ನೆಲನೆಲ್ಲಿಯಲ್ಲಿದೆ ಆರೋಗ್ಯ

ಪ್ರಕೃತಿಯ ಮಡಿಲಿನಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿದೆ. ಈ ಪ್ರಕೃತಿಯಲ್ಲಿ ಧಾರಾಳವಾಘಿ ಸಿಗುವ ಔಷಧೀಯ ಸಸ್ಯ ಎಂದರೆ ನೆನೆಲ್ಲಿ. ಈ ಗಿಡದಲ್ಲಿ ಔಷಧೀಯ ಗುಣಗಳು ಬಹಳಷ್ಟಿದೆ, ಇದು ನೆಲ್ಲಿ ಕಾಯಿ ಜಾತಿಯ ಕುಟುಂಬಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು ಯುಪೋರೆಬೇಸಿಯಾ. ಸಂಸ್ಕೃತದಲ್ಲಿ ಇದಕ್ಕೆ ಭೂಮ್ಯಾಲಕ ಎಂದು ಹೇಳಲಾಗುತ್ತದೆ. ವೈಜ್ಞಾನಿಕ ಹೆಸರು ”ಪೈಲೋಥಸ್ ಅಮರಸ್” ಎಂಬುದಾಗಿದೆ. ಇದು ಬೆಟ್ಟದ ನೆಲ್ಲಿಕಾಯಿಯಂತೆ ಇರುತ್ತದೆ. ಆದರೆ ಬಹಳ ಪುಟ್ಟ ಪುಟ್ಟ ಸಾಸಿವೆ ಕಾಳಿನಂತಹ ಕಾಯಿಗಳು ಎಲೆಯ ಹಿಂಬಾಗದಲ್ಲಿರುತ್ತವೆ.

ಇದು ಮಳೆಗಾಲದಲ್ಲಿ ಹುಟ್ಟಿದರೂ ಚಳಿಗಾಲದಲ್ಲಿ ಯಥೇಷ್ಟವಾಗಿ ಚಿಗುರಿಕೊಂಡು ಸೊಂಪಾಗಿ ಬೆಳೆಯುತ್ತದೆ. ಇದು ಕಾಮಾಲೆ ರೋಗ, ಹೊಟ್ಟೆ ನೋವು, ಅತಿಸಾರ, ಕಣ್ಣುರಿ, ಪಿತ್ತಜನಕಾಂಗದ ಸಮಸ್ಯೆ, ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆ, ಅಜೀರ್ಣ, ಜ್ವರ, ಹೀಗೆ ಹತ್ತು ಹಲವಾರು ಸಮಸ್ಯೆಗಳಿಗೆ ಉತ್ತಮ ಔಷದಿಯಾಗಿದೆ. ಇದನ್ನು ಕಷಾಯ ಮಾಡಿ ಹಾಲಿನೊಂದಿಗೆ ಬೆರಸಿ ಕುಡಿಯಬಹುದಾಗಿದೆ. ಹಿಂದಿನ ಕಾಲದವರು ಇದನ್ನು ಬಹಳಷ್ಟು ಸಮಸ್ಯೆಗೆ ಮನೆ ಮದ್ದಾಗಿ ಬಳಸಿಕೊಂಡು ಬಂದಿದ್ದಾರೆ.

ಆಯುರ್ವೇದದಲ್ಲಂತೂ ಇದು ಅತ್ಯಂತ ಬೇಡಿಕೆಯ ಸಸ್ಯವಾಗಿದೆ. ಇದನ್ನು ಕೊಯ್ದು ಒಣಗಿಸಿ ಪುಡಿಮಾಡಿ ಒಂದು ವರ್ಷದವರೆಗೂ ಶೇಖರಣೆ ಮಾಡಿಕೊಂಡು ಇಡಬಹುದು. ತಲೆಗೆ ಪಿತ್ತವೇರಿದಾಗ ಇದನ್ನು ಹಸಿ ಹಾಲಿನೊಂದಿಗೆ ಅರೆದು ತಲೆಗೆ ಲೇಪಹಾಕಿ ಒಂದು ಗಂಟೆ ಬಿಟ್ಟು ತಣ್ಣೀರಿನಲ್ಲಿ ತೊಳೆದರೆ ಪಿತ್ತ ಇಳಿಯಲು ಬಹಳ ಸಹಾಯಕವಾಗಿದೆ. ಪಿತ್ತ ಇಳಿದು ದೇಹ  ಆರೋಗ್ಯವಾಗಿರುತ್ತದೆ. ದೇಹಕ್ಕೆ ಉಷ್ಣವಾದಾಗ ಹುರಿದ ಜೀರಿಗೆಯ ಜೊತೆ ನೆಲನೆಲ್ಲಿ ಬೇರು ಸಮೇತ ಸೊಪ್ಪನ್ನು ತೊಳೆದು ಹಾಕಿ ಚೆನ್ನಾಗಿ ಕುದಿಸಿ ಹಾಲು ಬೆರೆಸಿ, ಆರಿಸಿ ಕುಡಿದರೆ ದೇಹ ತಂಪಾಗುವುದು.

Exit mobile version