ನೇಪಾಳ ಭೂಕಂಪದಲ್ಲಿ ಮಡಿದವರಿಗಾಗಿ ನರೇಂದ್ರ ಮೋದಿ ಸಂತಾಪ: ನೆರವು ನೀಡಲು ಭಾರತ ಸಿದ್ಧ

Nepal: ಶುಕ್ರವಾರ (ನ.೩) ರಾತ್ರಿ ನೇಪಾಳದ ರಾಜಧಾನಿ ಕಠ್ಮಂಡು (Nepal Earthquake – modi condolence) ಹಾಗೂ ಪಶ್ಚಿಮ ರುಕುಂ, ಜಾಜರಕೋಟ್ ಸೇರಿದಂತೆ ಹಲವೆಡೆ

6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸಂಭವಿಸಿರುವ ಭೂಕಂಪದಿಂದ ಜೀವಹಾನಿ ಮತ್ತು ಹಾನಿಯಿಂದ ತೀವ್ರ ಬೇಸರವಾಗಿದ್ದು, ಭಾರತವು ನೇಪಾಳದ ಜನರೊಂದಿಗೆ ನಿಂತಿದೆ ಮತ್ತು

ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ ಎಂದು ಮೋದಿ (Modi) ಉಲ್ಲೇಖಿಸಿದ್ದಾರೆ.

ಕನಿಷ್ಠ 128 ಜನರು ಸಾವನ್ನಪ್ಪಿದ್ದು, 140 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ನೇಪಾಳಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಿದೆ

ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ (Nepal Earthquake – modi condolence) ಮಾಡಿದ್ದಾರೆ.

ಮೋದಿ ಅವರು ಭಾರತವು ನೇಪಾಳದ ಜನರೊಂದಿಗೆ ನಿಂತಿದೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ. ದುಃಖತಪ್ತ ಕುಟುಂಬಗಳ ಕುರಿತು ನಮಗೆ ಸಂತಾಪವಿದೆ.

ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ ಎಂದು ಉಲ್ಲೇಖಿಸಿದ್ದಾರೆ.

ನೇಪಾಳದ ಪಶ್ಚಿಮ ಭಾಗದ ಜಾಜರಕೋಟ್ (Jajarkot) ಮತ್ತು ರುಕುಮ್ (Rukum) ಜಿಲ್ಲೆಗಳು ಭೂಕಂಪದಿಂದ ಹೆಚ್ಚು ತೊಂದರೆಗೊಳಗಾಗಿವೆ ಎಂದು ನೇಪಾಳದ ರಾಜ್ಯ ಟೆಲಿವಿಷನ್ ವರದಿ

ಮಾಡಿದ್ದು, ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ ಪ್ರಕಾರ, ಭೂಕಂಪದ ಕೇಂದ್ರಬಿಂದು ನೇಪಾಳದ ಜಾಜರಕೋಟ್ ಜಿಲ್ಲೆಯಲ್ಲಿತ್ತು.

ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ (Pushpa Kamal Dahal) ಕೂಡ ಭೂಕಂಪದಿಂದ ಉಂಟಾದ ಜೀವ ಮತ್ತು ಆಸ್ತಿ ನಷ್ಟದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ರಕ್ಷಣಾ

ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಆರಂಭಿಸುವಂತೆ ಅವರು ಭದ್ರತಾ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಶನಿವಾರ ಮುಂಜಾನೆ ಅವರು ವೈದ್ಯರು ಮತ್ತು ಸಹಾಯ ಸಾಮಗ್ರಿಗಳೊಂದಿಗೆ

ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

ನೇಪಾಲ್‌ಗಂಜ್ ವಿಮಾನ ನಿಲ್ದಾಣ ಮತ್ತು ಮಿಲಿಟರಿ ಬ್ಯಾರಕ್ ಹೆಲಿಪ್ಯಾಡ್‌ನಲ್ಲಿ (Military Barracks Helipad) ಆಂಬ್ಯುಲೆನ್ಸ್ ನಿಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಭೇರಿ

ಆಸ್ಪತ್ರೆ, ಕೊಹಲ್‌ಪುರ್ ವೈದ್ಯಕೀಯ ಕಾಲೇಜು, ನೇಪಾಲ್‌ಗುಂಜ್ ಮಿಲಿಟರಿ ಆಸ್ಪತ್ರೆ ಮತ್ತು ಪೊಲೀಸ್ ಆಸ್ಪತ್ರೆಗಳನ್ನು ಭೂಕಂಪ ಪೀಡಿತರಿಗೆ ಮೀಸಲಿಡಲಾಗಿದೆ ಎಂದು ನೇಪಾಳದ ಅಧಿಕಾರಿಗಳನ್ನು

ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್​ಐ ವರದಿ ಮಾಡಿದೆ.

ಗಾಯಗೊಂಡವರನ್ನು ಏರ್‌ಲಿಫ್ಟ್ (Airlift) ಮಾಡಲು ಅನುಕೂಲವಾಗಿ ಮಾಡಿಕೊಡಲು ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ನೇಪಾಳ ಸೇನೆ ಮತ್ತು ನೇಪಾಳ ಪೊಲೀಸ್ ಸಿಬ್ಬಂದಿ ಭೂಕಂಪ

ಪೀಡಿತ ಸ್ಥಳಗಳಿಗೆ ರಕ್ಷಣಾ ಕಾರ್ಯವನ್ನು ಕೈಗೊಳ್ಳಲು ಧಾವಿಸಿವೆ. ನೇಪಾಳದ ಎಲ್ಲಾ ಹೆಲಿ – ಆಪರೇಟರ್‌ಗಳಿಗೆ ಸನ್ನದ್ಧವಾಗಿರಲು ನಿರ್ದೇಶನ ನೀಡಲಾಗಿದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ಮಾಡಿದ ಬಿಬಿಎಂಪಿ: ವ್ಯಾಪಾರಿಗಳ ವಿರೋಧ

Exit mobile version