• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ನೆಲಮಂಗಲದಲ್ಲಿ 400 ಎಕರೆಯಲ್ಲಿ ₹1,770 ಕೋಟಿ ವೆಚ್ಚದ ರಾಷ್ಟ್ರೀಯ ಲಾಜಿಸ್ಟಿಕ್‌ ಪಾರ್ಕ್ ನಿರ್ಮಾಣ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ನೆಲಮಂಗಲದಲ್ಲಿ 400 ಎಕರೆಯಲ್ಲಿ ₹1,770 ಕೋಟಿ ವೆಚ್ಚದ ರಾಷ್ಟ್ರೀಯ ಲಾಜಿಸ್ಟಿಕ್‌ ಪಾರ್ಕ್ ನಿರ್ಮಾಣ
0
SHARES
1.4k
VIEWS
Share on FacebookShare on Twitter

Bengaluru Rural : ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಸರಕು ಸಾಗಣೆಗೆ ನೆರವಾಗುವ ನಿಟ್ಟಿನಲ್ಲಿ (National Logistics Park in Nelamangala) ರಾಷ್ಟ್ರಮಟ್ಟದ ಮಲ್ಟಿ ಮಾಡಲ್‌

ಲಾಜಿಸ್ಟಿಕ್‌ ಪಾರ್ಕ್ (Logistic Park) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನಲ್ಲಿ ಸ್ಥಾಪನೆಯಾಗಲಿದ್ದು, 1,770 ಕೋಟಿ ರೂ. ವೆಚ್ಚದಲ್ಲಿ

400 ಎಕರೆ (National Logistics Park in Nelamangala) ಪ್ರದೇಶದಲ್ಲಿ ನಿರ್ಮಾಣವಾಗಲಿದೆ.

National Logistics Park in Nelamangala

ಅಂತರ್ ರಾಜ್ಯ ಸಂಪರ್ಕ ಮತ್ತು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ತ್ಯಾಮಗೊಂಡ್ಲು ಹೋಬಳಿಯ ಮುದ್ದಲಿಂಗನಹಳ್ಳಿ ಬಳಿಯ ಓಬಳಾಪುರ ಕೈಗಾರಿಕಾ ಪ್ರದೇಶದಲ್ಲಿ ಈ

ಪಾರ್ಕ್ ತಲೆ ಎತ್ತಲಿದ್ದು, 400 ಎಕರೆ ಪ್ರದೇಶದಲ್ಲಿ 1,770 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ರಾಜ್ಯಕ್ಕೆ ಮತ್ತೊಂದು ಗರಿ ಸಿಕ್ಕಂತಾಗಿದೆ.

ನ್ಯಾಷನಲ್‌ ಹೈವೇಸ್‌ ಲಾಜಿಸ್ಟಿಕ್ಸ್‌ ಮ್ಯಾನೇಜ್ಮೆಂಟ್‌ (National Highway Logistics Management) ಸಂಸ್ಥೆ ಖಾಸಗಿ ಸಹಭಾಗಿತ್ವದಲ್ಲಿ ನಡೆಯುವ ಈ ಯೋಜನೆಗೆ ಈಗಾಗಲೇ ಸಹಿ ಹಾಕಿದ್ದು,

ಪಾಥ್‌ ಬೆಂಗಳೂರು ಲಾಜಿಸ್ಟಿಕ್ಸ್‌ ಪಾರ್ಕ್ ಸಂಸ್ಥೆ ಮತ್ತು ಸರ್ಕಾರಿ ಸ್ವಾಮ್ಯದ ಬೆಂಗಳೂರು ಎಂಎಂಎಲ್‌ಪಿ (MMLP) ನಡುವೆ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದ ಒಪ್ಪಂದ ಅಂತಿಮಗೊಂಡಿದೆ.

ಭಾರತದಲ್ಲೇ ಅತ್ಯಂತ ದೊಡ್ಡ ಲಾಜಿಸ್ಟಿಕ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಎಂಎಂಎಲ್‌ಪಿ ಇದಾಗಿದೆ.

ಈ ಯೋಜನೆಯನ್ನು ಒಟ್ಟು 3 ಹಂತಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಮೊದಲ ಹಂತ ಮುಂದಿನ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಆ ಮೂಲಕ ಬರೋಬ್ಬರಿ 3 ಕೋಟಿ ಮೆಟ್ರಿಕ್‌ ಟನ್‌

(Metric Ton) ಸರಕನ್ನು ಒಂದೇ ಸ್ಥಳದಲ್ಲಿ ಸಂಗ್ರಹ, ಸಾಗಣೆಗೆ ಅಗತ್ಯ ಸೌಕರ್ಯ ಒದಗಿಸುವ ಬೃಹತ್‌ ಪ್ರದೇಶ ನಿರ್ಮಾಣವಾಗುತ್ತಿದೆ.

National Logistics Park

ರಾಜಧಾನಿ ಬೆಂಗಳೂರಿನ ಸುತ್ತಲೂ ಹರಡಿರುವ ಸ್ಯಾಟಲೈಟ್‌ (Satellite) ನಗರಗಳಿಗೆ ಲಾಜಿಸ್ಟಿಕ್‌ ಪಾರ್ಕ್ ವರದಾನವಾಗಲಿದ್ದು, ಮುಖ್ಯವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ,

ಓಬದೇನಹಳ್ಳಿ, ಸೋಂಪುರ, ಪಿಳ್ಳಗುಂಪೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಾಟ ನಡೆಸಲು ನೆರವಾಗಲಿದ್ದು, ತುಮಕೂರು, ರಾಮನಗರ, ಬೆಂಗಳೂರುನಗರ

ವ್ಯಾಪ್ತಿಯ ಕೈಗಾರಿಕಾ ಪ್ರದೇಶ ಮಾತ್ರವಲ್ಲದೇ ರಾಜ್ಯದ ಇತರೆ ಜಿಲ್ಲೆಗಳಿಗೆ ಸಾಕಷ್ಟು ಸಹಕಾರಿಯಾಗಲಿದೆ.

ದಾಬಸ್‌ಪೇಟೆಯಿಂದ ಕೆಂಪೇಗೌಡ (Kempegowda) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ರಾಷ್ಟ್ರೀಯ ಹೆದ್ದಾರಿ 648 ನಿರ್ಮಾಣ ಅಂತಿಮ ಹಂತದಲ್ಲಿದ್ದು, ವಿದೇಶಗಳ ಸರಕು ಸಾಗಣಿಕೆಗೆ

ಸುಲಭವಾಗಲಿದ್ದು, ಕೈಗಾರಿಕಾ ಕಚ್ಚಾ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೇ, ಹೆದ್ದಾರಿ ಸೌಕರ್ಯವುಳ್ಳ ಪ್ರದೇಶದಲ್ಲಿ

ಲಾಜಿಸ್ಟಿಕ್‌ ಪಾರ್ಕ್ ಅನ್ನು ಸ್ಥಾಪಿಸಲಾಗುತ್ತದೆ.

ಇದನ್ನು ಓದಿ: ಗೋ ಹತ್ಯೆ ಕೇಸ್: ಮನೇಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಇಸ್ಕಾನ್

  • ಭವ್ಯಶ್ರೀ ಆರ್.ಜೆ
Tags: bengalurunelamangalapark

Related News

ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಬ್ರೇಕ್‌ಔಟ್: 200 DMA ದಾಟಿದ 12 ಕಂಪನಿಗಳ ಮೇಲೆ ಇನ್ವೆಸ್ಟ್ ಮಾಡೋದು ಬೆಸ್ಟ್
ಪ್ರಮುಖ ಸುದ್ದಿ

ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಬ್ರೇಕ್‌ಔಟ್: 200 DMA ದಾಟಿದ 12 ಕಂಪನಿಗಳ ಮೇಲೆ ಇನ್ವೆಸ್ಟ್ ಮಾಡೋದು ಬೆಸ್ಟ್

April 17, 2026
ಚಾರಣಿಗರಿಗೆ ಹೊಸ ನಿಯಮಗಳು: ಸುರಕ್ಷತೆಗೆ ರಾಜ್ಯ ಸರ್ಕಾರದ ಕಟ್ಟು ನಿಟ್ಟಿನ SOP ಜಾರಿ
ಪ್ರಮುಖ ಸುದ್ದಿ

ಚಾರಣಿಗರಿಗೆ ಹೊಸ ನಿಯಮಗಳು: ಸುರಕ್ಷತೆಗೆ ರಾಜ್ಯ ಸರ್ಕಾರದ ಕಟ್ಟು ನಿಟ್ಟಿನ SOP ಜಾರಿ

April 17, 2026
ಚಿಕನ್ ಪ್ರಿಯರಿಗೆ ಶಾಕ್ – ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ವೈರಸ್
ಪ್ರಮುಖ ಸುದ್ದಿ

ಚಿಕನ್ ಪ್ರಿಯರಿಗೆ ಶಾಕ್ – ರಾಜ್ಯಕ್ಕೆ ಕಾಲಿಟ್ಟ ಹಕ್ಕಿ ಜ್ವರ ವೈರಸ್

April 17, 2026
ಇಸ್ರೇಲ್–ಲೆಬನಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ 10 ದಿನಗಳ ಕದನ ವಿರಾಮ
ದೇಶ-ವಿದೇಶ

ಇಸ್ರೇಲ್–ಲೆಬನಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್: ಅಮೆರಿಕ ಮಧ್ಯಸ್ಥಿಕೆಯಲ್ಲಿ 10 ದಿನಗಳ ಕದನ ವಿರಾಮ

April 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.