತ್ವಕ್ಕೆ ಸಂಬಂಧಿಸಿದ ಶಾಲೆಗಳಿಗೆ ಮಾತ್ರ ನೀಡಲಾಗಿದೆ.
ಇನ್ನು 6ನೇ ತರಗತಿಯಿಂದ 12 ನೇ ತರಗತಿಯವರೆಗೆ, ಮೆರಿಟ್-ಕಮ್-ಮೀನ್ಸ್ (Merit-cum-Means) ಆಧಾರದ ಮೇಲೆ ಸರ್ಕಾರ ಪ್ರತಿವರ್ಷ ಗರಿಷ್ಠ ರೂ 1.2 ಕೋಟಿ ಬೆಂಬಲ ನೀಡುತ್ತದೆ. 12ನೇ ತರಗತಿಯಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ವಾರ್ಷಿಕವಾಗಿ ನೀಡಲಾಗುವ ತರಬೇತಿ ಅನುದಾನವಾಗಿ ರೂ.10 ಲಕ್ಷಗಳ ಮೊತ್ತವನ್ನು ಒಳಗೊಂಡಿರುತ್ತದೆ. ಮಾಧ್ಯಮಿಕ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕವು ನಾಮಮಾತ್ರಕ್ಕೆ ರೂ. 13,800 ರಿಂದ ರೂ 2,47,900 ವರೆಗೆ ಇರುತ್ತದೆ ಎಂದು ಮಾಹಿತಿ ನೀಡಿದೆ.
RTI ಬಿಡುಗಡೆ ಮಾಡಿರುವ ಇನ್ನೊಂದು ಶಾಕಿಂಗ್ ಸಂಗತಿ ಏನೆಂದರೆ ಮೇ 05, 2022 ಮತ್ತು ಡಿಸೆಂಬರ್ (December) 27, 2023ರ ನಡುವೆ ಕನಿಷ್ಠ 40 ಶಾಲೆಗಳು ಸೈನಿಕ್ ಸ್ಕೂಲ್ಸ್ ಸೊಸೈಟಿಯಿಂದ ಅನುಮೋದನೆ ಪಡೆದಿದೆ. ಆ 40 ಶಾಲೆಗಳಲ್ಲಿ 11 ನೇರವಾಗಿ ಬಿಜೆಪಿಗೆ ಸಂಬಂಧಿಸಿದ ರಾಜಕಾರಣಿಗಳ ಒಡೆತನದಲ್ಲಿದೆ ಹಾಗೂ ಬಿಜೆಪಿ ನಾಯಕರ ಅಧ್ಯಕ್ಷತೆಯ ಟ್ರಸ್ಟ್‌ಗಳಿಂದ ನಿರ್ವಹಿಸಲ್ಪಡುತ್ತದೆ ಇನ್ನುಳಿದ 8 ಸಂಸ್ಥೆಗಳು ಆರೆಸ್ಸೆಸ್ (RSS) ಮತ್ತು ಅದರ ಮಿತ್ರ ಸಂಸ್ಥೆಗಳಿಂದ ನೇರವಾಗಿ ನಿರ್ವಹಿಸಲ್ಪಡುತ್ತವೆ.
ಹೆಚ್ಚುವರಿಯಾಗಿ 6 ಶಾಲೆಗಳು ಹಿಂದುತ್ವ ಸಂಘಟನೆಗಳು ಅಥವಾ ಬಲಪಂಥೀಯರಿಂದ ಹಾಗೂ ಇತರ ಹಿಂದೂ ಧಾರ್ಮಿಕ ಸಂಘಟನೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ. ಅನುಮೋದಿತ ಶಾಲೆಗಳಲ್ಲಿ ಯಾವುದೂ ಕ್ರಿಶ್ಚಿಯನ್ ಅಥವಾ ಮುಸ್ಲಿಂ (Muslimಸಂಘಟನೆಗಳು ಅಥವಾ ಭಾರತದ ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರಿಂದ ನಡೆಸಲ್ಪಡುವುದಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ಸೈನಿಕ ಶಾಲೆಗಳನ್ನು ಸಂಪೂರ್ಣ ಕೇಸರೀಕರಣ ಮಾಡಲು ಹೊರಟಿದೆ ಎಂದು ತಿಳಿದು ಬಂದಿದೆ.