ಹಳೆಯ ಪಠ್ಯಕ್ರಮದಂತೆ ಈ ಬಾರಿಯೂ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ

ನವದೆಹಲಿ ಅ 6ಪ್ರಸಕ್ತ ವರ್ಷದ ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯು ಹಳೆಯ ಪರೀಕ್ಷಾ ಮಾದರಿಯಂತೆ ನಡೆಯಲಿದೆ ಎಂದು ಕೇಂದ್ರ ಸರ್ಕಾರವು ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಹೊಸ ಪರೀಕ್ಷಾ ಮಾದರಿಯನ್ನು ಮುಂದಿನ ವರ್ಷ 2022-23ರಿಂದ ಜಾರಿಗೆ ತರಲಾಗುವುದು ಎಂದು ಕೇಂದ್ರವು ಸ್ಪಷ್ಟನೆ ನೀಡಿದೆ.   

ಕೇಂದ್ರದ ಈ ಹೇಳಿಕೆಯನ್ನು ಸುಪ್ರೀಂಕೋರ್ಟ್ ದಾಖಲಿಸಿಕೊಂಡಿದ್ದು, 41 ವೈದ್ಯರ ಗುಂಪು ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ NEET SSಗೆ ಸಂಬಂಧಿಸಿದಂತೆ ಬಾಕಿ ಇರುವ ಎಲ್ಲಾ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿದೆ. ಈ ಹಿನ್ನೆಲೆ 2018ರಿಂದ ಬಳಸಿದ ಹಳೆಯ ಮಾದರಿಯ ಆಧಾರದ ಮೇಲೆ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

Exit mobile version