ರಾಜಧಾನಿ ಬೆಂಗಳೂರಿನಲ್ಲಿನ ಮೋದಿ ಮೆಗಾ ರೋಡ್‌ಶೋ ; ಬಿಜೆಪಿಗೆ ಶಕ್ತಿ ನೀಡುತ್ತಾ..?!

Bengaluru : ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮೆಗಾ ರೋಡ್‌ಶೋನಲ್ಲಿ (mega roadshow) ಲಕ್ಷಾಂತರ ಸಂಖ್ಯೆಯಲ್ಲಿ ಜನರು ಹರಿದು ಬರುತ್ತಿರುವುದು, ಕುಗ್ಗಿರುವ ಬಿಜೆಪಿಗೆ (BJP) ಹೊಸ ಶಕ್ತಿ ನೀಡುತ್ತಾ ಎಂಬ ಕುರಿತು (Modi mega roadshow 2023) ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಕೊನೆಯ ಹಂತದಲ್ಲಿ ಪ್ರಧಾನಿ ಮೋದಿ ಅವರನ್ನು ಬೆಂಗಳೂರಿಗೆ ಕರೆ ತರುವ ಮೂಲಕ ಬಿಜೆಪಿ ಮೋದಿ ಅಸ್ತ್ರವನ್ನು ಪ್ರಯೋಗಿಸಿದೆ. ರಾಜಧಾನಿ ಬೆಂಗಳೂರಿನಲ್ಲಿರುವ ೨೮ ಕ್ಷೇತ್ರಗಳಲ್ಲಿ 17-20 ಸ್ಥಾನಗಳನ್ನು ಗೆಲ್ಲುವ

ಗುರಿ ಹೊಂದಿರುವ ಬಿಜೆಪಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕೊನೆಯ ಅಸ್ತ್ರವಾಗಿ ಮೋದಿಯವರನ್ನು ಪ್ರಚಾರಕ್ಕಿಳಿಸಿದೆ.

ಮೋದಿಯವರ ಮೆಗಾ ರೋಡ್‌ಶೋ ನಿಂದಾಗಿ ಬಿಜೆಪಿಗಾಗುವ ರಾಜಕೀಯ ಲಾಭಗಳ ಕುರಿತು ನೋಡುವುದಾದರೆ,

ಬೆಂಗಳೂರಿನಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಇನ್ನಷ್ಟು ಗಟ್ಟಿಯಾಗಲಿದ್ದು, ಕೊನೆಯ ಹಂತದಲ್ಲಿ ಕಾರ್ಯಕರ್ತರು ಸಕ್ರಿಯರಾಗಿ (Modi mega roadshow 2023) ಕೆಲಸ ಮಾಡುತ್ತಾರೆ.

ಮೋದಿ ಮೇಗಾ ರೋಡ್‌ಶೋನಿಂದಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತದ (North India) ಮತದಾರರ ಮೇಲು ಧನಾತ್ಮಕ ಪರಿಣಾಮ ಬೀರಲಿದ್ದು,

ಅಂತಹ ಮತದಾರರು ಮತಗಟ್ಟೆಗೆ ಬಂದು ಬಿಜೆಪಿ ಪರವಾಗಿ ಮತ ಚಲಾಯಿಸುವ ಸಾಧ್ಯತೆ.

ಇದನ್ನೂ ಓದಿ : https://vijayatimes.com/more-demand-for-alcohol/

ರಾಜ್ಯ ಬಿಜೆಪಿ (State BJP) ಆಡಳಿತದಿಂದಾಗಿ ಮುನಿಸಿಕೊಂಡಿರುವ ರಾಜ್ಯ ರಾಜಧಾನಿಯ ಮತದಾರರನ್ನು ಮನವೊಲಿಸುವ ತಂತ್ರವಾಗಿದ್ದು,

ಮೋದಿ ಮುಖ ನೋಡಿಯಾದರೂ,ಮತದಾರರು ಬಿಜೆಪಿಗೆ ಮತ ಹಾಕುವ ಸಂಭವ. ಯುವ ಮತದಾರರ ಮೇಲೆ ಇದರ ಪರಿಣಾಮ ಉಂಟಾಗಲಿದ್ದು,

ಬಿಜೆಪಿ ಪಕ್ಷದ ಶಕ್ತಿ ಪ್ರದರ್ಶನ ಎಂಬಂತೆ ಈ ರ್ಯಾಲಿ ನಡೆಸಲಾಗುತ್ತಿದೆ.

ಕೊನೆಯ ಎರಡು ದಿನ ಬೇರೆ ಪಕ್ಷಗಳ ಪ್ರಚಾರಕಾರ್ಯ ಮತದಾರರಿಗೆ ತಲುಪದಂತೆ ಮಾಡುವ ತಂತ್ರಗಾರಿಕೆಯಾಗಿದ್ದು,

ರಾಜ್ಯದ ಎಲ್ಲ ಮಾದ್ಯಮಗಳಲ್ಲಿಯೂ ಕೇವಲ ಮೋದಿಯವರನ್ನು ತೋರಿಸುವ ಮೂಲಕ ಬಿಜೆಪಿ (Modi mega roadshow 2023) ಪರವಾದ ಅಲೆಯನ್ನು ರೂಪಿಸುವುದು.

ಕೊನೆಯ ಹಂತದಲ್ಲಿ ಈ ಚುನಾವಣೆ ಮೋದಿಯವರ ಚುನಾವಣೆ ಎಂಬಂತೆ ಬಿಂಬಿಸಿ ಮತದಾರರನ್ನು ಸೆಳೆಯುವ ಯತ್ನವನ್ನು ಬಿಜೆಪಿ ಮಾಡುತ್ತಿದೆ.

ಮೋದಿಯವರಿಗಿರುವ ಪ್ರಭಾವವನ್ನು ಬಳಸಿಕೊಂಡು ರಾಜ್ಯದಲ್ಲಿ ಅಧಿಕಾರ ಹಿಡಿಯುವ ತಂತ್ರಗಾರಿಕೆ.

ಇದನ್ನೂ ಓದಿ : https://vijayatimes.com/modi-road-show-in-bengaluru-2/

ನಿಶ್ಚಿತವಾಗಿಯೂ ಮೋದಿ ಅವರ ಮೆಗಾ ರೋಡ್‌ಶೋ ಬಿಜೆಪಿ ಪಾಲಿಗೆ ಒಂದಷ್ಟು ಮತಗಳನ್ನು ತಂದು ಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಆದರೆ ಅಧಿಕಾರದ ಗದ್ದುಗೆಗೆ ಬಿಜೆಪಿಯನ್ನು ತೆಗೆದುಕೊಂಡು ಹೋಗುತ್ತದಾ..? ಎಂಬ ಪ್ರಶ್ನೆಗೆ ಮೇ೧೩ರಂದೇ ಉತ್ತರ ಸಿಗಲಿದೆ.

ಮೋದಿಯವರ ಈ ರೋಡ್‌ಶೋನಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿರುವುದಂತು ಸತ್ಯ.

Exit mobile version