• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಲೈಫ್ ಸ್ಟೈಲ್

ಬಾಯಿ ಸಿಹಿ ಮಾಡೋ ಸಕ್ಕರೆ ಆರೋಗ್ಯವನ್ನು ಕಹಿಗೊಳಿಸಬಹುದು ಎಚ್ಚರ!

Sharadhi by Sharadhi
in ಲೈಫ್ ಸ್ಟೈಲ್
ಬಾಯಿ ಸಿಹಿ ಮಾಡೋ ಸಕ್ಕರೆ ಆರೋಗ್ಯವನ್ನು ಕಹಿಗೊಳಿಸಬಹುದು ಎಚ್ಚರ!
0
SHARES
0
VIEWS
Share on FacebookShare on Twitter

ಮಕ್ಕಳ ವಯಸ್ಸೇ ಹಾಗೇ ಸಿಕ್ಕಿದೆಲ್ಲವನ್ನೂ ತಿನ್ನುವ ಪ್ರಾಯ. ನಿಮ ಮಗು ಬಯಸುತ್ತಿದೆ ಎಂದು ಹೆಚ್ಚು ಸಕ್ಕರೆ ನೀಡುತ್ತಿದ್ದೀರಾ? ಹಾಗಾದರೆ ನೀವು ಖಂಡಿತ ತಪ್ಪು ಮಾಡುತ್ತೀದ್ದೀರಿ ಎಂದರ್ಥ. ಯಾಕಂದ್ರೆ ಹೊಸ ಅಧ್ಯಯನವು ಬಾಲ್ಯದಲ್ಲಿ ಹೆಚ್ಚು ಸಕ್ಕರೆಯನ್ನು ತಿನ್ನುವುದರಿಂದ ಮೈಕ್ರೊಬೈಮ್ ನಿಮ್ಮ ಜೀವನಕ್ಕೆ ಕಾಲಿಡಬಹುದು, ಒಂದು ವೇಳೆ ಮುಂದೆ ನೀವು ಆರೋಗ್ಯಕರವಾಗಿ ತಿನ್ನಲು ಕಲಿತರೂ ಸಹ ಬಾಲ್ಯದಲ್ಲಿ ತಿಂದ ಅತೀ ಸಕ್ಕರೆ ಮುಂದೆ ಈ ಸೂಕ್ಶ್ಮಜೀವಿ ಹುಟ್ಟಲು ಕಾರಣವಾಗುತ್ತದೆ.

ಮೈಕ್ರೋಬೈಮ್ ಎಂಬುದು ಬ್ಯಾಕ್ಟೀರಿಯಾವಾಗಿದ್ದು, ಮಾನವ ಅಥವಾ ಪ್ರಾಣಿಗಳ ಮೇಲೆ ಮತ್ತು ಒಳಗೆ ವಾಸಿಸುವ ಶಿಲೀಂಧ್ರಗಳು, ಪರಾವಲಂಬಿಗಳು ಮತ್ತು ವೈರಸ್‌ಗಳನ್ನು ಸೂಚಿಸುತ್ತದೆ. ಆದ್ದರಿಂದ ಈ ಲೇಖನದಲ್ಲಿ ಬಾಲ್ಯದಲ್ಲಿ ಸಕ್ಕರೆ ತಿನ್ನುವುದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ವಿವರಿಸಿದ್ದೇವೆ.

ಸಕ್ಕರೆ ಸೇವನೆಯು ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?:
ಅತೀ ಎಂಬುದು ಯಾವ ವಿಷಯಕ್ಕೂ ಒಳ್ಳೆಯದಲ್ಲ. ಹೆಚ್ಚು ಸಕ್ಕರೆ ಅಥವಾ ಕೊಬ್ಬನ್ನು ಸೇವಿಸುವುದರಿಂದ ನೀವು ಹೆಚ್ಚಿನ ಕ್ಯಾಲೊರಿಗಳನ್ನು ಪಡೆಯಬಹುದು. ಈ ಕ್ಯಾಲೊರಿಗಳು ತೂಕ ಹೆಚ್ಚಾಗಲು ಕಾರಣವಾಗಬಹುದು ಮತ್ತು ಅಸಹಜವಾಗಿ ತೂಕ ಹೆಚ್ಚಾದಾಗ ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕ್ಯಾಲಿಫೋರ್ನಿಯಾ ರಿವರ್ಸೈಡ್ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗೆ ನಡೆಸಿದ ಅಧ್ಯಯನ ಭಯವನ್ನು ಹುಟ್ಟುಹಾಕುತ್ತದೆ. ಅವರ ಪ್ರಕಾರ, ಕರುಳಿನ ಬ್ಯಾಕ್ಟೀರಿಯಾದ ಸಂಖ್ಯೆ ಮತ್ತು ವೈವಿಧ್ಯತೆಯಲ್ಲಿ ಗಮನಾರ್ಹ ಇಳಿಕೆ ತೋರಿಸಿದ ಮೊದಲ ಅಧ್ಯಯನಗಳಲ್ಲಿ ಇದು ಒಂದು.
ದೇಹಕ್ಕೆ ಅಗತ್ಯವಾದ ಸೂಕ್ಷ್ಮ ಜೀವಿಗಳು ಹೆಚ್ಚಾಗಿ ಕರುಳಿನಲ್ಲಿ ಕಂಡುಬರುತ್ತವೆ . ಅವುಗಳು ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ, ಆಹಾರವನ್ನು ಒಡೆಯುತ್ತವೆ ಮತ್ತು ಪ್ರಮುಖ ಜೀವಸತ್ವಗಳನ್ನು ಸಂಶ್ಲೇಷಿಸಲು ಸಹಾಯ ಮಾಡುತ್ತದೆ. ಆದರೆ ಬಾಲ್ಯದಲ್ಲಿ ತಿಂದಂತಹ ಅತಿಯಾದ ಸಕ್ಕರೆ ಹಾಗೂ ಕೊಬ್ಬು ಈ ಸೂಕ್ಶ್ಮಜೀವಿಗಳನ್ನು ಕಡಿಮೆ ಮಾಡಿತ್ತು ಎಂದು ಅಧ್ಯಯನ ಲೇಖಕರು ಹೇಳಿದ್ದಾರೆ.

ಹೆಚ್ಚು ಸಕ್ಕರೆ ಸೇವನೆಯು ಕರುಳಿನ ಬ್ಯಾಕ್ಟೀರಿಯಾದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?:
ಹೆಚ್ಚು ಸಕ್ಕರೆ ತಿನ್ನುವುದು ನಿಮ್ಮ ಕರುಳಿನ ಬ್ಯಾಕ್ಟೀರಿಯಾವನ್ನು ಸಹ ಗೊಂದಲಗೊಳಿಸುತ್ತದೆ. ಪಾಶ್ಚಾತ್ಯ ಆಹಾರ ಸೇವಿಸುವವರಲ್ಲಿ ಮುರಿಬಾಕುಲಮ್ ಕರುಳಿನ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಹೆಚ್ಚು ಸಕ್ಕರೆ ಸೇವನೆಯು ನಿಮ್ಮ ಹೃದ್ರೋಗಗಳು ಮತ್ತು ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತದೆ, ಆದರೆ ಇದು ನಿಮ್ಮ ಮುಖದಲ್ಲಿ ಮೊಡವೆ ಉಂಟುಮಾಡುವ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಗೆ ಸಹಕಾರಿಯಾಗಿದೆ. ಮತ್ತು ಕೆಲವರಿಗೆ, ಸಕ್ಕರೆ ಸೇವನೆಯ ಪರಿಣಾಮಗಳು ಖಿನ್ನತೆಯ ಬೆಳವಣಿಗೆಗೆ ಕಾರಣವಾಗಬಹುದು.

ಇವುಗಳ ಹೊರತಾಗಿ, ಫ್ರಕ್ಟೋಸ್ ಅನ್ನು ಹೆಚ್ಚು ಸೇವಿಸುವುದರಿಂದ ಪಿತ್ತಜನಕಾಂಗ ಸಮಸ್ಯೆ, ಹಲ್ಲಿನ ಆರೋಗ್ಯ ಕ್ಷೀಣಿಸುವಿಕೆ, ಗೌಟ್ ಸಮಸ್ಯೆಗಳು ಇತ್ಯಾದಿಗಳ ಅಪಾಯವೂ ಹೆಚ್ಚಾಗುತ್ತದೆ.

ಸಕ್ಕರೆಗೆ ವ್ಯಸನಿಯಾಗಿರುವವರು ಈ ಪರಿಹಾರಗಳನ್ನು ಪ್ರಯತ್ನಿಸಿ:
ಹೆಚ್ಚು ಸಕ್ಕರೆಯನ್ನು ಸೇವಿಸುವುದರಿಂದ ಅನೇಕ ಋಣಾತ್ಮಕ ಆರೋಗ್ಯ ಪರಿಣಾಮಗಳಿವೆ. ನಿಮ್ಮ ಸಕ್ಕರೆ ಸೇವನೆಯನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುವ ಕೆಲವು ಪರಿಣಾಮಕಾರಿ ಸಲಹೆಗಳು ಮತ್ತು ತಂತ್ರಗಳು ಇಲ್ಲಿವೆ:

  1. ನಿಮ್ಮ ಆಹಾರದಲ್ಲಿ ಸಕ್ಕರೆಯ ಬದಲು ಸ್ಟೀವಿಯಾ ಬಳಸಿ.
  2. ನಿಮ್ಮ ಆಹಾರಕ್ಕೆ ಬೆಲ್ಲ ಸೇರಿಸಿ.
  3. ನಿಮ್ಮ ಬೆಳಗಿನ ಉಪಾಹಾರಕ್ಕೆ ಪೀನಟ್ ಬಟರ್ ಮತ್ತು ತಾಜಾ ಹಣ್ಣುಗಳೊಂದಿಗೆ ಓಟ್ಸ್ ಸೇರಿಸಿ.
  4. ಸೋಡಾ ಮತ್ತು ಸಕ್ಕರೆ ಪಾನೀಯಗಳನ್ನು ನಿಮಗೆ ಸಾಧ್ಯವಾದಷ್ಟು ತಪ್ಪಿಸಿ.

ನೆನಪಿಡಿ, ನಿಮ್ಮ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವ ಒಂದು ಉತ್ತಮ ವಿಧಾನವೆಂದರೆ ಹೊರಗಿನ ಆಹಾರಗಳಿಗೆ ಬದಲಾಗಿ ಮನೆಯಲ್ಲಿ ಊಟ ಮಾಡುವುದು.

Related News

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?
ಲೈಫ್ ಸ್ಟೈಲ್

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?

January 20, 2023
60 ವರ್ಷ ಪೂರೈಸಿದ್ದೇನೆ, ಈಗ ನಾನು ತಾತನಾಗಿರುವೆ : ಜಗ್ಗೇಶ್ ಪದವಿಪೂರ್ವ ಚಿತ್ರಕ್ಕೆ ಶುಭಹಾರೈಸಿ, ಹಳೆಯ ನೆನಪುಗಳ ಮೇಲುಕು
ಮನರಂಜನೆ

60 ವರ್ಷ ಪೂರೈಸಿದ್ದೇನೆ, ಈಗ ನಾನು ತಾತನಾಗಿರುವೆ : ಜಗ್ಗೇಶ್ ಪದವಿಪೂರ್ವ ಚಿತ್ರಕ್ಕೆ ಶುಭಹಾರೈಸಿ, ಹಳೆಯ ನೆನಪುಗಳ ಮೇಲುಕು

December 10, 2022
ಕಾಂತಾರ ನೋಡಿಲ್ಲ ಎಂದು ಟ್ರೋಲ್ ಮಾಡಿದವರಿಗೆ ನಾನು ನೋಡಿದ್ದೇನೆ ಎಂದ ನಟಿ ರಶ್ಮಿಕಾ ಮಂದಣ್ಣ!
Vijaya Time

ಕಾಂತಾರ ನೋಡಿಲ್ಲ ಎಂದು ಟ್ರೋಲ್ ಮಾಡಿದವರಿಗೆ ನಾನು ನೋಡಿದ್ದೇನೆ ಎಂದ ನಟಿ ರಶ್ಮಿಕಾ ಮಂದಣ್ಣ!

December 10, 2022
2022 ರಲ್ಲಿ ಗೂಗಲ್‌ನಲ್ಲಿ  ಅತಿಹೆಚ್ಚು ಹುಡುಕಿದ ಚಲನಚಿತ್ರಗಳ ಪಟ್ಟಿ ಬಿಡುಗಡೆ ; ಕಾಂತಾರ-ಕೆಜಿಎಫ್‌ಗೆ ಎಷ್ಟನೇ ಸ್ಥಾನ?
ಮನರಂಜನೆ

2022 ರಲ್ಲಿ ಗೂಗಲ್‌ನಲ್ಲಿ  ಅತಿಹೆಚ್ಚು ಹುಡುಕಿದ ಚಲನಚಿತ್ರಗಳ ಪಟ್ಟಿ ಬಿಡುಗಡೆ ; ಕಾಂತಾರ-ಕೆಜಿಎಫ್‌ಗೆ ಎಷ್ಟನೇ ಸ್ಥಾನ?

December 8, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.