ಶುಭ ಸುದ್ದಿ: ಏರ್​ಟೆಲ್​ನಿಂದ ಬಂತು ಮತ್ತೊಂದು ಹೊಸ ಯೋಜನೆ, ಮಾಹಿತಿ ಹೀಗಿದೆ

ಏರ್​ಟೆಲ್​ನ(Airtel) ಈ ಹೊಸ ಪ್ರಿಪೇಯ್ಡ್ ಯೋಜನೆ (New plan from Airtel) ನೆಟ್‌ಫ್ಲಿಕ್ಸ್ ಹೊರತುಪಡಿಸಿ, ರೂ. 1499 ಪ್ಲಾನ್‌ನೊಂದಿಗೆ ನೀವು ಯಾವ ಪ್ರಯೋಜನಗಳನ್ನು ಪಡೆಯುತ್ತೀರಿ?

ಎಷ್ಟು ಸಮಯದ ವ್ಯಾಲಿಡಿಟಿ? (New plan from Airtel) ಈ ಕುರಿತ ಮಾಹಿತಿ ಇಲ್ಲಿದೆ.

ನೆಟ್‌ಫ್ಲಿಕ್ಸ್(Netflix) ಚಂದಾದಾರಿಕೆಗೆ ಈಗ ವೆಚ್ಚ ಮತ್ತಷ್ಟು ಕಡಿಮೆಯಾಗಲಿದೆ ಹೇಗೇಂದರೆ ಪ್ರತಿ ತಿಂಗಳು ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಖರೀದಿಸಿ ವೀಕ್ಷಿಸುವವರಾಗಿದ್ದರೆ ಇಲ್ಲೊಂದು

ಶುಭಸುದ್ದಿಯಿದೆ. ಪ್ರಸಿದ್ಧ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ತನ್ನ ಪ್ರಿಪೇಯ್ಡ್(Prepaid) ಬಳಕೆದಾರರಿಗೆ ಉತ್ತಮ ರೀಚಾರ್ಜ್ ಯೋಜನೆಯನ್ನು ತಂದಿದೆ. ಇದು ಡೇಟಾ, ಕರೆ ಮತ್ತು SMS

ಪ್ರಯೋಜನಗಳನ್ನು ಹೊರತುಪಡಿಸಿ, ಉಚಿತ ನೆಟ್‌ಫ್ಲಿಕ್ಸ್‌ ಚಂದಾದಾರಿಕೆಯನ್ನು ನೀಡುತ್ತದೆ.

ಈ ಯೋಜನೆಯ ಬೆಲೆ 1499 ರೂ.ಯೋಜನೆ ವಿವರಗಳು


ಈ ಯೋಜನೆಯಲ್ಲಿ ನೀವು ಪ್ರತಿದಿನ 3 GB ಹೈ ಸ್ಪೀಡ್ (High Speed) ಡೇಟಾದ ಪ್ರಯೋಜನವನ್ನು ಪಡೆಯುವುದಲ್ಲದೆ ಇದರೊಂದಿಗೆ ಅನಿಯಮಿತ ಉಚಿತ ಕರೆ ಮತ್ತು ಪ್ರತಿದಿನ 100 SMS ಗಳ ಪ್ರ

ಯೋಜನವನ್ನು ಪಡೆಯಬಹುದು. 84 ದಿನಗಳ ವ್ಯಾಲಿಡಿಟಿ ಹೊಂದಿದ್ದು . ಡೇಟಾ (Data), ಕರೆ ಮತ್ತು ಎಸ್‌ಎಂಎಸ್‌ಗಳ ಹೊರತಾಗಿ, ಈ ಪ್ಲಾನ್‌ನೊಂದಿಗೆ ನೀವು ಕೆಲವು ಹೆಚ್ಚುವರಿ ಪ್ರಯೋಜನಗಳನ್ನು

ಆನಂದಿಸಬಹುದು.

ಏರ್‌ಟೆಲ್​ನ 1499 ರೂಪಾಯಿಗೆ. ನೀವು OTT ಪ್ರೇಮಿಯಾಗಿದ್ದರೆ ಈ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಬೇಸಿಕ್‌ಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ. ಈ ಯೋಜನೆಯೊಂದಿಗೆ ಅನಿಯಮಿತ 5G

ಡೇಟಾವನ್ನು ಉಪಯೋಗಿಸಬಹುದು. ಈ ಯೋಜನೆಯು ನಿಮಗೆ Apollo 24/7 ವಲಯ ಸದಸ್ಯತ್ವವನ್ನು ಮತ್ತು ನೀವು 5G ಸ್ಮಾರ್ಟ್‌ಫೋನ್ ಹೊಂದಿದ್ದರೆ ಮತ್ತು ನೀವು ಏರ್‌ಟೆಲ್‌ನ 5G ಸೇವೆಗಳು

ಲಭ್ಯವಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, Wynk ಸಂಗೀತಕ್ಕೆ ಉಚಿತ ಪ್ರವೇಶವನ್ನು ಕೂಡ ನೀಡುತ್ತದೆ.

ಇಲ್ಲಿ ಏರ್​ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ (Airtel Thanks Application) ಮೂಲಕ ನೆಟ್‌ಫ್ಲಿಕ್ಸ್ ಪ್ರಯೋಜನಗಳನ್ನು ಪಡೆಯಬಹುದು. ಅಪ್ಲಿಕೇಶನ್‌ನ, ಡಿಸ್ಕವರ್ ಥ್ಯಾಂಕ್ಸ್ ಬೆನಿಫಿಟ್ ಪುಟದಲ್ಲಿ

ನೆಟ್‌ಫ್ಲಿಕ್ಸ್ ಬೆನಿಫಿಟ್ ಆಯ್ಕೆಯನ್ನು ನೋಡುತ್ತೀರಿ. ನೆಟ್‌ಫ್ಲಿಕ್ಸ್’ನ ಮೂಲ ಚಂದಾದಾರಿಕೆ ಯೋಜನೆಯ ಮಾಸಿಕ ಬೆಲೆ ರೂಪಾಯಿ. 199 ಮಾತ್ರ ಇಲ್ಲಿ ಕ್ಲೈಮ್ ಬಟನ್ (Claim Button) ಅನ್ನು ಟ್ಯಾಪ್

ಮಾಡಿ, ನಂತರ ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ಈ ಯೋಜನೆಯೊಂದಿಗೆ ಲಭ್ಯವಿರುವ ನೆಟ್‌ಫ್ಲಿಕ್ಸ್ ಪ್ರಯೋಜನವು 84

ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಇದನ್ನು ಓದಿ: ಬಾಳಲ್ಲೂ ಬೆಳಕಿಲ್ಲ, ಮನೆಯಲ್ಲೂ ಬೆಳಕಿಲ್ಲ: ಗೃಹಜ್ಯೋತಿ ಯೋಜನೆಯಿಂದ 35,089 ಫಲಾನುಭವಿಗಳು ವಂಚಿತರು.

Exit mobile version