ಭಾರತದಲ್ಲಿ ಇಂದಿನಿಂದ ಹೊಸ ಕಾನೂನು ವ್ಯವಸ್ಥೆ: ಬ್ರಿಟೀಷ್ ಕಾನೂನಿಗೆ ಮುಕ್ತಿ, ಹೊಸ ಅಪರಾಧ ಕಾಯ್ದೆ ಜಾರಿ.

New Delhi: ನಮ್ಮ ದೇಶದಲ್ಲಿ ಈಗ ಯಾವ ಕಾನೂನುಗಳು #Law ಜಾರಿಯಲ್ಲಿದೆಯೋ ಅವೆಲ್ಲ ಬಹುತೇಕ ಬ್ರಿಟಿಷರ ಕಾಲದ್ದು. ಹೀಗಾಗಿ ಈ ಕಾನೂನನ್ನು ಪ್ರಸ್ತುತ ಕಾಲಕ್ಕೆ ಸರಿಹೊಂದುವಂತೆ ಕೇಂದ್ರ ಸರ್ಕಾರ ಹೊಸ ಕಾನೂನುಗಳನ್ನು ಜಾರಿಗೆ ತರುತ್ತಿದೆ . ಹಾಗೂ ಇಂದಿನಿಂದ ಜಾರಿಗೆ ಬರಲಿದೆ. ಈ ಕಾನೂನು ಕ್ರಿಮಿನಲ್ ಅಪರಾಧ (Criminal Case) ಗಳನ್ನು ನಿಭಾಯಿಸುವಲ್ಲಿ ಮತ್ತಷ್ಟು ವೇಗ ಮತ್ತು ಪರಿಣಾಮಕಾರಿ ಎನಿಸಿಕೊಳ್ಳಲಿದೆ.

Criminal Case

ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ (IPC), ಅಪರಾಧ ಪ್ರಕ್ರಿಯ ಸಂಹಿತೆ (CRPC) ಮತ್ತು ಭಾರತೀಯ ಸಾಕ್ಷಿ ಕಾಯ್ದೆಗಳ ಬದಲಿಗೆ ಕೇಂದ್ರ ಸರ್ಕಾರವು ಹೊಸದಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ ಕಾನೂನು ರೂಪಿಸಿದ್ದು,ಈ ಹೊಸ ಕಾನೂನುಗಳು ಆಧುನಿಕ ನ್ಯಾಯ ವ್ಯವಸ್ಥೆಗೆ ಮುನ್ನುಡಿ ಬರೆಯಲಿವೆ.

ಇನ್ನು ಜಾರಿಗೆ ಬರಲಿರುವ ಹೊಸ ಕಾಯ್ದೆಗಳು ದೇಶದ ಕಾನೂನು ಕ್ಷೇತ್ರದಲ್ಲಿ ದೊಡ್ಡ ರೂಪಾಂತರಕ್ಕೆ ಕಾರಣವಾಗಲಿವೆ. ಇವುಗಳ ಮೂಲಕ ಆಧುನಿಕ ನ್ಯಾಯ ವ್ಯವಸ್ಥೆ ಜಾರಿಗೆ ಬರಲಿದೆ. ಹೊಸ ವ್ಯವಸ್ಥೆಯಲ್ಲಿ ಶೂನ್ಯ ಎಫ್‌ಐಆರ್‌ (FIR), ಆನ್‌ಲೈನ್‌ನಲ್ಲೇ ಪೊಲೀಸರಿಗೆ ದೂರು ನೀಡುವುದು, ಎಸ್‌ಎಂಎಸ್‌ ಮೂಲಕ ಸಮನ್ಸ್‌ ಜಾರಿ, ಅಪರಾಧ ಸ್ಥಳದ ಕಡ್ಡಾಯ ವಿಡಿಯೋ ಚಿತ್ರೀಕರಣ ಮುಂತಾದ ನಿಯಮಗಳು ಇರಲಿವೆ. ಬದಲಾದ ಕಾಲಕ್ಕೆ ತಕ್ಕಂತೆ ಕಾನೂನು ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.

ವಿಚಾರಣೆ ಮುಗಿದ 45 ದಿನದೊಳಗೆ ಕೋರ್ಟ್‌ಗಳು ತೀರ್ಪು:

ಹೊಸ ಕಾಯ್ದೆಗಳ ಪ್ರಕಾರ, ಕ್ರಿಮಿನಲ್‌ ಪ್ರಕರಣಗಳಲ್ಲಿ ವಿಚಾರಣೆ ಮುಗಿದು 45 ದಿನದೊಳಗೆ ಕೋರ್ಟ್‌ಗಳು (Court) ತೀರ್ಪು ನೀಡಬೇಕು. ಕೋರ್ಟ್‌ನಲ್ಲಿ ಮೊದಲ ವಿಚಾರಣೆ ನಡೆದು 60 ದಿನದೊಳಗೆ ಪೊಲೀಸರು ಆರೋಪಪಟ್ಟಿ ಸಲ್ಲಿಸಬೇಕು. ಅತ್ಯಾಚಾರ ಪ್ರಕರಣಗಳ ಸಂತ್ರಸ್ತರ ಹೇಳಿಕೆಯನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೇ ದಾಖಲಿಸಿಕೊಳ್ಳಬೇಕು. ವೈದ್ಯಕೀಯ ವರದಿ ಏಳು ದಿನದೊಳಗೆ ಬಂದು ಅಪರಾಧಿಗೆ ಶಿಕ್ಷೆ ಜಾರಿಯಾಗಬೇಕು ಎನ್ನುವುದು ಹೊಸ ಕಾನೂನಿನಲ್ಲಿದೆ.

ಸೆಕ್ಷನ್‌ಗಳು 511ರಿಂದ 358ಕ್ಕೆ ಇಳಿಕೆಯಾಗಿದೆ:

ಐಪಿಸಿಯಲ್ಲಿ ಪರಸ್ಪರ ವೈರುಧ್ಯ ಅಥವಾ ಸಮಾನತೆಯಿದ್ದ ಸೆಕ್ಷನ್‌ಗಳನ್ನು ಭಾರತೀಯ ನ್ಯಾಯಸಂಹಿತೆಯಲ್ಲಿ ತೆಗೆದು ಸರಳೀಕರಣಗೊಳಿಸಲಾಗಿದೆ. ಐಪಿಸಿಯಲ್ಲಿ 511 ಸೆಕ್ಷನ್‌ಗಳಿದ್ದರೆ, ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ಕೇವಲ 358 ಸೆಕ್ಷನ್‌ಗಳಿವೆ. ಐಪಿಸಿಯಲ್ಲಿ ಮದುವೆಯ ಸುಳ್ಳು ಭರವಸೆ, ಅಪ್ರಾಪ್ತರ ಮೇಲಿನ ಸಾಮೂಹಿಕ ಅತ್ಯಾಚಾರ, ಸಾಮೂಹಿಕ ಹತ್ಯೆ, ಸರಗಳವು ಇತ್ಯಾದಿ ಪ್ರಕರಣಗಳನ್ನು ದಾಖಲಿಸಿಕೊಂಡರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದಿಷ್ಟ ಸೆಕ್ಷನ್‌ಗಳಿರಲಿಲ್ಲ. ಹೊಸ ಕಾಯ್ದೆಯಲ್ಲಿ ಅವುಗಳಿಗೆ ನಿರ್ದಿಷ್ಟ ಸೆಕ್ಷನ್‌ ಸೇರಿಸಲಾಗಿದೆ.

ಮದುವೆಯ ಭರವಸೆ ನೀಡಿ ಲೈಂಗಿಕ ಸಂಪರ್ಕ ನಡೆಸಿ ಮಹಿಳೆಯನ್ನು ತ್ಯಜಿಸುವುದರ ವಿರುದ್ಧ ಪ್ರತ್ಯೇಕ ಸೆಕ್ಷನ್‌ ಅಲ್ಲಿ ಸೇರಿಸಲಾಗುತ್ತದೆ. ಹೀಗೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಹ ಹಲವು ನಿಯಮಗಳನ್ನು ಹೊಸ ಕಾನೂನು ಹೊಂದಿದೆ.

Exit mobile version