ಟಿ.ಎ.ನಾರಾಯಣಗೌಡ ಪರಪ್ಪನ ಅಗ್ರಹಾರ ಜೈಲಿಗೆ: ಬಂಧಿಸಲಾಗಿದ್ದ 15 ಕರವೇ ಕಾರ್ಯಕರ್ತರ ಬಿಡುಗಡೆ

Bengaluru: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಬೆಂಗಳೂರಿ (Bengaluru)ನಲ್ಲಿ ಪ್ರತಿಭಟನೆ ಮಾಡಿ ಮಾಲ್‌ ಮತ್ತು ಹೋಟೆಲ್‌ಗಳ ಮೇಲೆ ಕಲ್ಲುತೂರಾಟ ನಡೆಸಿದ ಸಂಬಂಧ ಬಂಧಿಸಲಾಗಿರುವ 53 ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಪೈಕಿ 15 ಮಂದಿಗೆ ಜಾಮೀನು ಸಿಕ್ಕಿದ್ದು, ಗುರುವಾರ ತಡರಾತ್ರಿ ಸದ್ಯ ಅವರೆಲ್ಲಾ ಜೈಲಿ (Jail)ನಿಂದ ಹೊರಬಂದಿದ್ದಾರೆ.

ಇನ್ನು ಕರವೇ ರಾಜ್ಯ ಅಧ್ಯಕ್ಷ ಟಿ.ಎ.ನಾರಾಯಣಗೌಡ #TANarayanagowda ಸೇರಿದಂತೆ ಉಳಿದ 38 ಕಾರ್ಯಕರ್ತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಅವರೆಲ್ಲರನ್ನೂ ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಪ್ರತಿಭಟನೆ ವೇಳೆ ಕರವೇ ಕಾರ್ಯಕರ್ತರು ಬೆಂಗಳೂರಿನ ಹಲವೆಡೆ ಮಾಲ್‌ಗಳು (Mall), ಹೋಟೆಲ್‌ಗಳು, ವಾಣಿಜ್ಯ ಕಟ್ಟಡಗಳ ಮೇಲೆ ಕಲ್ಲುತೂರಾಟ ನಡೆಸಿದ್ದರು.

ಅಲ್ಲದೆ, ಆಂಗ್ಲಭಾಷೆಯ ನಾಮಫಲಕಗಳು, ಫ್ಲೆಕ್ಸ್‌, ಬ್ಯಾನರ್‌ (Flex, Banners) ಗಳಿಗೆ ಮಸಿ ಬಳಿದು ಕಿತ್ತೆಸೆದಿದ್ದರು. ಜೊತೆಗೆ ಮಾಲ್‌, ಹೋಟೆಲ್‌ಗಳಿಗೆ ನುಗ್ಗಲು ಯತ್ನಿಸಿದ್ದರು. ಹೀಗಾಗಿ, ಪೊಲೀಸರು ನಾರಾಯಣಗೌಡ ಸೇರಿದಂತೆ ನೂರಾರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಪರಿಸ್ಥಿತಿ ನಿಯಂತ್ರಿಸಿದ್ದರು.

10 ಎಫ್‌ಐಆರ್‌ ದಾಖಲು
ನಾರಾಯಣಗೌಡ ಮತ್ತು ಕಾರ್ಯಕರ್ತರ ವಿರುದ್ಧ ಕಬ್ಬನ್‌ಪಾರ್ಕ್, ಚಿಕ್ಕಜಾಲ (Cubbanpark, Chikkajala) ಸೇರಿದಂತೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ10 ಎಫ್‌ಐಆರ್‌ (FIR) ದಾಖಲಿಸಲಾಗಿದ್ದು, ಪೊಲೀಸರ ಮೇಲೆ ಹಲ್ಲೆ, ಕರ್ತವ್ಯ ನಿರ್ವಹಣೆಗೆ ಅಡ್ಡಿ, ಸಾರ್ವಜನಿಕ ಆಸ್ತಿಗೆ ಹಾನಿ, ದೊಂಬಿ, ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಆರೋಪದಡಿ ಬಂಧಿತರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಆದರೆ ಕಾನೂನು ಮತ್ತು ಸುವ್ಯವಸ್ಥೆ ಕದಡುವ ಕೆಲಸ ಮಾಡಬಾರದು. ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಸಂಬಂಧ ನಾರಾಯಣಗೌಡ ಸೇರಿ 53 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ,” ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ (B Dayananda) ತಿಳಿಸಿದ್ದಾರೆ.

ಜೈಲು ಸಿಬ್ಬಂದಿ ವಿರುದ್ಧ ಆಕ್ರೋಶ:
ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದಿದ್ದ ನಾರಾಯಣಗೌಡರ ಪತ್ನಿ ಮತ್ತು ಕರವೇ ಕಾರ್ಯಕರ್ತರು ಪೊಲೀಸರು ಹಾಗೂ ಜೈಲು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಮನೆಯಿಂದ ತಂದಿದ್ದ ಊಟ, ಮಾತ್ರೆ ಹಾಗೂ ಬಟ್ಟೆಗಳನ್ನು ನಾರಾಯಣಗೌಡರಿಗೆ ಕೊಡಲು ಜೈಲು ಸಿಬ್ಬಂದಿ ಅನುಮತಿ ನಿರಾಕರಿಸಿದರು. ಇದರಿಂದ ಕೆರಳಿದ ನಾರಾಯಣಗೌಡರ ಪತ್ನಿ ಮತ್ತು ಕರವೇ (Karawe) ಕಾರ್ಯಕರ್ತರು ಜೈಲು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭವ್ಯಶ್ರೀ ಆರ್ ಜೆ

Exit mobile version