ಗಣರಾಜ್ಯೋತ್ಸವ ಪರೇಡ್ ನಲ್ಲಿ ,ನಾರಿ ಶಕ್ತಿ ; ಇತ್ತ ರಾಜ್ಯದಲ್ಲಿ ದಿನೇ ದಿನೇ ಮಹಿಳಾ ದೌರ್ಜನ್ಯ ಹೆಚ್ಚಳ : ಜೆಡಿಎಸ್‌ ಟೀಕೆ

Bengaluru: ನಾಳೆ ನಡೆಯುವ ಗಣರಾಜ್ಯೋತ್ಸವದ(Republic Day) ಪರೇಡ್ ನಲ್ಲಿ ಪಾಲ್ಗೊಳ್ಳಲು ‘ನಾರಿ ಶಕ್ತಿ’ ಎಂಬ ಸ್ತಬ್ಧ ಚಿತ್ರವನ್ನು ರಾಜ್ಯ ಸರ್ಕಾರ(Nari Shakti tableau controversy) ಆಯ್ಕೆ ಮಾಡಿಕೊಂಡಿದೆ. ಇತ್ತ ರಾಜ್ಯದಲ್ಲಿ ದಿನೇ ದಿನೇ ಮಹಿಳಾ ದೌರ್ಜನ್ಯ ಹೆಚ್ಚುತ್ತಿದ್ದರೆ,

ಸುಳ್ಳು ಜಾಹೀರಾತಿನ ಪರಿಣಿತ ಸರ್ಕಾರವು ಸ್ತ್ರೀ ಸಬಲೀಕರಣ ಬಿಂಬಿಸಲು ಹೊರಟಿದೆ. ಇದು ಕ್ರೂರ ವ್ಯಂಗ್ಯ ಎಂದು ವಿಪಕ್ಷ ಜೆಡಿಎಸ್‌(JDS) ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ.

ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗಿಯಾಗಲು ‘ನಾರಿ ಶಕ್ತಿ’ (Naari Shakti)ಎಂಬ ಸ್ತಬ್ಧ ಚಿತ್ರವನ್ನು ರಾಜ್ಯ ಬಿಜೆಪಿ ಸರ್ಕಾರ(BJP Government) ಆಯ್ಕೆ ಮಾಡಿಕೊಂಡಿದೆ.

ರಾಜ್ಯ ಬಿಜೆಪಿ ಸರ್ಕಾರದ ಈ ನಡೆಯನ್ನು ಟೀಕಿಸಿ ಸರಣಿ ಟ್ವೀಟ್‌(Tweet) ಮಾಡಿರುವ ಜೆಡಿಎಸ್‌,

ಬಿಜೆಪಿ ಸರ್ಕಾರ ಬಂದ ಮೇಲೆ ನಮ್ಮ ರಾಜ್ಯದ ಗೃಹ ಇಲಾಖೆಯು ವರ್ಗಾವಣೆ, ಭ್ರಷ್ಟಾಚಾರ, ಉದಾಸೀನ ನಡೆಗಳಿಂದಾಗಿ ಕುಖ್ಯಾತಿ ಪಡೆದಿದೆ.

ಗೃಹ ಸಚಿವರು ಭಂಡ ಸಮರ್ಥನೆ ಕೊಡುತ್ತಾ, ಮೂಕರಾಗಿದ್ದಾರೆ. ಪ್ರತಿದಿನ ಹಿಂಸೆಯ ಕರಾಳತೆಯಲ್ಲಿ ರಾಜ್ಯದ ಹೆಣ್ಣಮಕ್ಕಳು ಬದುಕಬೇಕಾದ ಕೆಟ್ಟ ವ್ಯವಸ್ಥೆ ಸೃಷ್ಟಿಯಾಗಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಕ್ರಾಂತಿ : ಎಲ್ಲಾ ಟಿಕೆಟ್‌ಗಳು ಸೋಲ್ಡ್‌ ಔಟ್‌

ಇದು ನಿಜಕ್ಕೂ ಒಳ್ಳೆಯದಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಿಂಸಾಪರಾಧಗಳು ಈ ಪರಿ ಪ್ರಮಾಣದಲ್ಲಿ (Nari Shakti tableau controversy) ಏರಿಕೆ ಕಾಣುತ್ತಿರುವುದರ ಹಿಂದೆ ಪೊಲೀಸ್ ಇಲಾಖೆಯ(Police Department) ವೈಫಲ್ಯವೂ ಇದೆ.

ಸಾಮಾಜಿಕವಾಗಿ ಶೋಷಿತರಾದ ಮಹಿಳೆಯರ ರಕ್ಷಣೆಗೆ ಪ್ರಾಮಾಣಿಕ ಕೆಲಸ ಮಾಡಬೇಕಿರುವುದು ಸರ್ಕಾರದ ಪ್ರಮುಖ ಆದ್ಯತೆಯಾಗಬೇಕು ಎಂದು ಆಗ್ರಹಿಸಿದೆ.

ಇನ್ನೊಂದು ಟ್ವೀಟ್‌ನಲ್ಲಿ(Tweet), 2022ರಲ್ಲಿ ರಾಜ್ಯದಾದ್ಯಂತ ಹೆಣ್ಣುಮಕ್ಕಳ‌ ಮೇಲೆ ವಿವಿಧ ರೂಪದ 15,492 ದೌರ್ಜನ್ಯದ ಪ್ರಕರಣಗಳು ದಾಖಲಾಗಿರುವ ಆತಂಕಕಾರಿ ಸುದ್ದಿ ವರದಿಯಾಗಿದೆ.

ನಾಗರಿಕ ಸಮಾಜವು ತಲೆತಗ್ಗಿಸುವಂತ ಬೆಳವಣಿಗೆ ಇದು. ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ(Araga Jnendra),

ನಿಮ್ಮ ನಿರ್ಲಜ್ಜ ಆಡಳಿತದಿಂದಾಗಿ ಕರುನಾಡಲ್ಲಿ ಯಾರೂ ಸುರಕ್ಷಿತವಾಗಿಲ್ಲ ಎಂದು ವಾಗ್ದಾಳಿ ನಡೆಸಿದೆ.

ಇನ್ನು ಗಣರಾಜ್ಯೋತ್ಸವದ ಪರೇಡ್ ನಲ್ಲಿ(Parade) ಭಾಗಿಯಾಗಲು ‘ನಾರಿ ಶಕ್ತಿ’ ಎಂಬ ಸ್ತಬ್ಧ ಚಿತ್ರವನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿಕೊಂಡಿದೆ.

ಈ ಚಿತ್ರದಲ್ಲಿ ಸಾಲು ಮರದ ತಿಮ್ಮಕ್ಕ(Saalu marada Thimmakka) ಅವರ ಚಿತ್ರದೊಂದಿಗೆ ರಾಜ್ಯದ ಹೆಣ್ಣು ಮಕ್ಕಳ ಸಾಧಿನೆ ಮತ್ತು ಶಕ್ತಿಯನ್ನು ಬಿಂಬಿಸುತ್ತಿದೆ.

ಆದರೆ ಇನ್ನೊಂದೆಡೆ ಅಪರಾಧ ಬ್ಯೂರೊ ನೀಡಿರುವ ವರದಿಯ ಪ್ರಕಾರ, ರಾಜ್ಯದಲ್ಲಿ 2022ರಲ್ಲಿ ಅತಿಹೆಚ್ಚು ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

ವರದಿಯ ಪ್ರಕಾರ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು 2022ರಲ್ಲಿ ದಾಖಲಾಗಿವೆ ಎಂದು ಜೆಡಿಎಸ್‌ಹೇಳಿದೆ.

Exit mobile version