ಆತ್ಮೀಯ ಸ್ನೇಹಿತನಿಗಾಗಿ ಮೋದಿ ಕಣ್ಣೀರು

ನವದೆಹಲಿ, ಫೆ. 09: ರಾಜ್ಯಸಭೆಯಲ್ಲಿಂದು  ಕಾಂಗ್ರೆಸ್ ಹಿರಿಯ ಗುಲಾಮ್ ನಬಿ ಆಜಾದ್ ಸದಸ್ಯತ್ವ ಸ್ಥಾನದ ಅವದಿ ಮುಕ್ತಾಯವಾಗಿದ್ದು, ಅವರಿಗೆ ವಿದಾಯ ಹೇಳುವಾಗ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಕಣ್ಣೀರು ಹಾಕಿದರು. ಅವರ ಬಗ್ಗೆ ಮಾತನಾಡುವಾಗ ಒಂದು ಕ್ಷಣ ಮೌನಕ್ಕೆ ಶರಣಾದರು ಹಾಗೂ ಬೀಳ್ಕೊಡಲು ದು:ಖವಾಗುತ್ತಿದೆ ಎಂದರು.

ಭಯೋತ್ಪಾದಕ ದಾಳಿಯಿಂದಾಗಿ ಗುಜರಾತ್‌ನ ಜನರು ಕಾಶ್ಮೀರದಲ್ಲಿ ಸಿಲುಕಿಕೊಂಡಾಗ ಆಜಾದ್ ಮತ್ತು ಪ್ರಣಬ್ ಮುಖರ್ಜಿ ಅವರ ಪ್ರಯತ್ನಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಗುಲಾಂ ನಬಿ ಆಜಾದ್ ಅವರು ನಿರಂತರವಾಗಿ ಪಾಲೋ ಅಪ್ ಮಾಡುತ್ತಿದ್ದರು. ತಮ್ಮದೇ ಕುಟುಂಬದ ಸದಸ್ಯರೇ ಸಿಲುಕಿಕೊಂಡಿದ್ದಾರೆ ಎಂಬ ರೀತಿ ಅವರು ಚಡಪಡಿಸಿ ಕೆಲಸಮಾಡಿದ್ದರು ಎಂದು ಆಜಾದ್ ಅವರನ್ನು ಮೋದಿ ಹಾಡಿ ಹೊಗಳಿದ್ದಾರೆ.

ಗುಲಾಂ ನಬಿ ಆಜಾದ್ ಅವರನ್ನು ನಾನು ಹಲವು ವರ್ಷಗಳಿಂದ ನೋಡಿದ್ದೇನೆ, ನಾವು ಇಬ್ಬರು ಒಟ್ಟಿಗೆ ಮುಖ್ಯಮಂತ್ರಿಯಾಗಿದ್ದೆವು ನಾನು ಸಿಎಂ ಆಗುವ ಮೊದಲೇ ಅವರನ್ನು ಸಂಪರ್ಕಿಸಿದ್ದೆ. ಆ ವೇಳೆಗಾಗಲೇ ಆಜಾದ್ ಅವರು ರಾಜಕಾರಣದಲ್ಲಿ ಸಕ್ರಿಯರಾಗಿದ್ದರು ಎಂದು ಮೋದಿ ಹೇಳಿದ್ದಾರೆ.

ತೋಟಗಾರಿಕೆ ಬಗ್ಗೆ ಗುಲಾಂ ನಬಿ ಆಜಾದ್ ಅವರಿಗೆ ಅಪಾರ ಅಭಿರುಚಿಯಿದೆ ಎಂದು ಹೇಳಿದರು, ಇನ್ನೂ ಇದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರ ಚುನಾವಣೆ ಗೆಲ್ಲಲು ಆಜಾದ್ ಅವರ ಪಾತ್ರವನ್ನು ಹೊಗಳಿದ್ದರು. ಆಜಾದ್ ಅವರು ನನ್ನ ನಿಜವಾದ ಸ್ನೇಹಿತ, ಅಧಿಕಾರ ಬಂದಾಗ ಹೇಗೆ ಎಲ್ಲವನ್ನು ನಿರ್ವಹಿಸಬೇಕು ಎಂಬುದನ್ನು ಅವರನ್ನು ನೋಡಿ ನಾವು ಕಲಿಯಬೇಕುಎಂದು ಮೋದಿ ಪ್ರಶಂಸಿಸಿದ್ದಾರೆ.

Exit mobile version