ಭಾರತಕ್ಕೆ ಮತ್ತಷ್ಟು ರಕ್ಷಣಾ ಬಲ ನೀಡಿದ ಪ್ರಧಾನಿ ಮೋದಿ

ನವದೆಹಲಿ ಅ 16 : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಏಳು ಹೊಸ ರಕ್ಷಣಾ ಕಂಪನಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಏಳು ಕಂಪನಿಗಳೆಂದರೆ ಮುನಿಷನ್ಸ್ ಇಂಡಿಯಾ ಲಿಮಿಟೆಡ್, ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್, ಅಡ್ವಾನ್ಸ್ಡ್ ವೆಪನ್ಸ್ ಆಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್, ಟ್ರೂಪ್ ಕಂಫರ್ಟ್ಸ್ ಲಿಮಿಟೆಡ್, ಯಂತ್ರ ಇಂಡಿಯಾ ಲಿಮಿಟೆಡ್, ಇಂಡಿಯಾ ಆಪ್ಟೆಲ್ ಲಿಮಿಟೆಡ್ ಮತ್ತು ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್.

ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಸ್ವಾವಲಂಬನೆ ಮತ್ತು ರಕ್ಷಣಾ ಸನ್ನದ್ಧತೆಯನ್ನು ಸುಧಾರಿಸುವ ಕ್ರಮವಾಗಿ 41 ಆರ್ಡಿನನ್ಸ್ ಕಾರ್ಖಾನೆಗಳನ್ನು ಏಳು ಕಾರ್ಪೊರೇಟ್ ಸಂಸ್ಥೆಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ಹೇಳಿದರು. ಭಾರತದ ಆರ್ಥಿಕತೆಯನ್ನು ಉತ್ತೇಜಿಸುವ ಮತ್ತು ಹೊಸ ಎತ್ತರವನ್ನು ತಲುಪಲು ಪ್ರೋತ್ಸಾಹಿಸುವ ‘ರಾಷ್ಟ್ರ-ಸುರಕ್ಷ’ಕ್ಕಾಗಿ ಸರ್ಕಾರ ಮತ್ತು ಸಾರ್ವಜನಿಕ ವಲಯ ಕೈಜೋಡಿಸಿವೆ ಎಂದು ಅವರು ಹೇಳಿದ್ದಾರೆ.

ಸ್ವಾತಂತ್ರ್ಯದ ನಂತರ ಭಾರತದ ರಕ್ಷಣಾ ವಲಯದಲ್ಲಿ ಹೊಸತನದ ಕೊರತೆಯಿತ್ತು, ಈ ಏಳು ಹೊಸ ಕಂಪನಿಗಳು ಸರ್ಕಾರದ ಪ್ರಯತ್ನಗಳನ್ನು ರಕ್ಷಣಾ ಕ್ಷೇತ್ರದಲ್ಲಿ ಪ್ರಗತಿ ಮತ್ತು ಆತ್ಮನಿರ್ಭರತೆಯತ್ತ ಕೊಂಡೊಯ್ಯುತ್ತದೆ ಎಂದಿದ್ದಾರೆ.

ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ರಕ್ಷಣಾ ವಲಯದಲ್ಲಿ ಹಲವು ಪ್ರಮುಖ ಸುಧಾರಣೆಗಳು ಆಗುತ್ತಿವೆ ಎಂದ ಪ್ರಧಾನಿ, ಆತ್ಮನಿರ್ಭರ ಭಾರತ ಅಭಿಯಾನವು ಭಾರತವನ್ನು ತನ್ನದೇ ಆದ ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಮತ್ತು ಭಾರತದಲ್ಲಿ ಆಧುನಿಕ ಮಿಲಿಟರಿ ಉದ್ಯಮದ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಎಂದು ಮೋದಿ ಹೇಳಿದರು.

ಭಾರತೀಯ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಪರಿಣತಿಯನ್ನು ಸ್ಥಾಪಿಸುವುದು ಮಾತ್ರವಲ್ಲದೆ ಜಾಗತಿಕ ಬ್ರಾಂಡ್ ಆಗುವುದೂ ನಮ್ಮ ಗುರಿಯಾಗಿದೆ ಎಂದು ಮೋದಿ ಹೇಳಿದರು

Exit mobile version