ಮೈಸೂರು ಏರ್‌ಪೋರ್ಟ್‌ನಿಂದ ಬೆಂಗಳೂರು ಸೇರಿದಂತೆ 4 ಮಾರ್ಗಗಳ ವಿಮಾನ ಹಾರಾಟ ರದ್ದು

Mysore: ಬಹಳ ನಿರೀಕ್ಷೆಯೊಂದಿಗೆ ಶುರುವಾಗಿದ್ದ ಮೈಸೂರು (mysore bangalore flight cancel) ವಿಮಾನ ನಿಲ್ದಾಣದಿಂದ ದಿನಕ್ಕೆ 2-3 ವಿಮಾನಗಳಷ್ಟೇ ಬಂದು ಹೋಗುತ್ತಿದ್ದು, ಕೇವಲ 300

ಚಿಲ್ಲರೆ ಜನರಷ್ಟೇ ವಿಮಾನ ನಿಲ್ದಾಣ ಬಳಕೆ ಮಾಡಿಕೊಳ್ಳುತ್ತಿದ್ದು, ಸದ್ಯ ನಿಲ್ದಾಣವು ಆರು ಮಾರ್ಗಗಳಿಗೆ ಬದಲಾಗಿ ಕೇವಲ ಹೈದರಾಬಾದ್, ಚೆನ್ನೈ ಮಾರ್ಗಗಳಿಗೆ ಮಾತ್ರ ಸೇವೆ ನೀಡಲು ಬಳಕೆಯಾಗುತ್ತಿದೆ.

ಹುಬ್ಬಳ್ಳಿ, ಕೊಚ್ಚಿ, ಬೆಂಗಳೂರು (mysore bangalore flight cancel) ಹಾಗೂ ಗೋವಾ ಮಾರ್ಗಗಳ ಸೇವೆ ರದ್ದಾಗಿದೆ.

ಮೈಸೂರಿನಲ್ಲಿ ಸರ್ಕಾರ ನೀಡುತ್ತಿದ್ದ ಸಬ್ಸಿಡಿ ಸ್ಥಗಿತ, ಏ‌ರ್‌ಕ್ರಾಫ್ಟ್‌ಗಳ (Aircraft) ಸಂಖ್ಯೆ ಇಳಿಮುಖ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ನಾಲ್ಕು ವಿಮಾನ ಸೇವೆಗಳನ್ನು ರದ್ದುಪಡಿಸಲಾಗಿದ್ದು,

ಕಳೆದ ಮೂರು ತಿಂಗಳಿನಿಂದ ಚಾಲ್ತಿಯಲ್ಲಿದ್ದ ವಿಮಾನಗಳ ದಿಢೀರ್ ನಿಲುಗಡೆಯಿಂದ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ನಿಲ್ದಾಣಕ್ಕೆ ಈಗ ಮಂಕು ಆವರಿಸಿದಂತಾಗಿದೆ.

ಈ ನಿಲ್ದಾಣವು ಆರು ಮಾರ್ಗಗಳಿಗೆ ಬದಲಾಗಿ ಕೇವಲ ಹೈದರಾಬಾದ್(Hyderbad) , ಚೆನ್ನೈ ಮಾರ್ಗಗಳಿಗೆ ಸೇವೆ ನೀಡಲು ಮಾತ್ರ ಬಳಕೆಯಾಗುತ್ತಿದ್ದು, ಸೋಮವಾರ, ಬುಧವಾರ, ಶುಕ್ರವಾರ,

ಭಾನುವಾರ ಸೇರಿದಂತೆ ವಾರಕ್ಕೆ ನಾಲ್ಕು ದಿನ 3 ಹಾಗೂ ಇನ್ನುಳಿದ ದಿನ ಕೇವಲ 2 ವಿಮಾನಗಳು ನಿಲ್ದಾಣಕ್ಕೆ ಬಂದು ಹೋಗುತ್ತಿವೆ. 2 ವಿಮಾನ ಹೈದರಾಬಾದ್ ಹಾಗೂ 1 ಚೆನ್ನೈಗೆ (Chennai)

ಸೇವೆ ನೀಡುತ್ತಿವೆ.

ಮೈಸೂರು-ಬೆಂಗಳೂರು ನಡುವೆ ಎಕ್ಸ್‌ಪ್ರೆಸ್ ವೇ (Express Way) ನಿರ್ಮಾಣವಾದ ನಂತರ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ಬೆಲೆಯಲ್ಲಿ ಸೇವೆ ಪಡೆಯಬಹುದು ಎಂಬ ಕಾರಣಕ್ಕೆ ರಸ್ತೆ ಮಾರ್ಗವನ್ನೇ

ಹೆಚ್ಚು ಮಂದಿ ಬಳಕೆ ಮಾಡಲು ಶುರು ಮಾಡಿದ್ದರಿಂದ ಈ ಮಾರ್ಗದಲ್ಲಿ ವಿಮಾನಯಾನ ರದ್ದಾಗಿದ್ದು, ಕೇವಲ ಆರು ತಿಂಗಳ ಹಿಂದೆ ಮೈಸೂರು ನಿಲ್ದಾಣದಿಂದ ಹುಬ್ಬಳ್ಳಿ, ಕೊಚ್ಚಿ, ಬೆಂಗಳೂರು, ಗೋವಾ,

ಚೆನ್ನೈ ಹಾಗೂ ಹೈದರಾಬಾದ್‌ಗೆ ಸೇವೆ ನೀಡಲಾಗುತ್ತಿತ್ತು.

ಆದರೆ ನಂತರದ ದಿನಗಳಲ್ಲಿ ಕ್ರಮೇಣ ಹುಬ್ಬಳ್ಳಿ, ಕೊಚ್ಚಿ, ಬೆಂಗಳೂರು, ಗೋವಾ (Goa) ಮಾರ್ಗಗಳು ರದ್ದಾಗಿದ್ದು, ಉಳಿದಂತೆ ಗೋವಾ, ಕೊಚ್ಚಿ, ಹುಬ್ಬಳ್ಳಿ ಮಾರ್ಗದ ಸೇವೆಗೆ ಪ್ರಯಾಣಿಕರಿಂದ ಬೇಡಿಕೆ

ಇತ್ತು. ಆದರೆ ವಿಮಾನ ನಿಲ್ದಾಣ ಪ್ರಾಧಿಕಾರ ಈ ಮಾರ್ಗದ ಸೇವೆಯನ್ನು ಕಳೆದ ಮೂರು ತಿಂಗಳಿಂದ ಸ್ಥಗಿತಗೊಳಿಸಿದ್ದು, ಇತ್ತೀಚೆಗಷ್ಟೇ ಗೋವಾ ಫ್ಲೈಟ್‌ ಸೇವೆಯನ್ನು ಹಿಂಪಡೆಯಲಾಗಿದೆ.

ಸೇವೆ ಸ್ಥಗಿತಗೊಳಿಸಲು ಕಾರಣಗಳು:
ನಾನಾ ತಾಂತ್ರಿಕ ಕಾರಣಗಳು ಎದುರಾಗಿದ್ದು, ಈಗಾಗಲೇ ಇರುವ ಮಾರ್ಗಗಳಲ್ಲಿ ಸೇವೆ ನೀಡಲು ವಿಮಾನಗಳ ಸಂಖ್ಯೆ ಕಡಿಮೆ ಇದೆ. ಮುಖ್ಯವಾಗಿ ಕೆಲವೊಂದು ಮಾರ್ಗಗಳಿಗೆ ಉಡಾನ್ ಯೋಜನೆಯಂತೆ

ಕೇಂದ್ರ ಸರ್ಕಾರ ನೀಡುತ್ತಿದ್ದ ಸಬ್ಸಿಡಿ ರದ್ದಾಗಿದ್ದು, ಆರಂಭದಲ್ಲಿಯೇ ಮೂರು ವರ್ಷಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಲಾಗಿತ್ತು.

ಕೆಲವು ಮಾರ್ಗಗಳಿಗೆ ನೀಡಲಾಗುವ ಸಬ್ಸಿಡಿಯ ಮೂರು ವರ್ಷಗಳ ಅವಧಿ ಅಪೂರ್ಣಗೊಂಡಿದ್ದು, ಹಾಗಾಗಿ ಸರ್ಕಾರ ಆ ಮಾರ್ಗಗಳ ಸಬ್ಸಿಡಿಯನ್ನು ರದ್ದುಪಡಿಸಿ ಬೇರೆ ಮಾರ್ಗಗಳಿಗೆ ನೀಡಿದೆ. ಹೊಸದಾಗಿ

ಮತ್ತೆ ಸಬ್ಸಿಡಿ ನೀಡಿದಲ್ಲಿ ಮಾತ್ರವೇ ಈ ಮಾರ್ಗಗಳು ಕಾರ್ಯನಿರ್ವಹಿಸಲಿವೆ ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಬಿ.ಆರ್. ಅನೂಪ್‌ (B.R.Anoop) ತಿಳಿಸಿದ್ದಾರೆ.

ಇದನ್ನು ಓದಿ: ಗೋಮಾಂಸ ರಫ್ತಿನ ಶ್ರೇಯಸ್ಸು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು : ನಟ ಚೇತನ್

Exit mobile version