ಸಾವಿಗೆ ಆಹ್ವಾನಿಸುತ್ತಿರುವ ಸುಮನಹಳ್ಳಿ ಮುಖ್ಯರಸ್ತೆ ; ಗುಂಡಿಬಿದ್ದ ರಸ್ತೆಗೆ 5 ಸ್ಟಾರ್ ರೇಟಿಂಗ್ ಕೊಟ್ಟ ಬೆಂಗಳೂರಿಗರು!

Bengaluru : ನಗರದ ರಸ್ತೆಗಳ ದುಸ್ಥಿತಿಯಿಂದ ಬೇಸತ್ತ ಬೆಂಗಳೂರಿನ(Bengaluru) ನಿವಾಸಿಗಳು ತಮ್ಮ ಅಸಮಾಧಾನ, ವಿರೋಧವನ್ನು ಸಲ್ಲಿಸಲು ವಿಶಿಷ್ಟವಾದ ಮಾರ್ಗವನ್ನು ಹುಡುಕಿಕೊಂಡಿದ್ದಾರೆ.

ಬೆಂಗಳೂರಿನ ನಾಗರಿಕರು ಗೂಗಲ್ ಮ್ಯಾಪ್ಸ್’ನಲ್ಲಿ(Google Map) ಸುಮನಹಳ್ಳಿ(Sumanahalli) ಮುಖ್ಯರಸ್ತೆಯ ಗುಂಡಿ ಸೇರಿದಂತೆ ಅನೇಕ ಮುಖ್ಯರಸ್ತೆಯ ಗುಂಡಿಗಳನ್ನು ಟ್ಯಾಗ್ ಮಾಡಿ ಸರ್ಕಾರದ ಕೆಲಸಗಳನ್ನು ಶ್ಲಾಘಿಸಿ,

ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು 5 ಸ್ಟಾರ್ ರೇಟಿಂಗ್ ಕೊಡುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಹೆಜ್ಜೆಯಿಟ್ಟಿದ್ದಾರೆ.

ಬೆಂಗಳೂರಿನ ಬೆಳ್ಳಂದೂರಿನಲ್ಲಿ(Bellandur) ಗೂಗಲ್ ಮ್ಯಾಪ್‌ನ ಸ್ಥಳವನ್ನು ತೋರಿಸುವ ‘ಅಬಿಜರ್ಸ್ ಮ್ಯಾನ್ ಹೋಲ್’ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್(Viral) ಆಗಿವೆ.

ಈ ಸ್ಥಳವನ್ನು ಸಾರ್ವಜನಿಕರು “ಕರ್ನಾಟಕದ ಬೆಂಗಳೂರಿನಲ್ಲಿ ಐತಿಹಾಸಿಕ ಹೆಗ್ಗುರುತು” ಎಂದು ಟ್ಯಾಗ್ ಮಾಡಿದ್ದಾರೆ.

https://twitter.com/Cryptic_Miind/status/1572070995313426432?s=20&t=uZ-MHEF-62zr2GXiKk3sFQ

“ಉನ್ನತ ಶ್ರೇಣಿಯ ಗುಂಡಿಗಳು, ಅನೇಕ ಕಿರಾಣಿ ಅಂಗಡಿಗಳು ಮತ್ತು ಎಲ್ಲಾ ಶಾಲೆಗಳಿಗೆ ಬಹಳ ಹತ್ತಿರವಿರುವ ಉತ್ತಮ ಸ್ಥಳ” ಎಂದು ತಮ್ಮ ಅಸಮಾಧಾನವನ್ನು ಅಭಿಪ್ರಾಯದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕೆಲವರು ಗುಂಡಿಬಿದ್ದ ರಸ್ತೆಗಳನ್ನು ತೀವ್ರ ಹಾಸ್ಯಮಯವಾಗಿ ಪರಿಗಣಿಸಿದ್ದು, ಇದು ತುಂಬಾ ಒಳ್ಳೆಯ ಪ್ಯಾಥ್ ಹೋಲ್(Pathole). https://vijayatimes.com/category/%e0%b2%95%e0%b3%8d%e0%b2%b0%e0%b3%80%e0%b2%a1%e0%b3%86/#google_vignette

ಒಮ್ಮೆಯಾದರೂ ಇಲ್ಲಿಗೆ ನೀವು ಭೇಟಿ ನೀಡಬೇಕು. ಗುಂಡಿಬಿದ್ದ ರಸ್ತೆಗಳಲ್ಲಿ ಚಲಿಸುವಾಗ ಸರಿಯಾದ ಸ್ಥಳಗಳಲ್ಲಿ ನಿಮ್ಮ ಗಾಡಿಯ ಚಾಸಿಸ್ ಅನ್ನು ಹೊಡೆಯುವುದು ಗ್ಯಾರಂಟಿ” ಎಂದು ಮತ್ತೊಂದು ಅಭಿಪ್ರಾಯದಲ್ಲಿ ತಿಳಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಬಳಿಯೂ ರಸ್ತೆಗಳ ದುಸ್ಥಿತಿಯನ್ನು ಪ್ರತ್ಯೇಕವಾಗಿ ಗುರುತಿಸಿ ಸಾರ್ವಜನಿಕರು ಖಂಡಿಸಿದ್ದಾರೆ.

https://twitter.com/Cryptic_Miind/status/1572210502931197953?s=20&t=uZ-MHEF-62zr2GXiKk3sFQ

“ಸುಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಬಿಬಿಎಂಪಿ ಸೇತುವೆಯ ರಸ್ತೆಯಲ್ಲಿ ಕಳಪೆ ಕಾಮಗಾರಿಯಿಂದ ರಸ್ತೆಯ ಕಬ್ಬಿಣದ ತುಂಡು ಕಾಣಿಸುತ್ತಿದ್ದು, ವಾಹನ ಸವಾರರ ಜೀವಕ್ಕೆ ಕುತ್ತು ತರುವಂತಿದೆ. ಬೆಂಗಳೂರಿನ ರಸ್ತೆಗಳ ದುಸ್ಥಿತಿಯನ್ನು ಮನಗಂಡು ಕರ್ನಾಟಕ ಹೈಕೋರ್ಟ್(Karnataka Highcourt) ಸೋಮವಾರ ಬಿಬಿಎಂಪಿಗೆ ಎಚ್ಚರಿಕೆ ನೀಡಿದ್ದು, ನಗರದಲ್ಲಿ ಗುಂಡಿಗಳನ್ನು ಮುಚ್ಚುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.

ಬಿಬಿಎಂಪಿ ಆಯುಕ್ತರಿಗೆ ಈ ಪರಿಸ್ಥಿತಿಯ ಗಂಭೀರತೆ ಮತ್ತು ಅದರ ತುರ್ತು ತಿಳಿಸಿ. ಸಾರ್ವಜನಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸಿ ಎಂದು ಹೈಕೋರ್ಟ್ ಹೇಳಿದೆ. ಒಟ್ಟು 2,010 ಗುಂಡಿಗಳನ್ನು ಭರ್ತಿ ಮಾಡಲಾಗಿದ್ದು, 2022ರ ಸೆಪ್ಟೆಂಬರ್ 14ರವರೆಗೆ 221 ಗುಂಡಿಗಳು ಮಾತ್ರ ಉಳಿದಿವೆ ಎಂದು ಬಿಬಿಎಂಪಿ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಭಾರೀ ಮಳೆ ಮತ್ತು ಪ್ರವಾಹದ ನಂತರ ರಸ್ತೆಗಳಲ್ಲಿನ ಗುಂಡಿಗಳು ದೊಡ್ಡ ಸಮಸ್ಯೆಯಾಗಿವೆ ಎಂಬುದು ತಿಳಿದುಬಂದಿದೆ.
Exit mobile version