ಗಜಾಪುರ ಜನರ ನಿದ್ದೆಗೆಡಿಸಿದ ಕೋತಿ ಉಪಟಳ ; 20 ಜನ ಆಸ್ಪತ್ರೆ ಪಾಲಾದರೂ ಕ್ಯಾರೇ ಅನ್ನುತ್ತಿಲ್ಲ ಅಧಿಕಾರಿಗಳು

Monkeys attack people in Gajapura ; 20 people are still in the hospital, but no officials care.

ವಾನರರ ಉಪಟಳದಿಂದಾಗಿ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಜಾಪುರದಲ್ಲಿ ಕಂಗೆಟ್ಟಿರುವ ಜನರು… ಇಲ್ಲಿನ ಜನರಿಗೆ ಕಾಡುಪ್ರಾಣಿಗಳ ಸಮಸ್ಯೆಗಿಂತಲೂ ಕೋತಿಗಳ ಸಮಸ್ಯೆಯೇ ಜಾಸ್ತಿಯಾಗಿದೆ….

ಈ ಗ್ರಾಮದಲ್ಲಿ ಸಿಕ್ಕ ಸಿಕ್ಕವರ ಮೇಲೆ ಕೋತಿಗಳು ಎರಗಿ ಅನೇಕ ಜನರಿಗೆ ರಕ್ತ ಬರುವಂತೆ ಸಮಸ್ಯೆಯನ್ನುಂಟು ಮಾಡಿದೆ…. ಇದರಿಂದಾಗಿ ಅನೇಕರು ಆಸ್ಪತ್ರೆ ಸೇರುವಂತಾಗಿದೆ….

ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಮಂದಿಯ ಮೇಲೆ ಕೋತಿ ಎರಗಿ ಗಾಯ ಮಾಡಿರುವ ಪ್ರಕರಣ ಉಲ್ಲೇಖವಾಗಿದ್ದು… ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ… ಈ ಉಪಟಳದಿಂದಾಗಿ ಬೇಸತ್ತ ಗ್ರಾಮಸ್ಥರು, ಹೆದರಿಕೊಂಡೇ ಜೀವನವನ್ನು ಸಾಗಿಸುವಂತಹ ಪರಿಸ್ಥಿತಿ ಎದುರಾಗಿದೆ…

ಇನ್ನು ರೈತರು ಟ್ರಾಕ್ಟರ್ನಲ್ಲಿ ಓಡಾಡೋದಕ್ಕೆ ಭಯಪಡ್ತಿದ್ದಾರೆ… ಟ್ರಾಕ್ಟರ್‌ ಮೇಲೆ ಎರಗಿ ಬರತ್ತೆ ಈ ವಾನರರು… ಕೈಯಲ್ಲಿ ಕೋಲು ಹಿಡಿದುಕೊಂಡೆ ಓಡಾಡ್ಬೇಕಾಗತ್ತೆ…

ಇನ್ನು ವಾಹನಸವಾರರ ಕಥೆ ಕೇಳೋದೇ ಬೇಡ… ಅದೆಷ್ಟೋ ಮಂದಿ ವಾಹನ ಚಲಿಸುವಾಗ್ಲೇ ಮಂಗಗಳು ಧಾಳಿ ಮಾಡಿದೆ. …ಅಲ್ಲದೇ ವಾಹನದಿಂದ ಬಿದ್ದು, ಅಪಘಾತವೂ ಸಂಬಂಧಿಸಿದೆ.

ಉಪಟಳವನ್ನು ಕೊಡುವಂತಹ ಮಂಗಗಳನ್ನು ಸೆರೆ ಹಿಡಿಯಬೇಕೆಂಬುದಾಗಿ ಅನೇಕ ಬಾರಿ ಲಿಖಿತ ಪ್ರತಿಯಲ್ಲಿ, ಅರಣ್ಯ ಇಲಾಖೆಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ರೀತಿಯಲ್ಲಿ ಸೂಕ್ತ ಕ್ರಮವಹಿಸುತ್ತಿಲ್ಲ ಎಂಬುದು ಜನಸಾಮಾನ್ಯರ ಅಳಲಾಗಿದೆ.

ಈ ವಾನರರ ಉಪಟಳದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ… ಇನ್ನಾದರೂ ಅರಣ್ಯ ಇಲಾಖೆ ಅಥವಾ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲಿ, ಇನ್ನಾದರೂ ಗಜಾಪುರದ ಗ್ರಾಮಸ್ಥರು ಸುಖವಾಗಿ ಜೀವಸಲಿ ಎಂಬುದು ವಿಜಯಟೈಮ್ಸ್‌ನ ಆಶಯವಾಗಿದೆ…

Exit mobile version