ಹಿಂದಿನ ಸರ್ಕಾರಗಳು ತಂತ್ರಜ್ಞಾನವನ್ನು ಬಡವರ ವಿರೋಧಿ ಎಂದು ಬಿಂಬಿಸಿದ್ದವು : ಮೋದಿ!

Narendra Modi

2014ಕ್ಕಿಂತಲೂ ಮೊದಲು ಆಡಳಿತದಲ್ಲಿ ತಂತ್ರಜ್ಞಾನ(Technology) ಅಳವಡಿಸಿಕೊಳ್ಳಲು ಸರ್ಕಾರಗಳು ಉದಾಸೀನತೆ ತೋರಿದ್ದವು.

ಹಿಂದಿನ ಸರ್ಕಾರಗಳು ತಂತ್ರಜ್ಞಾನವನ್ನು ಒಂದು ಸಮಸ್ಯೆ ಎಂದು ಭಾವಿಸಿದ್ದವು. ಅದನ್ನು ಬಡವರ ವಿರೋಧಿ ಎಂದು ಬಿಂಬಿಸುವ ಪ್ರಯತ್ನವೂ ನಡೆದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟರು. ನವದೆಹಲಿನಲ್ಲಿ(NewDelhi) ನಡೆಯುತ್ತಿರುವ ‘ಭಾರತ್ ಡ್ರೋನ್ ಉತ್ಸವ’(Bharat Drone Festival) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಹಿಂದಿನ ಸರ್ಕಾರಗಳು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ.

ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಳ್ಳದಿರುವ ಪರಿಣಾಮ ದೇಶದ ಬಡವರು ಮತ್ತು ಮದ್ಯಮ ವರ್ಗದವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ ಎಂದರು. ಇನ್ನು ಡ್ರೋನ್ ತಂತ್ರಜ್ಞಾನದ ಬಗ್ಗೆ ಭಾರತದಲ್ಲಿ ಅದ್ಭುತ ಉತ್ಸಾಹ ಕಂಡು ಬರುತ್ತಿದೆ. ಯುವಕರು ಡ್ರೋನ ತಂತ್ರಜ್ಞಾನ ಕುರಿತು ಸಂಶೋಧನೆ(Research) ನಡೆಸಲು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಡ್ರೋನ್ ತಂತ್ರಜ್ಞಾನ ಹೆಚ್ಚು ಉದ್ಯೋಗಾವಕಾಶಗಳನ್ನು ಭಾರತದಲ್ಲಿ ಸೃಷ್ಟಿಸಲಿದೆ.

ಭಾರತದಲ್ಲಿ ಉದ್ಯೋಗ ಸೃಷ್ಟಿಯ ಉದಯೋನ್ಮುಖ ಸಾಧ್ಯತೆಗಳನ್ನು ಡ್ರೋನ್ ತಂತ್ರಜ್ಞಾನ ಸೂಚಿಸುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ಇನ್ನು ನಮ್ಮ ಸರ್ಕಾರ ಉತ್ತಮ ಆಡಳಿತಕ್ಕಾಗಿ ಹೊಸ ಮಂತ್ರಗಳನ್ನು ಜಾರಿಗೆ ತಂದಿದೆ. ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬುದು ನಮ್ಮ ಸರ್ಕಾರದ ಮೊದಲ ಕಾರ್ಯತಂತ್ರವಾಗಿದೆ. ಈ ಹಾದಿಯಲ್ಲೇ ನಮ್ಮ ಸರ್ಕಾರ ನಡೆಯಲಿದ್ದು, ಇದರಿಂದಾಗಿ ಸುಲಭ ಜೀವನ ಮತ್ತು ವ್ಯವಹಾರಕ್ಕೆ ನಾವು ಮೊದಲ ಆದ್ಯತೆ ನೀಡಲಿದ್ದೇವೆ ಎಂದು ತಿಳಿಸಿದರು.

Exit mobile version