ಚಂಡೀಗಡ ಆ 23 : ಟೋಕಿಯೋ ಒಲಂಪಿಕ್ಸ್ನಲ್ಲಿ ಭಾರತೀಯ ಹಾಕಿ ತಂಡದ ಆಟಗಾರರು ಉತ್ತಮ ಪ್ರದರ್ಶನ ತೋರಿ ಕಂಚು ಗೆದ್ದು ಸಾಧನೆ ಮಾಡಿದ ಹಿನ್ನಲೆಯಲ್ಲಿ ಅವರ ಹೆಸರನ್ನು ಸರ್ಕಾರಿ ಶಾಲೆಗಳಿಗೆ ಇಡುವ ಮೂಲಕ ಪಂಜಾಬ್ ಸರ್ಕಾರ ಹಾಕಿ ಆಟಗಾರರಿಗೆ ವಿಶೇಷ ಗೌರವವನ್ನು ಸೂಚಿಸಿದೆ.
ಭಾರತ ಹಾಕಿ ತಂಡ 1980ರಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು ಆ ಬಳಿಕ 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್ನಲ್ಲಿ ಪದಕ ಜಯಿಸಿ ಸಾಧನೆ ಮಾಡಿದೆ. ಇವರ ಸಾಧನೆಗೆ ಗೌರವ ಸೂಚಕವಾಗಿ ಪಂಜಾಬ್ ಸರ್ಕಾರ ತಂಡದ ನಾಯಕರಾದ ಮನ್ಪ್ರೀತ್ ಸಿಂಗ್, ಹರ್ಮನ್ಪ್ರೀತ್ ಸಿಂಗ್, ಮಂದೀಪ್ ಸಿಂಗ್, ಸಂಶೀರ್ ಸಿಂಗ್, ರೂಪಿಂದರ್ ಪಾಲ್ ಸಿಂಗ್ ಸೇರಿ ಒಟ್ಟು 10 ಆಟಗಾರರ ಹೆಸರನ್ನು ವಿವಿಧ ಶಾಲೆಗಳಿಗೆ ಇಡಲಾಗಿದೆ. ಭಾರತ ಹಾಕಿ ತಂಡವು ಜರ್ಮನಿ ಎದುರು 5-4 ಅಂತರದಿಂದ ಗೆಲುವು ದಾಖಲಿಸುವ ಮೂಲಕ ಕಂಚಿನ ಪದಕವನ್ನು ಗೆದ್ದುಕೊಂಡಿತ್ತು