ಮಾರುಕಟ್ಟೆಗೆ ಲಗ್ಗೆಯಿಡಲು ನಿಂತಿವೆ ಸಾಲು ಸಾಲು ಸ್ಮಾರ್ಟ್​ಫೋನ್​ಗಳು

ಮೊಬೈಲ್ ಬಳಕೆದಾರರು ಹೆಚ್ಚಾದಂತೆ ವಿವಿಧ ರೀತಿಯ ಸ್ಮಾರ್ಟ್ಫೋನುಗಳು (Smartphones) ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಇದೇ ಮಾರ್ಚ್ 18 ರಂದು ಇನ್ಫಿನಿಕ್ಸ್ ತನ್ನ ನೋಟ್ 40 ಪ್ರೊ ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಸರಣಿಯಲ್ಲಿ ಕಂಪನಿಯು ನಾಲ್ಕು ಮಾದರಿಗಳನ್ನು ಪರಿಚಯಿಸಬಹುದು ಎಂದು ವರದಿಯಾಗಿದೆ. ಇವುಗಳು ಇನ್ಫಿನಿಕ್ಸ್ ನೋಟ್ 40 ಮತ್ತು ಇನ್ಫಿನಿಕ್ಸ್ ನೋಟ್ 40 ಪ್ರೊ ಅನ್ನು ಒಳಗೊಂಡಿರುತ್ತದೆ.

ಮುಂದಿನ ವಾರ ಕೂಡ ದೇಶದಲ್ಲಿ ಕೆಲ ನಿರೀಕ್ಷಿತ ಫೋನುಗಳು ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ರಿಯಲ್ ಮಿ, ವಿವೋ (Real Me, Vivo) ಮತ್ತು ಇನ್ಫಿನಿಕ್ಸ್​ನಂತಹ ಸ್ಮಾರ್ಟ್‌ಫೋನ್ ತಯಾರಕರು ಜನಪ್ರಿಯ ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿರುವ ಫೋನುಗಳು ಯಾವುವು?, ಅವುಗಳಲ್ಲಿ ಏನೆಲ್ಲ ಫೀಚರ್ಸ್ ಇರಬಹುದು ಎಂಬುದನ್ನು ತಿಳಿಯೋಣ…

ಇನ್ಫಿನಿಕ್ಸ್ ನೋಟ್ 40 ಪ್ರೊ
ಮಾರ್ಚ್ (March) 18 ರಂದು ಇದು ತನ್ನ ನೋಟ್ 40 ಪ್ರೊ ಸರಣಿಯನ್ನು ಬಿಡುಗಡೆ ಮಾಡಲಿದ್ದು, ಈ ಸರಣಿಯಲ್ಲಿ ಕಂಪನಿಯು ನಾಲ್ಕು ಮಾದರಿಗಳನ್ನು ಪರಿಚಯಿಸಬಹುದು ಎಂದು ವರದಿಯಾಗಿದೆ. ಇವುಗಳು ಇನ್ಫಿನಿಕ್ಸ್ ನೋಟ್ 40 ಮತ್ತು ಇನ್ಫಿನಿಕ್ಸ್ ನೋಟ್ 40 ಪ್ರೊ ಅನ್ನು ಒಳಗೊಂಡಿರುತ್ತದೆ, ಇದು 4G ಸಂಪರ್ಕದೊಂದಿಗೆ ಬರುತ್ತದೆ. ಇನ್ಫಿನಿಕ್ಸ್ ನೋಟ್ 40 ಪ್ರೊ ನ 4G ಮಾದರಿಯಲ್ಲಿ ಹಿಲಿಯೊ G99 ಚಿಪ್‌ಸೆಟ್ ಅನ್ನು ಕಾಣಬಹುದು. ಇದರ ಪ್ರಾಥಮಿಕ ಕ್ಯಾಮೆರಾ 108 ಮೆಗಾಪಿಕ್ಸೆಲ್ ಎಂದು ಹೇಳಲಾಗಿದೆ. ಇನ್ಫಿನಿಕ್ಸ್ ನೋಟ್ 40 ಪ್ರೊ (Infinix Note 40 Pro) 5G ನಲ್ಲಿ ಡೈಮೆನ್ಸಿಟಿ 7020 ಪ್ರೊಸೆಸರ್ ಅನ್ನು ಕಾಣಬಹುದು. ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ನಲ್ಲಿ 100W ಚಾರ್ಜಿಂಗ್ ವೈಶಿಷ್ಟ್ಯವನ್ನು ಒದಗಿಸಬಹುದು.

ರಿಯಲ್ ಮಿ ನಾರ್ಜೊ 70 ಪ್ರೊ 5G
ರಿಯಲ್ ಮಿ ನಾರ್ಜೊ 70 ಪ್ರೊ 5G (Realme Norzo 70 Pro 5G) ಭಾರತದಲ್ಲಿ ಮಾರ್ಚ್ 19 ರಂದು ಬಿಡುಗಡೆಯಾಗಲಿದ್ದು, ರಿಯಲ್ ಮಿ ನಾರ್ಜೊ 70 ಪ್ರೊ 5G ರೇನ್‌ವಾಟರ್ ಸ್ಮಾರ್ಟ್ ಟಚ್ ಮತ್ತು ಏರ್ ಗೆಸ್ಚರ್ ಕಂಟ್ರೋಲ್ ವೈಶಿಷ್ಟ್ಯವನ್ನು ಹೊಂದಿರುತ್ತದೆ. ರೇನ್‌ವಾಟರ್ ಸ್ಮಾರ್ಟ್ ಟಚ್ ವಿಶೇಷ ಫೀಚರ್ ಆಗಿದ್ದು, ಇದು ಡಿಸ್​ಪ್ಲೇಯ ಮೇಲೆ ನೀರು ಬಿದ್ದರೂ, ಅಂದರೆ ಮಳೆಯಲ್ಲೂ ಈ ಫೋನ್ ಬಳಸಬಹುದು. ಡೈಮೆನ್ಸಿಟಿ 7050 ಚಿಪ್‌ಸೆಟ್ ಅನ್ನು ಫೋನ್‌ನಲ್ಲಿ ನೀಡಬಹುದು. ಇದು ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ, ಇದರಲ್ಲಿ Realme UI 5 ಇಂಟರ್ಫೇಸ್ ಅನ್ನು ಕಾಣಬಹುದು. 67W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುತ್ತದೆ. ಇದು 5,000mAh ಬ್ಯಾಟರಿಯೊಂದಿಗೆ ಬರುವ ಸಾಧ್ಯತೆ ಇದೆ.

ವಿವೋ T3 5G
ಈ ಫೋನ್ 6.67-ಇಂಚಿನ FHD + AMOLED ಡಿಸ್ಪ್ಲೇಯೊಂದಿಗೆ ಮೀಡಿಯಾಟೆಕ್ ಡೈಮೆನ್ಸಿಟಿ ಸರಣಿಯ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ವಿವೋ T3 5G ಭಾರತದಲ್ಲಿ ಮಾರ್ಚ್ 21 ರಂದು ಮಧ್ಯಾಹ್ನ 12 PM IST ಕ್ಕೆ ಬಿಡುಗಡೆಯಾಗಲಿದೆ ಎಂದು ವಿವೋ ಬಹಿರಂಗಪಡಿಸಿದೆ. ವರದಿಗಳ ಪ್ರಕಾರ, ಇದು 50MP ಸೋನಿ IMX882 ಮುಖ್ಯ ಕ್ಯಾಮೆರಾ, 2MP ಬೊಕೆ ಲೆನ್ಸ್ ಜೊತೆಗೆ ಫ್ಲಿಕರ್ ಸಂವೇದಕವನ್ನು ಹೊಂದಿರಬಹುದು. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 16MP ಮುಂಭಾಗದ ಕ್ಯಾಮೆರಾದೊಂದಿಗೆ ಬರಲಿದೆ ಎಂದು ಊಹಿಸಲಾಗಿದೆ. 44W ಫ್ಲ್ಯಾಶ್‌ಚಾರ್ಜ್ ತಂತ್ರಜ್ಞಾನಕ್ಕೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದುವ ನಿರೀಕ್ಷೆಯಿದೆ.

Exit mobile version