• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

ಐಫೋನ್‌ 15ರ ಉತ್ಪಾದನೆ ಭಾರತದಲ್ಲಿ ಆರಂಭ ಸೆಪ್ಟೆಂಬರ್ 12 ರಂದು ಹೊಸ ಐಫೋನ್ ಬಿಡುಗಡೆ ದಿನಾಂಕ ಘೋಷಣೆ

Teju Srinivas by Teju Srinivas
in ಡಿಜಿಟಲ್ ಜ್ಞಾನ, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಐಫೋನ್‌ 15ರ ಉತ್ಪಾದನೆ ಭಾರತದಲ್ಲಿ ಆರಂಭ ಸೆಪ್ಟೆಂಬರ್ 12 ರಂದು ಹೊಸ ಐಫೋನ್ ಬಿಡುಗಡೆ ದಿನಾಂಕ ಘೋಷಣೆ
0
SHARES
205
VIEWS
Share on FacebookShare on Twitter

Chennai: ತಮಿಳುನಾಡಿನಲ್ಲಿ(Tamilnadu) ಆಪಲ್ ತನ್ನ ಮುಂದಿನ ಪೀಳಿಗೆಯ ಐಫೋನ್ (iPhone) 15ರ ಉತ್ಪಾದನೆಯನ್ನು ಆರಂಭಿಸಿದೆ. ಶೀಘ್ರದಲ್ಲೇ ಐಫೋನ್ 15ರ ಜೋಡಣೆಯನ್ನು ದೇಶದಲ್ಲಿನ ಇತರ ಆಪಲ್ ಪೂರೈಕೆದಾರರಾದ ಟಾಟಾ ಗ್ರೂಪ್ ಮತ್ತು ಪೆಗಾಟ್ರಾನ್ ಕಾರ್ಪ್ (Pegatron Corp) ಅಧೀನಪಡಿಸಿಕೊಂಡಿರುವ ವಿಸ್ಟ್ರಾನ್ ಕಾರ್ಪ್ ಘಟಕವೂ ಆರಂಭಿಸಲಿದೆ. ಇದರ ಜೊತೆಗೆ ತೆಲಂಗಾಣದಲ್ಲಿ (Telangana) ಆಪಲ್‌ ತನ್ನ ಏರ್‌ಪಾಡ್ಸ್‌ ಉತ್ಪಾದನೆ ಆರಂಭಿಸಲಿದ್ದು, ಇದಕ್ಕಾಗಿ 400 ಮಿಲಿಯನ್‌ ಡಾಲರ್‌ ಹೂಡಿಕೆಯನ್ನು ಫಾಕ್ಸ್‌ಕಾನ್‌ ಮಾಡಲಿದೆ.

ಭಾರತ ಮತ್ತು ಚೀನಾದಲ್ಲಿನ ಮುಖ್ಯ ಉತ್ಪಾದನಾ ನೆಲೆಯ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡುವ ಪ್ರಯತ್ನಕ್ಕೆ ಈ ಮೂಲಕ ಆಪಲ್‌ ಕೈ ಹಾಕಿದ್ದು, ಶ್ರೀಪೆರಂಬದೂರಿನಲ್ಲಿರುವ (Sriperambadur) ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ (Foxconn Technology Group) ಘಟಕವು ಉತ್ಪಾದನೆಗೆ ಬೇಕಾದ ಸಿದ್ಧತೆ ಮಾಡಿದೆ. ಈಗಾಗಲೇ ಫೋನ್‌ಗಳ ಪೂರೈಕೆಯನ್ನು ಚೀನಾದ ಘಟಕಗಳು ಆರಂಭಿಸಿದ್ದು,

ಇದಾದ ಒಂದು ವಾರಗಳ ಬಳಿಕ ಈ ಬೆಳವಣಿಗೆ ಆರಂಭವಾಗಲಿದೆ. ಆಪಲ್‌ ಕಂಪನಿಯು (Apple Company) ಭಾರತದಲ್ಲಿ ತಯಾರಾಗುವ ಹೊಸ ಐಫೋನ್‌ಗಳ ವಾಲ್ಯೂಮ್‌ನ್ನು ತ್ವರಿತವಾಗಿಜಾಸ್ತಿಮಾಡಲು ಪ್ರಯತ್ನಿಸುತ್ತಿದೆ ಎಂದು ಇದರ ಕುರಿತು ತಿಳಿದಿರುವ ಜನರು ಹೇಳಿದ್ದಾರೆ.

ಇನ್ನು ಆಪಲ್‌ ಭಾರತದಲ್ಲಿ ತನ್ನ ಐಫೋನ್‌ಗಳನ್ನು 14ಕ್ಕಿಂತ ಮೊದಲು ಜೋಡಣೆ ಮಾತ್ರ ಮಾಡುತ್ತಿತ್ತು. ಹಾಗೂ ಚೀನಾಕ್ಕೆ ಹೋಲಿಸಿದರೆ ಉತ್ಪಾದನೆ 6 ರಿಂದ 9 ತಿಂಗಳವರೆಗೆ ಹಿಂದುಳಿದಿತ್ತು. ಆದರೆ ಈ ವಿಳಂಬವನ್ನು ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಕಡಿಮೆಗೊಳಿಸಲಾಗಿದ್ದು, ಆಪಲ್ ತನ್ನ ಐಫೋನ್‌ಗಳಲ್ಲಿ ಶೇ. 7ರಷ್ಟನ್ನು ಮಾರ್ಚ್ ಅಂತ್ಯದಲ್ಲಿ ಭಾರತದಲ್ಲೇ ಉತ್ಪಾದಿಸಿದೆ.

ಇದರ ಅಂತರವನ್ನು ಪೂರ್ತಿಯಾಗಿ ಈ ವರ್ಷ ತೊಡೆದು ಹಾಕುವ ಗುರಿಯನ್ನು ಕಂಪನಿ ಹೊಂದಿದ್ದು, ಭಾರತದ ಆಮದು ಮಾಡಿಕೊಳ್ಳುವ ಬಿಡಿಭಾಗಗಳ ಐಫೋನ್ 15 ಉತ್ಪಾದನೆಯ ಪ್ರಮಾಣವು ಹೆಚ್ಚಾಗಿ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಮತ್ತು ಚೆನ್ನೈನ ಹೊರಗಿರುವ ಫಾಕ್ಸ್‌ಕಾನ್ (Foxconn) ಕಾರ್ಖಾನೆಯಲ್ಲಿನ ಉತ್ಪಾದನಾ ಮಾರ್ಗಗಳ ಸುಲಭ ತಯಾರಿಯನ್ನೂ ಅವಲಂಬಿಸಿರುತ್ತದೆ.

ಸೆಪ್ಟೆಂಬರ್ (September) 12 ರಂದು ಹೊಸ ಐಫೋನ್ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆಯಿದ್ದು, ಇದೇ ಮೊದಲ ಬಾರಿಗೆ ಸಾಧನಕ್ಕೆ ಸಂಬಂಧಿಸಿದಂತೆ ಈ ಮೂರು ವರ್ಷಗಳಲ್ಲಿ ಮೊದಲ ಅಪ್‌ಡೇಟ್ ಸಿಗಲಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿಮ್ ಕುಕ್ (Tim Cook) ಅವರು ಆಪಲ್ ದೇಶದಾದ್ಯಂತ ಹೂಡಿಕೆ ಮಾಡಲು ಹಾಗೂ ಹೂಡಿಕೆ ಹೆಚ್ಚಿಸಲು ಬದ್ಧವಾಗಿದೆ ಎಂದು ಏಪ್ರಿಲ್‌ನಲ್ಲಿ ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ಮೋದಿ ಭೇಟಿ ಬಳಿಕ ಹೇಳಿದ್ದರು.

ಭವ್ಯಶ್ರೀ ಆರ್.ಜೆ

Tags: iphonenewphonerelease

Related News

ನಿಂಬೆ ಹಣ್ಣನ್ನು ಈ ಆಹಾರಗಳ ಜೊತೆ ಅಪ್ಪಿತಪ್ಪಿಯೂ ಬಳಸಬೇಡಿ..!
ಆರೋಗ್ಯ

ನಿಂಬೆ ಹಣ್ಣನ್ನು ಈ ಆಹಾರಗಳ ಜೊತೆ ಅಪ್ಪಿತಪ್ಪಿಯೂ ಬಳಸಬೇಡಿ..!

September 26, 2023
ಬಿಗ್‌ ಶಾಕ್: 18ಕ್ಕೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತ ವಿವರ ಇಲ್ಲಿದೆ.
ಡಿಜಿಟಲ್ ಜ್ಞಾನ

ಬಿಗ್‌ ಶಾಕ್: 18ಕ್ಕೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತ ವಿವರ ಇಲ್ಲಿದೆ.

September 26, 2023
ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲು 3 ದಿನಗಳ ಗಡುವು, ಮನವಿ ಸ್ವೀಕರಿಸಿದ ರಾಮಲಿಂಗಾ ರೆಡ್ಡಿ
ದೇಶ-ವಿದೇಶ

ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲು 3 ದಿನಗಳ ಗಡುವು, ಮನವಿ ಸ್ವೀಕರಿಸಿದ ರಾಮಲಿಂಗಾ ರೆಡ್ಡಿ

September 26, 2023
ಹಿರಿಯ ನಟಿ ವಹೀದಾ ರೆಹಮಾನ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ದೇಶ-ವಿದೇಶ

ಹಿರಿಯ ನಟಿ ವಹೀದಾ ರೆಹಮಾನ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

September 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.