ಬಡತನ ಸೂಚ್ಯಂಕ ವರದಿಯಲ್ಲಿ ಕರ್ನಾಟಕಕ್ಕೆ 19ನೇ ಸ್ಥಾನ

ನವದಹಲಿ ನ 27: ಕೇಂದ್ರ ನೀತಿ ಆಯೋಗವು ಬಡತನ ಸೂಚ್ಯಂಕ ವರದಿಯನ್ನು ಪ್ರಕಟಿಸಿದೆ ಈ ನೀತಿ ಆಯೋಗದ ಮೊದಲ ಬಹು ಆಯಾಮದ ಬಡತನ ಸೂಚ್ಯಂಕ (MPI) ವರದಿಯ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ. ಸೂಚ್ಯಂಕದ ಪ್ರಕಾರ, ಬಿಹಾರದ 51.91 ಶೇಕಡಾ ಜನಸಂಖ್ಯೆಯು ಬಡವರಾಗಿದ್ದರೆ, ಜಾರ್ಖಂಡ್‌ನಲ್ಲಿ 42.16 ಶೇಕಡಾ, ಉತ್ತರ ಪ್ರದೇಶದಲ್ಲಿ 37.79 ಶೇಕಡಾ. ಮಧ್ಯಪ್ರದೇಶ (ಶೇ 36.65) ಸೂಚ್ಯಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಮೇಘಾಲಯ (ಶೇ 32.67) ಐದನೇ ಸ್ಥಾನದಲ್ಲಿದೆ. ಇದೇ ವೇಳೇ ಪಟ್ಟಿಯಲ್ಲಿ ಕರ್ನಾಟಕ 19ನೇ ಸ್ಥಾನವನ್ನು ಪಡೆದಿದೆ.

ಕೇರಳ (ಶೇ. 0.71), ಗೋವಾ (ಶೇ. 3.76), ಸಿಕ್ಕಿಂ (ಶೇ. 3.82), ತಮಿಳುನಾಡು (ಶೇ. 4.89) ಮತ್ತು ಪಂಜಾಬ್ (ಶೇ. 5.59) ಭಾರತದಾದ್ಯಂತ ಕಡಿಮೆ ಬಡತನವನ್ನು ದಾಖಲಿಸಿವೆ ಮತ್ತು ಸೂಚ್ಯಂಕದ ಕೆಳಭಾಗದಲ್ಲಿವೆ.

ಕೇಂದ್ರಾಡಳಿತ ಪ್ರದೇಶಗಳ ಪೈಕಿ (ಯುಟಿಗಳು), ದಾದ್ರಾ ಮತ್ತು ನಗರ ಹವೇಲಿ (ಶೇ. 27.36), ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ (12.58), ದಮನ್ ಮತ್ತು ದಿಯು (ಶೇ. 6.82) ಮತ್ತು ಚಂಡೀಗಢ (ಶೇ. 5.97) ಬಡ ಕೇಂದ್ರಾಡಳಿತ ಪ್ರದೇಶಗಳಾಗಿ ಹೊರಹೊಮ್ಮಿವೆ.

ಪುದುಚೇರಿಯ ತನ್ನ ಜನಸಂಖ್ಯೆಯ ಶೇಕಡಾ 1.72 ರಷ್ಟು ಬಡವರಾಗಿದ್ದರೆ, ಲಕ್ಷದ್ವೀಪ (ಶೇ. 1.82), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಶೇ. 4.30) ಮತ್ತು ದೆಹಲಿ (ಶೇ. 4.79) ಉತ್ತಮವಾಗಿದೆ.

ಕರ್ನಾಟಕ ಜಿಲ್ಲೆಗಳಲ್ಲಿ ಯಾದಗಿರಿ ಅತಿ ಹೆಚ್ಚು ಬಡವರನ್ನು ಹೊಂದಿದ್ದು, ನಂತರದ ಸ್ಥಾನಗಳಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳು ಶ್ರೀಮಂತ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದ್ದರೇ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಮೈಸೂರು ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ.

ಕರ್ನಾಟಕದ ಯಾವ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ :
ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ 41.67%ರಷ್ಟು ಜನರು ಬಡವರಿದ್ದು ಇದು ಮೊದಲನೇ ಸ್ಥಾನವನ್ನು ಪಡೆದಿಕೊಂಡಿದೆ. ನಂತರದ ಎರಡನೇ ಸ್ಥಾನದಲ್ಲಿ ರಾಯಚೂರು (32.19%), ಕೊಪ್ಪಳ (24.6%), ವಿಜಯನಗರ ಜಿಲ್ಲೆ ಸೇರಿದಂತೆ ಬಳ್ಳಾರಿ(23.4%), ಬಿಜಾಪುರ(22.4%) ಕಲಬುರಗಿ (21.8%), ಗದಗ (20.27%), ಬಾಗಲಕೋಟೆ (20.23%), ಬೀದರ್ (19.42%), ಚಾಮರಾಜನಗರ (18.91%), ಚಿತ್ರದುರ್ಗ (15.79%), ಹಾವೇರಿ (15.61%), ಚಿಕ್ಕಬಳ್ಳಾಪುರ (15.16%), ತುಮಕೂರು (14.00%), ಉತ್ತರಕನ್ನಡ(13.21%), ಶಿವಮೊಗ್ಗ (12.72%), ಬೆಳಗಾವಿ (12.26%), ದಾವಣಗೆರೆ (11.71%), ಚಿಕ್ಕಮಗಳೂರು(11.19%), ಉಡುಪಿ(10.32%), ಕೋಲಾರ (10.30%), ಧಾರವಾಡ (9.65%), ರಾಮನಗರ (8.77%), ಕೊಡಗು (8.74%), ಬೆಂಗಳೂರು ಗ್ರಾಮಾಂತರ(8.39%), ಮೈಸೂರು(7.79%), ದಕ್ಷಿಣಕನ್ನಡ (6.69%), ಹಾಸನ(6.64%), ಮಂಡ್ಯ(6.62%), ಬೆಂಗಳೂರು (2.31) ಬಡವರಿದ್ದಾರಂತೆ

Exit mobile version