ನಾಳೆ ವೈದ್ಯರ ಮುಷ್ಕರ; ತುರ್ತು ಹಾಗೂ ಕೋವಿಡ್‌-19 ಸೇವೆಗಳು ಯಥಾಸ್ಥಿತಿ

ಬೆಂಗಳೂರು, ಡಿ. 10: ನಾಳೆ ಭಾರತೀಯ ವೈದ್ಯ ಸಂಘವು, ಸಿಸಿಐಎಂ ಅಧಿಸೂಚಿಸಿರುವಂತಹ ನೂತನ ಶಸ್ತ್ರಚಿಕಿತ್ಸಾ ನೀತಿಯನ್ನು ವಿರೋಧಿಸಿ, ಬಂದ್‌ಗೆ ಕರೆ ನೀಡಿದೆ. ನಾಳೆ ಬೆಳಿಗ್ಗೆಯಿಂದ ಸಂಜೆ 6ಗಂಟೆಯವರೆಗೆ ತುರ್ತು ಹಾಗೂ ಕೋವಿಡ್-19 ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದೆ. ಹೀಗಾಗಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳು ಸ್ತಬ್ಧವಾಗಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ವೈದ್ಯರ ರಜೆಯನ್ನು ರದ್ದುಪಡಿಸಿ, ಆದೇಶಿಸಿದೆ.

ಈ ಕುರಿತಂತೆ ಸುತ್ತೋಲೆ ಹೊರಡಿಸಿರುವಂತಹ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ ವೈದ್ಯ ಸಂಘವು ಸಿಸಿಐಎಂ ಶಲ್ಯ ಮತ್ತು ಶಲ್ಯಕ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿರುವ ಆಯುಷ್ ವೈದ್ಯರು 39 ಸಾಮಾನ್ಯ ಹಾಗೂ 19 ಕಿವಿ, ಮೂಗು, ಗಂಟಲು, ಕಣ್ಣು, ಶಿರ ಮತ್ತು ದಂತ ವೈದ್ಯ ಸೇವೆಗಳ ಶಸ್ತ್ರ ಚಿಕಿತ್ಸೆಗಳನ್ನು ನಿರ್ವಹಿಸಬಹುದೆಂದು ಅಧಿಸೂಚನೆ ಹೊರಡಿಸಿದೆ. ಇದನ್ನು ವಿರೋಧಿಸಿ ನಾಳೆ ಪ್ರತಿಭಟನೆಗೆ ಕರೆ ನೀಡಿದೆ.

ನಾಳೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ತುರ್ತು ಹಾಗೂ ಕೋವಿಡ್-19 ಸೇವೆಗಳನ್ನು ಹೊರತು ಪಡಿಸಿ ಉಳಿದ ಸೇವೆಗಳನ್ನು ಸ್ಥಗಿತಗೊಳಿಸಲು ವೈದ್ಯರಿಗೆ ಕರೆ ನೀಡಿದ್ದಾರೆ. ಆದುದರಿಂದ ನಿಮ್ಮ ಅಧೀನದಲ್ಲಿನ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗ ಸೇರಿದಂತೆ ಎಲ್ಲಾ ಸೇವೆಗಳು ಯಾವುದೇ ವ್ಯತ್ಯಯವಿಲ್ಲದಂತೆ ಎಂದಿನಂತೆ ಕಾರ್ಯನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು. ಮುಷ್ಕರದ ಅವಧಿಯಲ್ಲಿ ವೈದ್ಯರಿಗೆ ಯಾವುದೇ ರಜೆಯನ್ನು ಮಂಜೂರು ಮಾಡದಿರಲು ಸೂಚಿಸಿದ್ದಾರೆ.

Exit mobile version