“ಮೊದಲು ಹಣೆಗೆ ಬಿಂದಿ ಹಾಕಮ್ಮಾ, ನಿನ್ನ ಗಂಡ ಬದುಕಿದ್ದಾರಾ” – ವಿವಾದ ಸೃಷ್ಟಿಸಿದ ಸಂಸದ ಮುನಿಸ್ವಾಮಿ ಹೇಳಿಕೆ

Kolar : ಕೋಲಾರ ಸಂಸದ ಎಸ್. ಮುನಿಸ್ವಾಮಿ (muniswamy abused words)ಮಹಿಳಾ ವ್ಯಾಪಾರಿಗೆ ಹಣೆಗೆ ಬಿಂದಿ ಹಾಕುವಂತೆ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ಆಗುತ್ತಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಕೋಲಾರ ಸಂಸದ ಎಸ್.ಮುನಿಸ್ವಾಮಿ ಅವರು ಮಹಿಳಾ ದಿನಾಚರಣೆ ನಿಮಿತ್ತ ಕೋಲಾರದಲ್ಲಿ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಬಟ್ಟೆಗಳನ್ನು ಮಾರಾಟಕ್ಕೆ ಇಟ್ಟಿದ್ದ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರು ಹಣೆಗೆ ಬಿಂದಿ ಧರಿಸಿರಲಿಲ್ಲ.

ಇದನ್ನು ಓದಿ: ನಾಳೆಯೇ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ – ಶಾಸಕ ಪುಟ್ಟರಾಜು

ಇದನ್ನು ಗಮನಿಸಿದ ಸಂಸದ ಮುನಿಸ್ವಾಮಿ ಅವರು, “ಯಾಕಮ್ಮಾ ಹಣೆಗೆ ಬಿಂದಿ ಹಾಕಿಲ್ಲ” ಎಂದು ಕೇಳಿದರು. ನಂತರ “ಮೊದಲು ಬಿಂದಿ ಹಾಕಿಕೊಳ್ಳಿ. ನಿಮ್ಮ ಪತಿ ಬದುಕಿದ್ದಾರೆ ಅಲ್ಲವೇ? ನಿಮಗೆ ಕಾಮನ್ ಸೆನ್ಸ್ ಇಲ್ಲ”

ಎಂದು ಕೋಲಾರದ ಬಿಜೆಪಿ ಲೋಕಸಭಾ ಸಂಸದರು ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನು ತೀವ್ರವಾಗಿ ಖಂಡಿಸಿರುವ ವಿಪಕ್ಷ ಕಾಂಗ್ರೆಸ್“ಅಂತಹ ಘಟನೆಗಳು ಬಿಜೆಪಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಬಿಜೆಪಿ ಮತ್ತು ಆರ್ ಎಸ್ ಎಸ್(RSS) ನಲ್ಲಿ ಮಹಿಳೆಯರಿಗೆ ಗೌರವವಿಲ್ಲ.

ಇದು ಮನುವಾದಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಒರ್ವ ಸಂಸದ ಈ ರೀತಿಯ ಹೇಳಿಕೆ ನೀಡುವ ಮೂಲಕ ಮಹಿಳೆಯರ ಸ್ಥಾನಮಾನಕ್ಕೆ ಧಕ್ಕೆಯುಂಟು ಮಾಡಿದ್ದಾರೆ.

ಇದನ್ನು ಕಾಂಗ್ರೆಸ್ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು (muniswamy abused words) ಹೇಳಿದೆ.

ಇನ್ನು ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂ (Karti P Chidambaram) ಕೂಡ ಈ ವಿಡಿಯೋಗೆ ಪ್ರತಿಕ್ರಿಯಿಸಿ, “ಬಿಜೆಪಿ ಭಾರತವನ್ನು “ಹಿಂದುತ್ವ ಇರಾನ್” ಆಗಿ ಪರಿವರ್ತಿಸುತ್ತದೆ.

ಬಿಜೆಪಿಯ ಅಯತೊಲ್ಲಾಗಳು ಬೀದಿಗಳಲ್ಲಿ ಗಸ್ತು ತಿರುಗುವ “ನೈತಿಕ ಪೊಲೀಸ್” ಆವೃತ್ತಿಯನ್ನು ಹೊಂದಿರುತ್ತಾರೆ ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.

ತೆವಲು ಮಾತುಗಳಿಗೆ ಪದೇ ಪದೇ ಸುದ್ದಿಯಾಗುವ ಕೋಲಾರ ಸಂಸದ ಮಹಿಳಾ ದಿನಾಚರಣೆ ದಿನದಂದೇ ಹಣೆಯಲ್ಲಿ ತಿಲಕ ಇಲ್ಲವೆಂದು ಹಂಗಿಸಿ ಗಂಡ ಸತ್ತಿರುವನೇ ಎಂದು ಸಾರ್ವಜನಿಕವಾಗಿ ಹೀಯಾಳಿಸಿ ತನ್ನ ಮತ್ತು ಬಿಜೆಪಿ ಮನಸ್ಥಿತಿ ತೆರೆದು ಇಟ್ಟಿದ್ದಾರೆ.

ಮನುವಾದಿ ಮನಸ್ಥಿತಿ ಬಿಂಬಿಸುವ ಸಂಸದ ಮುನಿಸ್ವಾಮಿ ಇದಕ್ಕಿಂತ ಬೇರೆ ಏನು ಹೇಳುವರು ಎಂದು ಎಂದು ಕಾಂಗ್ರೆಸ್ವಕ್ತಾರ ರಮೇಶ್ಬಾಬು ಟ್ವೀಟ್ಮಾಡಿದ್ದಾರೆ.

Exit mobile version