ಗುಂಡಿನ ದಾಳಿ: ಫೇಸ್‌ಬುಕ್ ಲೈವ್ ವೇಳೆ ಗುಂಡಿನ ದಾಳಿ, ಶಿವಸೇನೆ ಮುಖಂಡ ಸಾವು

Maharashtra: ಫೇಸ್​ಬುಕ್​ ಲೈವ್ (Murder In Facebook Live) ಮಾಡುತ್ತಿದ್ದ ​ವೇಳೆ ಫೈರಿಂಗ್​ ಮಾಡಿರೋ ಘಟನೆ ದಹಿಸರ್ ಪ್ರದೇಶದಲ್ಲಿ ನಡೆದಿದ್ದು, ಫೇಸ್ಬುಕ್

ಲೈವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉದ್ಧವ್ ಠಾಕ್ರೆ ಗುಂಪಿನ ನಾಯಕ ಅಭಿಷೇಕ್ ಘೋಸಲ್ಕರ್ (Abhishek Ghosalkar) ಮೇಲೆ ಅವರೊಂದಿಗಿದ್ದ ವ್ಯಕ್ತಿಯೊಬ್ಬರು ಗುಂಡಿನ

ದಾಳಿ ನಡೆಸಿರುವ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಹಿಸರ್ ಪ್ರದೇಶದ MHB ಕಾಲೋನಿಯಲ್ಲಿರುವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಭಯಾನಕ ದೃಶ್ಯ

ಸೆರೆಯಾಗಿದ್ದು ಶಿವಸೇನೆ ಯುಬಿಟಿ ಮುಖಂಡ​ ಅಭಿಷೇಕ್ ಫೇಸ್​ಬುಕ್​ ಲೈವ್​ನಲ್ಲಿ ಮಾತಾಡುತ್ತಿದ್ದರು. ಇದೇ ವೇಳೆ ಲೈವ್​ನಲ್ಲಿ ಜೊತೆಯಾಗಿ ಕುಳಿತಿದ್ದ ಮೋರಿಸ್​ ಭಾಯ್ ಎಂಬಾತ

ಈ ಫೈರಿಂಗ್ (Murder In Facebook Live) ಮಾಡಿದ್ದಾನೆ.

ಮೊದಲು ಲೈವ್​ ಮುಗಿಸಿಕೊಂಡು ಎದ್ದೇಳುತ್ತಿದ್ದ ಅಭಿಷೇಕ್​ ಎದೆಯ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಬಳಿಕ ಮತ್ತೆರೆಡು ಗುಂಡು ಹಾರಿಸಿದ್ದಾನೆ . ಗಂಭೀರ ಗಾಯಗೊಂಡ ಘೋಸಲ್ಕರ್

ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಘೋಸಲ್ಕರ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಗುಂಡು ಹಾರಿಸಿದ ವ್ಯಕ್ತಿ ತಾನಗೆ ತಾನೇ

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಭಿಷೇಕ್ ಘೋಷಾಲ್ಕರ್ ಮೇಲೆ ಗುಂಡು ಹಾರಿಸಿದ ಆರೋಪಿ ಮೋರಿಸ್ ಬಾಯ್

(Morris Boy) ಎನ್ನಲಾಗಿದ್ದು ಈತನ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಇನ್ನು ಇವರಿಬ್ಬರೂ ಅಕಪಕ್ಕದಲ್ಲಿ ಕಚೇರಿಯನ್ನು

ಹೊಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಷ್ಟು ಮಾತ್ರವಲ್ಲದೆ, ಸ್ಥಳೀಯ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಲು ಅವರ ನಡುವೆ ಜಗಳ ನಡೆದಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿಕೊಂಡಿದ್ದಾರೆ.ಪೊಲೀಸರು ಪ್ರಕರಣ

ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಇಂದು ರೈತರಿಂದ ದಿಲ್ಲಿ ಚಲೋ ಪ್ರತಿಭಟನೆ: ಎಲ್ಲೆಲ್ಲೂ ಖಾಕಿ ಕಣ್ಗಾವಲು!

Exit mobile version