ಮೈಸೂರು ಗ್ಯಾಂಗ್ ರೇಪ್ ಆರೋಪಿಗಳ ಬಂಧನ

ಮೈಸೂರು ಆ 28 :  ಮೈಸೂರು ಗ್ಯಾಂಗ್ ರೇಪ್ ಪ್ರಕರಣವಾಗಿ ಸುಮಾರು 86 ಗಂಟೆಗಳ ಅವಧಿಯಲ್ಲೇ ಈ ಪ್ರಕರಣವನ್ನು ಬೇಧೀಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿಒಟ್ಟು 6 ಆರೋಪಿಗಳಿದ್ದು ಇವರಲ್ಲಿ 5 ಆರೋಪಿಗಳು ಅಂದರ್ ಆಗಿದ್ದಾರೆ.ತಮಿಳುನಾಡಿನಲ್ಲಿ ಸೆರೆಸಿಕ್ಕ ಕೀಚಕರನ್ನು ಸಾಂಸ್ಕೃತಿಕ ನಗರಿ ಮೈಸೂರಿಗೆ ಕರೆತರಲಾಗಿದೆ.

ಈ ಪ್ರಕರಣದಲ್ಲಿ 5 ಜನರನ್ನು ಬಂಧಿಸಲಾಗಿದೆ. ಎಲ್ಲರೂ ತಿರುಪುರ ಮೂಲದವರು. ಆಗಾಗ ಮೈಸೂರು ನಗರಕ್ಕೆ ಬರುತ್ತಿದ್ದರು. 7ನೇ ತರಗತಿ 8 ತರಗತಿ ಓದಿದ ಇವರೆಲ್ಲರೂ ಕಾರ್ಮಿಕರಾಗಿದ್ದಾರೆ. ಡ್ರೈವರ್​, ಕಾರ್ಪೆಂಟರ್​ ಸೇರಿದಂತೆ ಬೇರೆ ಬೇರೆ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅದರಲ್ಲಿ ಒಬ್ಬ ಬಾಲಕ 17 ವರ್ಷದವನಿದ್ದಾನೆ ಎನ್ನುವುದು ಪ್ರಾಥಮಿಕ ಮಾಹಿತಿಯಲ್ಲಿ ಲಭ್ಯವಾಗಿದೆ.


ಪೊಲೀಸ್ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಹೊರಹಾಕಿರುವ ಕಿರಾತಕರು ಯುವತಿಗೆ ಮೊದಲೇ ಸ್ಕೆಚ್ ಹಾಕಿದ್ದರು ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ .ಘಟನೆಗೆ 3 ದಿನ ಮೊದಲೇ ಪಕ್ಕಾ ಪ್ಲ್ಯಾನ್ ಮಾಡಿದ್ದ ರೇಪಿಸ್ಟ್‌ಗಳು ಯುವತಿಯನ್ನು ಟಾರ್ಗೆಟ್ ಮಾಡಿ ಮುಗಿಬಿದಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿ ಕೇರಳಕ್ಕೆ ಪರಾರಿಯಾಗಿದ್ದರು. ಕೇರಳ, ತಮಿಳುನಾಡಿನಲ್ಲಿ 4 ದಿನ ಸುತ್ತಾಡಿಕೊಂಡಿದ್ದ ಆರೋಪಿಗಳ ಮೊಬೈಲ್ ನೆಟ್‌ವರ್ಕ್ ಮೂಲಕ ಕಾಮಾಂಧರು ಸಿಕ್ಕಿಬಿದಿದ್ದಾರೆ ಎಂದು ಪೊಲೀಸರುಸ್ಪಷ್ಟಪಡಿಸಿದ್ದಾರೆ .ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸ್ ತನಿಖಾ ತಂಡ  ಸತ್ಯಮಂಗಲದಿಂದ ಮೈಸೂರಿಗೆ ಕರೆತರಲಾಗಿದೆ.

ಮೈಸೂರಿನಲ್ಲಿ ಗ್ಯಾಂಗ್ ರೇಪ್ ಆರೋಪಿಗಳನ್ನು ಈಗಾಗಲೇ ವಿಚಾರಣೆ ಮಾಡಲಾಗುತ್ತಿದೆ. ಇನ್ನು ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು `ರೋಡ್ ರಾಬರಿ ಗ್ಯಾಂಗ್ ‘ ಎಂದು ತಿಳಿದು ಬಂದಿದೆ.  ರೋಡ್ ರಾಬರಿಯ  ಹಲವು ಪ್ರಕರಣಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿದ್ದರು. ದೋಚಲು ಹೊದವರಿಗೆ ಈ ಜೋಡಿ ಸಿಕ್ಕಿಬಿದ್ದಿದ್ದು. ಮೈಸೂರಿನಲ್ಲಿ ಇದಕ್ಕೂ ಮುನ್ನ ಎರಡು ಮೂರು ಕಡೆಗಳಲ್ಲಿ ದರೋಡೆ ಮಾಡಲು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.

ಈ ಕೃತ್ಯ ಮಾಡಿದ ಆರೋಪಿಗಳನ್ನು ಪತ್ತೆಹಚ್ಚಲು ಅವರು ಮಾತನಾಡಿದ್ದ ಭಾಷೆ ಸುಳಿವು ನೀಡಿತ್ತು. ಯುವತಿ ಆತ್ಯಾಚಾರ ವೇಳೆ ತಮಿಳಿನಲ್ಲಿ ಪುಡಿಡಾ.. ಪುಡಿಡಾ .. ಎಂದು ಆರೋಪಿಗಳು ಮಾತನಾಡುತ್ತಿದ್ದರು ಎಂಬ ವಿಷಯವನ್ನು ಯುವತಿಯ ಗೆಳೆಯ  ಪೊಲೀಸರಿಗೆ ತಿಳಿಸಿದ್ದ .ಹಾಗೇ ಬಿಯರ್ ಬಾಟಲ್ ಬಾರ್ ಕೋಡ್ ಕೂಡ ಪ್ರಕರಣವನ್ನು ಬೇಧಿಸಲು ಸಹಕಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತನಿಖೆಗೆ ಯುವತಿ ಅಸಹಕಾರ ನೀಡುತ್ತಿದ್ದು, ಇದುವರೆಗೆ ಪೊಲೀಸರಿಗೆ ಯುವತಿ ಹೇಳಿಕೆ ನೀಡಿಲ್ಲ. ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗುತ್ತಲೇ ಯವತಿ ಮುಂಬೈಗೆ ಪಯಣ ಮಾಡಿದ್ದಾಳೆ ಎಂದು ತಿಳಿದುಬಂದಿದೆ.  

Exit mobile version