ನಾಲಿಗೆ ಕತ್ತರಿಸಿಕೊಂಡ ಈ ವ್ಯಕ್ತಿಯ ಹುಚ್ಚಾಟ

ಬೆಂಗಳೂರು, ಜ. 04: ವಿಶ್ವಾದ್ಯಂತ  ಅನೇಕ ಜನರು ಟ್ಯಾಟೂ ಪ್ರಿಯರು ಇದ್ದು  ನಾನಾ ರೀತಿಯಲ್ಲಿ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ .ಟ್ಯಾಟೂ ಈಗಿನ ದಿನಗಳಲ್ಲಿ ಒಂದು ಫ್ಯಾಷನ್. ಅನೇಕರು ತಮಗಿಷ್ಟವಾದವರ ಹೆಸರು, ದೇವರ ಚಿತ್ರ ಅಥವಾ ಬೇರೆ ಚಿತ್ರಗಳ ಹಚ್ಚೆ ಹಾಕಿಸಿಕೊಳ್ತಾರೆ. ದೇಹದ ಒಂದೆರಡು ಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಈ ವ್ಯಕ್ತಿಯ ಹಚ್ಚೆ ಹುಚ್ಚು ಕೇಳಿದರೆ ದಂಗಾಗುತ್ತೀರಾ…

ಅರ್ಜೆಂಟೀನಾ ಮೂಲದ ವ್ಯಕ್ತಿಯೊಬ್ಬನ ದೇಹದ ಎಲ್ಲ ಭಾಗದಲ್ಲೂ ಹಚ್ಚೆಯಿದೆ. ಈತ ಹಾಕಿಸಿಕೊಂಡಿರುವ ಹಚ್ಚೆಯಿಂದಾಗಿ ಈತನ ಗುರುತು ಮನೆಯವರಿಗೆ ಸಿಗ್ತಿಲ್ಲ. ಅರ್ಜೆಂಟೀನಾದ ಪೆರಾಲ್ಟಾ ರೊಡ್ರಿಗಸ್ ಹಚ್ಚೆ ಫೋಟೋಗಳು ವೈರಲ್ ಆಗಿವೆ. ಈತನನ್ನು ಬ್ಯೂಟಿಫುಲ್ ಡೆವಿಲ್ ಎಂದು ಕರೆಯುತ್ತಾರೆ.

ದೇಶದ 80ಕ್ಕೂ ಹೆಚ್ಚು ಟ್ಯಾಟೂ ಕಲಾವಿಧರು ಪೆರಾಲ್ಟಾ ರೊಡ್ರಿಗಸ್ ದೇಹದ ಮೇಲೆ ಟ್ಯಾಟೂ ಹಾಕಿದ್ದಾರೆ. ತಲೆಯಿಂದ ಕಾಲಿನವರೆಗೆ ಅಪಾಯಕಾರಿ ಹಚ್ಚೆಗಳನ್ನು ಈತ ಹಾಕಿಸಿಕೊಂಡಿದ್ದಾನೆ. ಪೆರಾಲ್ಟಾ ರೊಡ್ರಿಗಸ್ ಸಂಗಾತಿ ಜೊತೆ ವಾಸವಾಗಿದ್ದಾನೆ. ತಲೆ ಮೇಲೆ ಆರರ ಸಂಖ್ಯೆಯನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ. 6 ದೆವ್ವಕ್ಕೆ ಸಂಬಂಧಿಸಿದ್ದು ಎಂಬುದು ಆತನ ನಂಬಿಕೆ. 26 ವರ್ಷದವರೆಗೆ ಟ್ಯಾಟೂ ಆರ್ಟಿಸ್ಟ್ ಆಗಿದ್ದ ಪೆರಾಲ್ಟಾ ರೊಡ್ರಿಗಸ್ 2009ರಲ್ಲಿ ಮೊದಲ ಬಾರಿ ಹಚ್ಚೆ ಹಾಕಿಸಿಕೊಂಡಿದ್ದ ಈತ. ಇದೀಗ ಈತ ನಾಲಿಗೆಯನ್ನು ಕೂಡಾ ಎರಡು ಭಾಗವಾಗಿ ಕತ್ತರಿಸಿಕೊಂಡಿದ್ದಾನೆ.

Exit mobile version