ಬೆಂಗಳೂರಿಗರಿಗೆ ಕಸ ವಿಲೇವಾರಿಗೆ ಜೂನ್​ 1ರಿಂದ ಹೊಸ ಯೋಜನೆ ರೂಪಿಸಿದ ಸರ್ಕಾರ.

Bengaluru: ಬೆಂಗಳೂರಿಗರಿಗೆ (Bengaluru) ಬೆಳಗಾಯಿತೆಂದರೆ ಕಸ ವಿಲೇವಾರಿಯದೆ ಚಿಂತೆ. ಕಸದ ಗಾಡಿ ಮನೆ ಬಾಗಿಲಿಗೆ ಬಂದು ಕಸವನ್ನು ನೀಡಿದರೆ ಮಾತ್ರ ನೆಮ್ಮದಿ . ಇಲ್ಲವಾದರೆ ಇಡೀ ದಿನಪೂರ್ತಿ ಕಸ ವಿಲೇವಾರಿ ಮಾಡುವ ಯೋಚನೆ ಕಾಡುತ್ತಿರುತ್ತದೆ. ಇದೀಗ ದಿನನಿತ್ಯದ ಕಸ ವಿಲೇವಾರಿಗೆ ಹೊಸ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದಕ್ಕೆಂದೇ ಹೊಸ ಕಂಪನಿಯೊಂದನ್ನು ಸ್ಥಾಪನೆ ಮಾಡಿ ಆದೇಶ ಹೊರಡಿಸಿದೆ. ಜೂನ್ (June 1) ರಿಂದಲೇ ಹೊಸ ಯೋಜನೆ ಜಾರಿಗೆ ಬರಲಿದೆ.

BBMP

ನಗರದಲ್ಲಿ ಕಸದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಸ ವಿಲೇವಾರಿಗೆಂದೇ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ (Bangalore Solid Waste Management Company limited) ಸ್ಥಾಪನೆ ಮಾಡಿ ಎಂದು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ಈ ಕಂಪನಿ ಸ್ಥಾಪನೆ ಮಾಡಿವೆ. ಇನ್ನು ಮುಂದೆ ನಗರದಲ್ಲಿ ಕಸದ ಸಮಸ್ಯೆ ಕಂಡುಬಂದರೆ ಈ ಕಂಪನಿಯೇ ನಿರ್ವಹಣೆ ಮಾಡಲಿದೆ ಎಂದು ಹೇಳಿದೆ.

ಇದೀಗ ಬಿಬಿಎಂಪಿ (BBMP) ಮಾಡುತ್ತಿದ್ದ ಕಸ ಸಂಗ್ರಹಣೆ, ಸಾಗಾಣಿಕೆ ಹಾಗೂ ವಿಲೇವಾರಿ ಕಾರ್ಯಯವನ್ನು ಜೂನ್ 1 ರಿಂದ ಹೊಸ ಕಂಪನಿ ನಿರ್ವಹಣೆ ಮಾಡಲಿದೆ. ಮನೆ ಮನೆಯಿಂದ ಅಟೋದಲ್ಲಿ ಕಸ ಸಂಗ್ರಹಣೆ ಮಾಡುವುದು, ಸಂಗ್ರಹ ಮಾಡಿದ ಕಸವನ್ನು ಟಿಪ್ಪರ್ ಲಾರಿಗಳ (Tipper Lorry) ಮೂಲಕ ಕಸ ಸಂಸ್ಕರಣಾ ಘಟಕ ಅಥವಾ ಕ್ವಾರಿಗಳಿಗೆ ಸಾಗಿಸುವುದು ಕಂಪನಿಯ ಕೆಲಸವಾಗಿರಲಿದೆ.

ಇನ್ನು ಬಿಬಿಎಂಪಿ ಅಡಿಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅಟೋ, ಟಿಪ್ಪರ್, ಕಾಂಪ್ಯಾಕ್ಟರ್, ಚಾಲಕರು, ಸಹಾಯಕರು ಇನ್ನು ಮುಂದೆ ಕಂಪನಿ ವ್ಯಾಪ್ತಿಗೆ ಬರಲಿದ್ದಾರೆ. ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ವಾರ್ಡ್ ಮಟ್ಟದ ಇಂಜಿನಿಯರ್​ಗಳು, ಸಿಬ್ಬಂದಿ ಹಾಗೂ ಮಾರ್ಷಲ್​​ಗಳು ಕಂಪನಿ (Martial Company) ಅಧೀನಕ್ಕೆ ಒಳಪಡಲಿದ್ದಾರೆ. ಇವಿಷ್ಟೂ ಮಂದಿ ಅಧಿಕಾರಿಗಳು, ಸಿಬ್ಬಂದಿ ವೇತನ ಕಂಪನಿಯಿಂದಲೇ ಪಾವತಿಯಾಗಲಿದೆ. ನಗರದಲ್ಲಿರುವ 7 ಕಸ ಸಂಸ್ಕರಣಾ ಘಟಕಗಳು ಕಂಪನಿ ವ್ಯಾಪ್ತಿಗೆ ಬರಲಿವೆ.ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಪ್ರತಿ ವರ್ಷ ಈ ಕಂಪನಿಗೆ ನಿಯಮಿತ ಆದಾಯವನ್ನು ನೀಡಲಿದೆ.

Exit mobile version