ಪ್ರಧಾನಿ ಹೆಸರು, ಫೋಟೋ ಬಳಸಿ ಮತ ಕೇಳಿದ್ರೆ ಬಿಜೆಪಿ ನಾಯಕರಿಗೆ ಚಪ್ಪಲಿಯಲ್ಲಿ ಹೊಡೆಯಿರಿ : ಪ್ರಮೋದ್‌ ಮುತಾಲಿಕ್

Karnataka : ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಹೆಸರಿನಲ್ಲಿ ಮತ ಕೇಳಿದರೆ ಬಿಜೆಪಿ ನಾಯಕರಿಗೆ ಚಪ್ಪಲಿಯಿಂದ ಹೊಡೆಯಿರಿ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌(Pramod Muthalik) ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ (muthalik slams bjp) ನಡೆಸಿದ್ದಾರೆ.

ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ದಿನದಿಂದ ದಿನಕ್ಕೆ ಪ್ರಚಾರಗಳು, ಮತ ಕೇಳುವ ಕೆಲಸಗಳು ಭರ್ಜರಿಯಾಗಿ ಸಾಗುತ್ತಿದೆ.

ಈ ನಡುವೆ ರಾಜ್ಯದ ಪಕ್ಷಗಳು ಕೂಡ ತಮ್ಮ ಪಕ್ಷಕ್ಕೆ ಮತ ಕೇಳುವ ಕೆಲಸಗಳನ್ನು ಬೆಂಬಿಡದೆ ಮುನ್ನಡೆಸುತ್ತಿದೆ.

ಈ ಮಧ್ಯೆ ಬಿಜೆಪಿ (BJP)ಮತ್ತು ಬಿಜೆಪಿ ನಾಯಕರನ್ನು ನೇರವಾಗಿ ಆರೋಪಿಸಿದ ರಾಷ್ಟ್ರೀಯ ಹಿಂದೂ ಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌,

ಪ್ರಧಾನಿ ಹೆಸರು, ಫೋಟೋ ಬಳಸಿ ಮತ ಕೇಳಿದ್ರೆ ಬಿಜೆಪಿ ನಾಯಕರಿಗೆ ಚಪ್ಪಲಿಯಲ್ಲಿ ಹೊಡೆಯಿರಿ! ಪ್ರಧಾನಿ ಮೋದಿ ಅವರ ಹೆಸರು ಮತ್ತು ಫೋಟೋ ಬಳಸದೆ (muthalik slams bjp) ಮತ ಸೆಳೆಯಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ, ಪ್ರಮೋದ್ ಮುತಾಲಿಕ್(Pramod Muthalik) ರಾಜ್ಯದ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು,

ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಬಿಜೆಪಿ ಅವರು ಮತ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

https://youtu.be/PPdl43yQWH4

ಪ್ರಧಾನಿ ಮೋದಿ ಅವರ ಹೆಸರು ಮತ್ತು ಫೋಟೋ ಬಳಸದೆ ಮತ ಸೆಳೆಯಲು ಬಿಜೆಪಿ ನಾಯಕರಿಗೆ ನೇರ ಸವಾಲು ಹಾಕಿದರು.

ಈ ಬಾರಿ ಮೋದಿ ಹೆಸರನ್ನು ಬಳಸದೆ ಮತ ಕೇಳಿ. ಕರಪತ್ರಗಳು ಮತ್ತು ಬ್ಯಾನರ್‌ಗಳಲ್ಲಿ (Banner)ಮೋದಿಯವರ ಫೋಟೋಗಳು ಬಳಸದೆ ಕೇಳಿ.

ನೀವು ಅಭಿವೃದ್ಧಿ ಮಾಡಿದ್ದೀರಿ, ಗೋವುಗಳನ್ನು ರಕ್ಷಿಸಿದ್ದೀರಿ, ಹಿಂದುತ್ವಕ್ಕಾಗಿ ಕೆಲಸ ಮಾಡಿದ್ದೀರಿ ಎಂದು ಮತದಾರರಿಗೆ ಹೇಳಿ.

ಇಷ್ಟು ದುಡಿದಿದ್ದೀನಿ ಎಂದು ಎದೆಗೆ ಹೊಡೆದು ಅಭಿಮಾನದಿಂದ ಮತ ಕೇಳಲು ಪ್ರಯತ್ನಿಸಿ ಎಂದು ಮುತಾಲಿಕ್ ಕಾರವಾರದಲ್ಲಿ ಗುಡುಗಿದ್ದಾರೆ.

ಭಾರತೀಯ ಜನತಾ ಪಕ್ಷದ ಪರವಾಗಿ ಮತ ಹಾಕಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಅವರು, ಕೇಸರಿ ಪಕ್ಷಕ್ಕೆ ಮೋದಿ ಹೆಸರನ್ನು ಹೇಳುವುದು ಮಾತ್ರ ಗೊತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರು ಮತ್ತೆ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ದಯವಿಟ್ಟು ನಿಮ್ಮ ಮತವನ್ನು ಮೋದಿಗೆ ಹಾಕಿ, ದಯವಿಟ್ಟು ನಿಮ್ಮ ಮತವನ್ನು ಮೋದಿಗೆ ಹಾಕಿ ಎಂದು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುತ್ತಾರೆ.

ಮೋದಿ ಅವರ ಹೆಸರು ಹೇಳಿದರೆ ಚಪ್ಪಲಿಯಿಂದ ಹೊಡೆಯಿರಿ. ಇವರೆಲ್ಲಾ ನಾಲಾಯಕರು! ಈ ನಿಷ್ಪ್ರಯೋಜಕರು ಮೋದಿಯವರ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

Exit mobile version