ನರೇಂದ್ರ ಮೋದಿ ನೀಡಿದ 14 ಗ್ಯಾರಂಟಿಗಳು ಯಾವವು? ಇಲ್ಲಿದೆ ಡಿಟೇಲ್ಸ್

New Delhi: 2024ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ (BJP) 25 ಗ್ಯಾರಂಟಿಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದು ಬಿಡುಗಡೆ ಮಾಡಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ‘ನ್ಯಾಯ ಪತ್ರದ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಸಂಕಲ್ಪ ಪತ್ರದ ಹೆಸರಿನಲ್ಲಿ ಬಿಡುಗಡೆ ಮಾಡಿದೆ. ಮೋದಿ (Modi) ನೀಡಿರುವ 25 ಗ್ಯಾರಂಟಿಗಳ ಪಟ್ಟಿ ಇಲ್ಲಿದೆ.

ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣ
ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ
ಅಮೃತ್ ಭಾರತ್ (Amrit Bharat), ವಂದೇ ಭಾರತ್ ರೈಲುಗಳ ಸಂಖ್ಯೆ ಹೆಚ್ಚಳ
10 ಕೋಟಿ ಮಹಿಳೆಯರಿಗೆ ಉದ್ಯೋಗ, ಉದ್ಯಮ ಕುರಿತು ಕೌಶಲ ತರಬೇತಿ

ಮುದ್ರಾ ಯೋಜನೆಯಡಿ ಸಾಲದ ಮೊತ್ತ 20 ಲಕ್ಷಕ್ಕೆ ಏರಿಕೆ
ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿನ ಪ್ರಯೋಜನಗಳು ಮುಂದಿನ ಸಮಯದಲ್ಲೂ ದೇಶದ 10 ಕೋಟಿ ರೈತರಿಗೆ ಮುಂದುವರಿಯುತ್ತದೆ.
ಬಿಜೆಪಿ ಪ್ರಕಾರ, 2025 ರ ವರ್ಷವನ್ನು ‘ಜಂಜಾಟಿಯ ಗೌರವ ವರ್ಷ’ ಎಂದು ಘೋಷಿಸಲಾಗುತ್ತದೆ.
ದೇಶಾದ್ಯಂತ ಡೇರಿ ಸಹಕಾರ ಸಂಘಗಳನ್ನು ಹೆಚ್ಚಿಸಲಾಗುವುದು
ಕ್ರೀಡೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸಲು ಹೊಸ ಯೋಜನೆ

ಮೂರು ಕೋಟಿ ಮಹಿಳೆಯರಿಗೆ ಲಕ್ಪತಿ ದೀದಿ ಯೋಜನೆಯ ಗ್ಯಾರಂಟಿ
2036 ರಲ್ಲಿ ಭಾರತದ ಒಲಿಂಪಿಕ್ಸ್ ಬಿಡ್, ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ
ರಾಷ್ಟ್ರವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.
ತೃತೀಯಲಿಂಗಿ ಸಮುದಾಯವನ್ನೂ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharath Scheme) ವ್ಯಾಪ್ತಿಗೆ
ಭಾರತವನ್ನು “ಜಾಗತಿಕ ಉತ್ಪಾದನಾ ಕೇಂದ್ರ” ಮಾಡುವ ಗುರಿಯನ್ನು ಹೊಂದಿದೆ.

ಜನೌಷಧಿ ಕೇಂದ್ರಗಳಲ್ಲಿ ಶೇ.80ರಷ್ಟು ರಿಯಾಯಿತಿಯೊಂದಿಗೆ ಔಷಧ ವಿತರಣೆ
ಭಾರತವನ್ನು ಜಾಗತಿಕ ಪೌಷ್ಟಿಕಾಂಶದ ಕೇಂದ್ರವನ್ನಾಗಿ ಮಾಡಲು ನಾವು ‘ಶ್ರೀ ಅನ್ನ’ಕ್ಕೆ ಹೆಚ್ಚಿನ ಒತ್ತು ನೀಡಲಿದ್ದೇವೆ.
2025 ರಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮದಿನವನ್ನು ರಾಷ್ಟ್ರ ಮಟ್ಟದಲ್ಲಿ ಆಚರಿಸಲಾಗುವುದು.
ಕೋಟ್ಯಂತರ ಕುಟುಂಬಗಳಿಗೆ ಸೋಲಾರ್ (Solar) ಮೂಲಕ ಉಚಿತವಾಗಿ ವಿದ್ಯುತ್ ಪೂರೈಕೆ
70 ವರ್ಷ ದಾಟಿದವರಿಗಾಗಿ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ
ಪ್ರಾದೇಶಿಕ ಭಾಷೆಗಳ ವೈಶಿಷ್ಟ್ಯ ಸಾರಲು ಆದ್ಯತೆ

Exit mobile version