Davanagere: ಕರ್ನಾಟಕದಲ್ಲಿ (Karnataka) ಎಸ್ಸಿ-ಎಸ್ಟಿ ಸಮುದಾಯಗಳಿಗೆ (Modi Against CM Siddu) ಸೇರಿದ 11,000 ಕೋಟಿ ರೂ.ಗಳನ್ನ ಕಾಂಗ್ರೆಸ್ ನುಂಗಿ ನೀರು ಕುಡಿದಿದೆ. ಈ ಮೂಲಕ ದಲಿತ
ಸಮುದಾಯಕ್ಕೆ ದ್ರೋಹ ಎಸಗಿದೆ ಎಂದು ಪ್ರಧಾನಿ ಮೋದಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ಧಾರೆ.
ದಾವಣಗೆರೆ (Davanagere) ಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ನ ಮಾಜಿ ಪ್ರಧಾನಿಯೇ ಕೇಂದ್ರ ಸರ್ಕಾರ 100 ರೂಪಾಯಿಗಳನ್ನು ಕೊಟ್ಟರೆ
15 ಪೈಸೆ ಮಾತ್ರ ಬಡ ಫಲಾನುಭವಿಗಳಿಗೆ ತಲುಪುತ್ತದೆ ಎಂದು ಹೇಳುತ್ತಿದ್ದರು. ಹಾಗಾದರೆ 85 ಪೈಸೆಗಳನ್ನು ಯಾರು ಹೊಡೆಯುತ್ತಿದ್ದರು? ಈ ಪ್ರಶ್ನೆಗೆ ಕಾಂಗ್ರೆಸ್ (Congress) ನಾಯಕರು ಉತ್ತರಿಸಬೇಕಾಗುತ್ತದೆ.
ಎಸ್ಸಿ-ಎಸ್ಟಿ (SC-ST) ಸಮುದಾಯದ ಸೇರಿದ ಅನೇಕ ಯೋಜನೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿ ಕಾಂಗ್ರೆಸ್ನವರು ಭ್ರಷ್ಟಾಚಾರ ಮಾಡುತಿದ್ದರು.
ಆದರೆ ನಾವು ಅಧಿಕಾರಕ್ಕೆ ಬಂದ ಬಳಿಕ ನೇರವಾಗಿ ದಲಿತರ, ರೈತರ ಹಾಗೂ ಬಡವರ ಖಾತೆಗೆ ಹಣ ಹೋಗತೊಡಗಿದ ಎಂದರು. ಇಂಡಿಯಾ ಒಕ್ಕೂಟ (INDIA Alliance) ಅಧಿಕಾರಕ್ಕೆ ಬಂದರೆ ವರ್ಷಕ್ಕೆ
ಒಬ್ಬೊಬ್ಬರು ಪ್ರಧಾನಿ, ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಒಬ್ಬೊಬ್ಬರು ಪ್ರಧಾನಿ ಆಗುತ್ತಾರೆ. ಆಗ ಇಡೀ ದೇಶ ರಾಜಕೀಯ ಅಸ್ಥಿರತೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಈ
ಬಾರಿ ಯೋಚಿಸಿ ಮತ (Modi Against CM Siddu) ಹಾಕಿ ಎಂದರು.
ಇನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕೆ ಬಂದ ನಂತರ ರದ್ದು ಮಾಡಿದ್ದಾರೆ. ಇದರಿಂದ ದೇಶದ ಯುವಕರಿಗೆ ನಷ್ಟವಾಗಿದೆ. ಇನ್ನೊಂದೆಡೆ ನೀವು ನಿಮ್ಮ ಮಕ್ಕಳ
ಮುಂದಿನ ಭವಿಷ್ಯಕ್ಕೆ ಹಣ ಕೂಡಿಡುವ ಹಾಗೆ ಇಲ್ಲ. ಏಕೆಂದರೆ ಕಾಂಗ್ರೆಸ್ ಪಿತ್ರಾರ್ಜಿತ ಆಸ್ತಿ ತೆರಿಗೆ (Income Tax) ಜಾರಿಗೆ ತರಲು ಯೋಜಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ನವರು ವೋಟಿಗಾಗಿ ಎಲ್ಲವನ್ನೂ
ಉಚಿತವಾಗಿ ಕೊಡಲು ಹೊರಟಿದ್ದಾರೆ. ಎಲ್ಲವನ್ನೂ ಉಚಿತವಾಗಿ ಕೊಟ್ಟರೆ, ಯಾರಾದರೂ ಕೆಲಸ ಮಾಡುತ್ತಾರಾ?ಎಂದು ಪ್ರಶ್ನಿಸಿದರು. ಇದೇ ವೇಳೆ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ
ಸಿದ್ದೇಶ್ವರ್ (Gayathri Siddeshwar) ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಸವರಾಜ್ ಬೊಮ್ಮಾಯಿ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಪ್ರಧಾನಿ ಮೋದಿ (Modi) ಮನವಿ ಮಾಡಿದರು
ಇದನ್ನು ಓದಿ: ಪ್ರಧಾನಿ ಮೋದಿ ಭಯಂಕರ ಸುಳ್ಳುಗಾರ ಎಂದು ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ.