ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ

ಕೋವಿಡ್ 19 ಬಂದ ನಂತರ ಸಣ್ಣ ಪುಟ್ಟ ಕಾಯಿಲೆಗಳಿಗೂ ಜನರು ಆಸ್ಪತ್ರೆಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಮನೆಯಲ್ಲೇ ತಯಾರಿಸಬಹುದಾದ ಅನೇಕ ಗಿಡಮೂಲಿಕೆಗಳು ನಮ್ಮ ಪರಿಸರದ ಸುತ್ತಮುತ್ತಲೇ ಇರುತ್ತವೆ. ಹಾಗೂ ಅಡಿಗೆ ಮನೆಯಲ್ಲೇ ಇರುತ್ತದೆ. ಈ ಮಳೆಗಾಲದಲ್ಲಿ ಅತೀ ಬೇಗ ಕಾಡುವುದು ಶೀತ ತಲೆ ನೋವು. ಇದಕ್ಕಿದೆ ನಮ್ಮ ಮನೆಯಲ್ಲೇ ಮದ್ದು, ಶೀತವಾದಾಗ ಇದೊಂದು ಕಷಾಯ ಮಾಡಿ ನೋಡಿ ಆಸ್ಪತ್ರೆಗೆ ಹೋಗುವುದೇ ಬೇಡ.

ಕಾಳುಮೆಣಸು, ಈರುಳ್ಳಿ ,ಶುಂಠಿ ,ಬೆಲ್ಲ, ಸ್ವಲ್ಪ ಕೊತ್ತಂಬರಿ, ಹಾಲು, ಇಷ್ತೆಲ್ಲಾ ವಸ್ತುಗಳನ್ನು ತೆಗೆದುಕೊಂಡು ರೆಡಿಯಾಗಿಟ್ಟುಕೊಳ್ಳಿ.  ನಂತರ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಕುದಿಯಲು ಇಡಬೇಕು. ನೀರು ಕುದಿಯಲು ಆರಂಭವಾದ ಕೂಡಲೇ ತೆಗೆದಿಟ್ಟುಕೊಂಡ ಪದಾರ್ಥಗಳನ್ನೆಲ್ಲಾ ಜಜ್ಜಿ ಪುಡಿಮಾಡಿ ಆ ನೀರಿಗೆ ಹಾಕಬೇಕು. ಅದು ಚೆನ್ನಾಗಿ ಕುದಿದ ನಂತರ ಆದಕ್ಕೆ ಹಾಲನ್ನು ಬೆರೆಸಿ  ಸ್ವಲ್ಪ ಬೆಲ್ಲವನ್ನು ಸೇರಿಸಿ  ಚೆನ್ನಾಗಿ ಕುದಿಸಿ ,ನಂತರ ಕೆಳಗಿಳಿಸಿ ಬಿಸಿ ಬಿಸಿಯಾಗಿ ಕುಡಿದರೆ ಶೀತ ಕೆಮ್ಮು ತಲೆನೋವಿಗೆ ರಾಮಬಾಣದಂತಿರುತ್ತದೆ.

ಮಂಡಿನೋವು ಹಾಗೂ ಕೀಲು ನೋವಿದ್ದರೆ,  ಇಲ್ಲೊಂದು ಬಹಳ ಒಳ್ಳೆಯ ಮನೆ ಮದ್ದು ಇದೆ. ಕಮಲದ ಹೂವಿನ ಬೀಜ, ಇದನ್ನು ಮಕಾನಾ ಸೀಡ್ಸ್ ಅಂತಲೂ ಕರೆಯುತ್ತಾರೆ. ಇದರಲ್ಲಿ ಕ್ಯಾಲ್ಸಿಯಮ್ ಯತೇಷ್ಟವಾಗಿ ಇರುವುದರಿಂದ  ಕೈ ಕಾಲು, ಮಂಡಿನೋವಿಗೆ ಬಹಳ ಒಳ್ಳೆಯ ಮನೆ ಮದ್ದು ಇದಾಗಿದೆ. ಈ ಸೀಡ್ಸ್ ನ್ನು ತಂದು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ ಆ ಹಾಲಿಗೆ ಮಕಾನಾ ಸೀಡ್ಸನ್ನು ಪುಡಿಮಾಡಿ ಹಾಕಿ ಕುದಿಸಿ  ಇದಕ್ಕೆ ಸ್ವಲ್ಪ ಬಿಳಿ ಎಳ್ಳನ್ನು ಪುಡಿ ಮಾಡಿ ಇಟ್ಟುಕೊಂಡು  ಸ್ವಲ್ಪ ಅಶ್ವಗಂಧವನ್ನೂ ಬೆರೆಸಿ  ಹಾಲಿನೊಂದಿಗೆ ಬೆರೆಸಿ  ದಿನಾಲೂ ಕುಡಿಯುತ್ತಾ ಬಂದರೆ ಮೂಳೆಗಳು ಗಟ್ಟಿಯಾಗಿ  ನೋವು ಕಡಿಮೆಯಾಗುತ್ತದೆ.

Exit mobile version