ಬೆಂಗಳೂರು, ಆ. 05: ಮಾಜಿ ಸಚಿವ, ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಬಂಗಲೆ, ಅವರ ಒಡೆತನದ ನ್ಯಾಷನಲ್ ಟ್ರಾವೆಲ್ಸ್, ಮತ್ತಿತರ 5 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೊತೆಗೆ ರೋಷನ್ ಬೇಗ್ ಮತ್ತು ಅವರ ಮಗಳ ಮನೆ ಮೇಲೂ ದಾಳಿ ನಡೆದಿದೆ.
ದೆಹಲಿಯಿಂದ ಬಂದಿರುವ 45ಕ್ಕೂ ಅಧಿಕಾರಿಗಳ ತಂಡ ವಸಂತನಗರದ ಜಮೀರ್ ಹಳೇ ನಿವಾಸ, ಬಂಬೂ ಬಜಾರ್ನ ನಿವಾಸ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದ ಜಮೀರ್ ಆಪ್ತನ ನಿವಾಸ ಹಾಗೂ ಜಮೀರ್ ಪಿ.ಎ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಇವರು ಬಹಳ ದಿನಗಳಿಂದ ಬೆಈ ತಂಡ ಜಮೀರ್ ಅಹ್ಮದ್ ಗೆ ಸೇರಿದ ಮನೆ, ಯುಬಿ ಸಿಟಿಯಲ್ಲಿರುವ ಫ್ಲ್ಯಾಟ್ ಮೇಲೂ ದಾಳಿ ನಡೆದಿದೆ. ಎಲ್ಲಾ ಲಾಕರ್ ಗಳನ್ನು ಓಪನ್ ಮಾಡಿಸಿ ಪರಿಶೀಲನೆ ನಡೆದಿದೆ. ಮತ್ತೊಂದೆಡೆ ಜಮೀರ್ ವಿಚಾರಣೆಯನ್ನೂ ಅಧಿಕಾರಿಗಳು ನಡೆಸಿದ್ದಾರೆ. ಇನ್ನು ರೋಷನ್ ಬೇಗ್ ಪುತ್ರಿಯ ಭೂಪಸಂದ್ರದ ಮನೆ ಮೇಲೂ ಈಡಿ ದಾಳಿ ನಡೆದಿದೆ.
ಐಎಂಎ ಅವ್ಯವಹಾರ ಪ್ರಕರಣದ ವಿಚಾರಣೆಯಲ್ಲಿ ವಂಚಕ ಮನ್ಸೂರ್ ಅವರು, ರೋಷನ್ ಬೇಗ್ ಮತ್ತು ಜಮೀರ್ ಅವರ ಹೆಸರನ್ನು ಹೇಳಿದ್ದರು. ಮನ್ಸೂರ್ ಜೊತ ಕೋಟ್ಯಾಂತರ ರೂ. ಗಳ ವ್ಯವಹಾರವನ್ನು ಇವರಿಬಾರು ಮಾಡಿದ್ದಾರೆನ್ನಲಾಗಿದೆ. ಹಾಗಾಗಿ ಇವರಿಬ್ಬರ ಮನೆಗಳು ಮೇಲೆ ಇಡಿ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಶಾಸಕರ ಕಚೇರಿ ಎದುರು ಅಭಿಮಾನಿಗಳಿಂದ ಪ್ರತಿಭಟನೆ ನಡೆಸಲಾಯಿತು. ದಾಳಿಯಿಂದ ಕೋಪಗೊಂಡಿರುವ ಫ್ಯಾನ್ಸ್, ಅವರ ಮನೆ ಮುಂದೆ ಜಮಾಯಿಸಿದ್ದಾರೆ.