ಈ ಮಾಫಿಯಾ ವಿರುದ್ಧ ದನಿ ಎತ್ತಿದ್ರೆ ಕಿಡ್ನಾಪ್ ಮಾಡಿ ಮರ್ಡರ್ ಮಾಡ್ತಾರೆ

If you raise your voice on illegal mafia, You will be kidnapped and murdered ..

ಸ್ನೇಹಿತ್ರೆ ಇವತ್ತು ನಾನು ನಿಮಗೆ ಒಂದು ಭಯಾನಕ ಸ್ಟೋರಿ ಹೇಳ್ತೀನಿ. ಈ ಸ್ಟೋರಿಯಲ್ಲಿ ನೀವು ಅಕ್ರಮ ಮರಳುಗಾರಿಕೆ ವಿರುದ್ಧ ದನಿ ಎತ್ತಿದವರಿಗೆ ಮಾಫಿಯಾ ಮಂದಿ ಯಾವ ರೀತಿ ಹಿಂಸೆ ಕೊಡುತ್ತಿದ್ದಾರೆ. ಇದನ್ನು ನೋಡಿಯೂ ಜಿಲ್ಲಾಡಳಿತ ಯಾವ ರೀತಿ ಮೌನ ವಹಿಸಿದೆ ಅನ್ನೋ ಗಂಭೀರ ವರದಿಯನ್ನು ಹನುಮಂತ ಭಂಗಿ ಕಳುಹಿಸಿದ್ದಾರೆ. ಅದನ್ನ ನೋಡ್ಕೊಂಡು ಬರೋಣ ಬನ್ನಿ. ನಮ್ಮ ರಾಜ್ಯದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮೇದುರ್ಗಾಳ ಗ್ರಾಮದಲ್ಲಿ ನಡೆದ ಸತ್ಯ ಕತೆ.

ಅಕ್ರಮ ಮರಳುಗಾರಿಕೆ ವಿರುದ್ಧ ದನಿ ಎತ್ತಿದ ಸಾಮಾಜಿಕ ಕಾರ್ಯಕರ್ತ, ವಿಜಯಟೈಮ್ಸ್‌ನ ಸಿಟಿಜನ್‌ ಜರ್ನಲಿಸ್ಟ್‌ ಹನುಮಂತ ಭಂಗಿ ಅವರನ್ನು ಮಾಫಿಯಾ ಮಂದಿ ಕಿಡ್ನಾಪ್‌ ಮಾಡಿ ಹೊಡೆಯುತ್ತಿರೋ ದೃಶ್ಯವಿದು.ಅಷ್ಟು ಮಾತ್ರವಲ್ಲ, ಹನುಮಂತ ಭಂಗಿ ಅವರು ಅಕ್ರಮ ಮರಳುಗಾರಿಕೆ ವಿರುದ್ಧ ಹಣ ಗಳಿಸಲು ವಿರೋಧಿಸುತ್ತಿರುವುದಾಗಿ ಬಿಂಬಿಸಲು ಅವರ ಕೈಯಲ್ಲೇ ಹಣ ಎಣಿಸುವಂತೆ ಮಾಡಿ ವಿಡಿಯೋ ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದಾರೆ. ಹನುಮಂತ  ಅವರನ್ನು ಕಿಡ್ನಾಪ್‌ ಮಾಡಿದ ದುರುಳರೇ ಈ ವಿಡಿಯೋ ರೆಕಾರ್ಡ್‌ ಮಾಡಿ, ಹಣವನ್ನು ವಾಪಾಸ್‌ ಪಡೆದು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರೋದು. ಆ ಮೂಲಕ ದನಿ ಎತ್ತಿದವರ ದನಿಯನ್ನೇ ಅಡಗಿಸಲೆತ್ನಿಸಿದ್ರು.

ಆದ್ರೆ ಈ ಮಾಫಿಯಾ ಮಂದಿ ಹನುಮಂತ ಅವರ ಮೇಲೆ ಎಷ್ಟೇ ದೌರ್ಜನ್ಯ ಮಾಡಿದ್ರೂ, ಅದಕ್ಕೆ ಜಗ್ಗದೆ ಅವರು ಪೊಲೀಸ್‌ಗೆ ದೂರು ನೀಡಿ, ಈ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ಯಸ್‌, ರಾಯಚೂರು ಜಿಲ್ಲೆಯ ದೇವದುರ್ಗಾ ತಾಲ್ಲೂಕಿನ ಮೇದುರ್ಗಾಳ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ಭಯಾನಕವಾಗಿ ನಡೀತಾ ಇದೆ. ಇಲ್ಲಿ ರಾತ್ರಿ ಹಗಲು ಎನ್ನದೆ ಮರಳುಗಾರಿಕೆ ನಡೆಯುತ್ತಿದೆ. ಅಷ್ಟೇ ಅಲ್ಲ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲೂ  ಸೇರಿ ಇವರು ಎರಡು ಜಿಲ್ಲೆಗಳಲ್ಲಿ ನಡೆಯುತ್ತಿರುವ ಅಕ್ರಮದ ವಿರುದ್ದ ಹೋರಾಡುತ್ತಿದ್ದಾರೆ.ಇಲ್ಲಿ ದಂಧೆಕೋರರು ಯಾರ ಭಯವೂ ಇಲ್ಲದೆ ಬಿಂದಾಸಾಗಿ ಭೂಮಿ ತಾಯಿಯ ಒಡಲಿಗೆ ಕೊಡಲಿ ಹಾಕತ್ತಾನೇ ಇದ್ದಾರೆ . ಬಗೆದಷ್ಟೂ ತ್ರಪ್ತಿ ಇಲ್ಲ. ಇವರ ದುರಾಸೆಗೆ ಮಿತಿಯೇ ಇಲ್ಲ  ಅನ್ನೋದು ಊರಿನ ಜನರ ಆರೋಪ

ಈ ಮರಳು ಮಾಫಿಯಾದಲ್ಲಿ ನೇರವಾಗಿ ಶಾಸಕ ಶಿವನ ಗೌಡ ಹಾಗೂ ಮಾಜೀ ಸಂಸದ ಬಿ ಬಿ ನಾಯಕ ಅವರ ಅಳಿಯ ಶ್ರೀನಿವಾಸ ನಾಯಕ ಮತ್ತು ಹಾಲಿ ಸಂಸದರ ರಾಜಾ ಅಮರೇಶ್ವರ ನಾಯಕ್ ಅವರ ಅಳಿಯ ಚಂದ್ರಹಾಸ ನಾಯಕನೇ ಈ ಅಕ್ರಮದ ಮೈನ್‌ ಕಿಂಗ್‌ಪಿನ್ ಅನ್ನೋದು ಸ್ಥಳೀಯರ ನೇರ ಆರೋಪ  ಮೂರು ಜನಪ್ರತಿನಿಧಿಗಳು ಹಾಗೂ ಅವರ ಅಳಿಯಂದಿರು ಶಾಮೀಲಾಗಿ ಈ ಅಕ್ರಮ ಮರಳುಗಾರಿಕೆಯನ್ನು ನಡೆಸುತ್ತಿರೋದ್ರಿಂದ ಇವರ ವಿರುದ್ಧ ದನಿ ಎತ್ತಲು ಯಾರೂ ಮುಂದಾಗುತ್ತಿಲ್ಲ. ಯಾರಾದ್ರೂ ದೂರು ಕೊಟ್ಟು ಕೇಸ್‌ ಹಾಕಿದ್ರೂ ಈ ದಂಧೆಕೋರರು ಕ್ಯಾರೇ ಅನ್ನದೆ ನಿರಾತಂಕವಾಗಿ ಅಕ್ರಮ ಮರಳುಗಾರಿಕೆ ಮುಂದುವರೆಸುತ್ತಿದ್ದಾರೆ ಎಂಬುದು ಸ್ಥಳೀಯರ ದೂರು.ಅಕ್ರಮ ಮರಳುಗಾರಿಕೆಯ ವಿರುದ್ದ ಹನುಮಂತ ಅವರು ಸುಮಾರು 2015 ರಿಂದ ಈವರೆಗೆ ಅಂದರೆ 2021 ವರೆಗೂ ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದಾರೆ.  ಅಕ್ರಮವನ್ನು ಪ್ರಶ್ನಿಸಿದ ಸಾಮಾಜಿಕ ಕಾರ್ಯಕರ್ತರಾದ ಹನುಮಂತ ಭಂಗಿಯವರನ್ನು  ಕಿಡ್ನಾಪ್ ಮಾಡಿ,  ಹೊಡೆದು ಹಿಂಸಿಸಿ ರಾಕ್ಷಸತನ ಪ್ರದರ್ಶಿಸಿದ್ದಾರೆ.

ಪರ್ತಾಪುರ ಕರಿಕಳ್ಳಿ ಬಾಗೂರು, ನಿಲುವಂಜಿ, ಚಿಕ್ಕರಾಕುಂಟೆ ಮುಂತಾದ ಹಳ್ಳಿಗಳಲ್ಲಿ ಶಾಸಕ, ಸಂಸದರ ಅಳಿಯಂದಿರದ್ದೇ ಕಾರಬಾರು.  ಅಕ್ರಮವನ್ನು ಪ್ರಶ್ನಿಸಿದವರ ಪ್ರಾಣ ತೆಗೆಯಲು ಮುಂದಾಗುತ್ತಾರೆ ಎಂಬುದು ಜನರ ದೂರು.  ಈ ದುಷ್ಟರು ಕಾಗದ ಪತ್ರಗಳನ್ನು ತಂದು ನಮ್ಮ ತಂಟೆಗೆ ಬರುವುದಿಲ್ಲ ಅಂತ ಹೇಳಿಸಿ ಅವರಿಂದ ಸೈನ್ ಮಾಡಿಸಿದ್ದಾರೆ ಈ ವಿಡಿಯೋವನ್ನು ನೀವೇ ನೋಡಬಹುದು ಇಲ್ಲಿ. ಈ ದೊಡ್ಡವರ ಅಳಿಯಂದಿರಿಗೆ ರಾಜಕಾರಣಿಗಳ ಹಾಗೂ ಮೇಲಧಿಕಾರಿಗಳ ರಕ್ಷಣೆ ಇದ್ದು ಯಾವ ಭಯವೂ ಇಲ್ಲದೆ ಕಾನೂನು ಬಾಹಿರವಾಗಿ ಪರಿಸರ ನಾಶ ಮಾಡುತ್ತಿದ್ದಾರೆ. ಜನಸಾಮಾನ್ಯರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ  ಪ್ರಶ್ನಿಸಿದವರ , ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ  ಎಂಬುದು  ಹನುಮಂತ  ಅವರ ದೂರು ಈ ಪರಿಸರದಲ್ಲಿ ಘನ ವಾಹನಗಳು 12 ಚಕ್ರದ ವಾಹನಗಳು ನಿರಂತರ ಚಲಿಸುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ .ಹನುಮಂತ ಅವರನ್ನು ಕಿಡ್ನಾಪ್ ಮಾಡಿ ಸಾಕಷ್ಟು ಹಲ್ಲೆ ಮಾಡಿದ್ದಾರೆ. ಹೊಡೆದು ಬಡಿದು ಬೆದರಿಸಿದ್ದಾರೆ.  ಅಲ್ಲದೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಕೊಲೆ ಮಾಡುತ್ತೇವೆಂಬುದಾಗಿ ಬೆದರಿಸುತ್ತಿದ್ದಾರೆಂದು ಅವರೇ ಹೇಳುತ್ತಾರೆ.

ಎಷ್ಟೇ ಕಷ್ಟ ಕೊಟ್ಟರೂ ಹನುಮಂತ ಅವರು ಈ ಮರಳು ಮಾಫಿಯಾ ವಿರುದ್ದ ಊರಿನ ಒಳಿತಿಗಾಗಿ ಹೋರಾಡುತ್ತಿದ್ದಾರೆ. ಈ ಊರಿನ ಇನ್ನುಳಿದವರೂ ಹನುಮಂತ ಅವರಿಗೆ ಸಾಥ್‌ ಕೊಟ್ಟರೆ ಅವರ ಹೋರಾಟಕ್ಕೆ ನ್ಯಾಯ ಸಿಗಬಹುದೇನೋ. ಆದರೆ ಹಣ ಅಧಿಕಾರ ಇರುವವರಿಗೆ ಹೆದರಿ ನ್ಯಾಯಕ್ಕಾಗಿ ಹೋರಾಡಲು ಜನ ದೈರ್ಯ ಮಾಡಿ ಮುನ್ನುಗ್ಗಬೇಕು ಅಷ್ಟೆ. ನೋಡಿದಿರಲ್ಲಾ ವೀಕ್ಷಕರೆ ಅನ್ಯಾಯದ ವಿರುದ್ದ ಹೋದವರಿಗೆ ಧನದಾಹಿಗಳು ಯಾವ ರೀತಿ ಹಿಂಸೆ ನೀಡುತ್ತಾರೆಂಬುದನ್ನು? ಹನುಮಂತ ಅವರ ಹೋರಾಟಕ್ಕೆ ಜಯ ಸಿಗಲಿ, ಸಾರ್ವಜನಿಕರಿಗೆ ನೆಮ್ಮದಿ ಹಾಗು ಅಲ್ಲಿನ ಭೂಮಿ ತಾಯಿಗೆ ವಿಶ್ರಾಂತಿ ಸಿಗಲಿ ಅಕ್ರಮದ ವಿರುದ್ಧ  ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಲಿ ಎಂಬುದೇ ವಿಜಯಾ ಟೈಮ್ಸ್ ಆಶಯವಾಗಿದೆ

Exit mobile version