Bengaluru: ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ಬೆಂಗಳೂರಿನಲ್ಲಿ (Bengaluru) ಕಾನೂನು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸರು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಹೊಸ ವರ್ಷಾಚರಣೆ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ (B Dayanand) ಸುದ್ದಿಗೋಷ್ಠಿ ನಡೆಸಿ ಮಾರ್ಗಸೂಚಿ ತಿಳಿಸಿದರು.
ಹೊಸ ವರ್ಷಾಚರಣೆ (New Year Celebration) ವೇಳೆ ಜನರ ಸುರಕ್ಷತೆ ನಮ್ಮ ಆದ್ಯ ಕರ್ತವ್ಯ. ಯಾವುದೇ ಕಾರಣಕ್ಕೂ ಮಹಿಳೆ ಮತ್ತು ಮಕ್ಕಳಿಗೆ ಸಮಸ್ಯೆ ಆಗಬಾರದು. ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ ಹೊಸ ವರ್ಷಾಚರಣೆ ದಿವಸ ಕ್ಲಬ್ಗಳಿಗೆ ರಾತ್ರಿ 1 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ವೈನ್ ಶಾಪ್ (Wine Shop)ಗಳಿಗೆ ರಾತ್ರಿ 12 ಗಂಟೆಯವರೆಗೆ ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.
ಹೊಸ ವರ್ಷ ಆಚರಣೆಯಲ್ಲಿ ಯಾರಿಗೂ ತೊಂದರೆ ಆಗಬಾರದು
ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು ಇರುತ್ತಾರೆ
ಒಬ್ಬ ಜಂಟಿ ಪೊಲೀಸ್ ಆಯುಕ್ತರು, 15 ಡಿಸಿಪಿ (DCP), 45 ಎಸಿಪಿ (ACP)
160 ಇನ್ಸ್ಪೆಕ್ಟರ್ಸ್, 600 ಸಬ್ ಇನ್ಸ್ಪೆಕ್ಟರ್ಸ್ (Sub Inspectors), 600 ಎಎಸ್ಐ
1800 ಹೆಚ್ಸಿ, 5200 ಪಿಸಿಗಳು ಭದ್ರತೆ ನೀಡಲಿದ್ದಾರೆ
ಬ್ರಿಗೇಡ್ ರಸ್ತೆ (Brigade Road), ಎಂಜಿ ರಸ್ತೆಯಲ್ಲಿ 3000 ಪೊಲೀಸರ ನಿಯೋಜನೆ
ನಗರದಾದ್ಯಂತ ಮಹಿಳೆಯರಿಗಾಗಿ ಸೇಫ್ಟಿ ಐ ಲ್ಯಾಂಡ್ (Safety I land) ಸ್ಥಾಪನೆ
ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಕಿಯೋಸ್ಕ್ ಸ್ಥಾಪನೆ ಮಾಡ್ತಾರೆ
ಇಲ್ಲಿ ಕಾಣೆಯಾಗಿರುವ ಮಕ್ಕಳ ಬಗ್ಗೆ ತುರ್ತು ದೂರು ನೀಡಬಹುದು
ವೀಕ್ಷಣಾ ಗೋಪುರ, ಪೊಲೀಸ್ ಸಿಬ್ಬಂದಿಗೆ ಬೈನಾಕುಲರ್ ವ್ಯವಸ್ಥೆ
ಡಿ.31 ರಾತ್ರಿ 11 ಗಂಟೆಯಿಂದ ಮೆಟ್ರೋ ಸ್ಟೇಷನ್ಗೆ (Metro Station)ಪ್ರವೇಶ ಇಲ್ಲ
ನಗರದ ಎಲ್ಲಾ ಮಾಲ್ಗಳ (Mall) ಬಳಿಯೂ ಬಿಗಿ ಭದ್ರತೆ ಇರಲಿದೆ ಇರಲಿದೆ
ಒಂದು ಗಂಟೆ ನಂತರ ಹೋಟೆಲ್, ಬಾರ್, ಪಬ್ (Hotel, Bar, Pub) ಎಲ್ಲವೂ ಬಂದ್
ವಿಮಾನ ನಿಲ್ದಾಣಕ್ಕೆ ಹೋಗೋ ಫ್ಲೈ ಓವರ್ ಓಪನ್ ಇರಲಿದೆ
ಮದ್ಯದಂಗಡಿಗೆ ಅಬಕಾರಿ ನಿಯಮಗಳ ಅಡಿಯಿರುವ ಕಾಲಮೀತಿಯೇ ಅಂತಿಮ
ಹೊಸ ವರ್ಷಕ್ಕೆ ವಿಶೇಷ ಕಾಲ ಮಿತಿ ಬೆಂಗಳೂರಲ್ಲಿ (Bengaluru) ಇರುವುದಿಲ್ಲ
ಒಂದು ಗಂಟೆಗೆ ಹೊಸ ವರ್ಷಾಚರಣೆ ಮುಕ್ತಾಯವಾಗಬೇಕು
ಶ್ವಾನದಳದಿಂದ ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಿದೆ
ಡಿ.31 ರಾತ್ರಿ 11 ರಿಂದ ಬೆಳಗ್ಗೆ ವರೆಗೆ ಫ್ಲೈಒವರ್ಗಳು (Fly ಬಂದ್ ಇರಲಿವೆ
48 ನಾಕಾಬಂದಿ ನಿರ್ಮಾಣ, ವೀಲಿಂಗ್, ಡ್ರ್ಯಾಗ್ ರೇಸಿಂಗ್ ಕಡಿವಾಣ
48 ಕಡೆಗಳಲ್ಲಿ ಡ್ರಂಕ್ ಅಂಡ್ ಡ್ರೈವ್ (Drunk and Drive) ತಪಾಸಣೆ ಮಾಡಲಾಗುತ್ತೆ
ಡ್ರಗ್ಸ್ (Drugs) ಉಪಟಳಕ್ಕೆ ಕಡಿವಾಣ ಹಾಕಲು ನಗರದಾದ್ಯಂತ ಒಂದು ವಾರದಿಂದ ನಿರಂತರ ಪರಿಶೀಲನೆ ನಡೆಯುತ್ತಿದೆ. ಸಿಸಿಬಿ (CCB) ಅಧಿಕಾರಿಗಳು ಮಾದಕ ವಸ್ತು ಸಂಗ್ರಹಿಸಿದ್ದ ಮನೆಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಅಧಿಕ ಲಿಕ್ಕರ್ (Liquor) ಶೇಖರಣೆ, ಅನಧಿಕೃತ ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ಆಯಕಟ್ಟಿನ ಪ್ರದೇಶದಗಳಲ್ಲಿ ಪೊಲೀಸ್ ಚೌಕಿಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ, ಮೇಟ್ರೋ, ಬಿಎಂಟಿಸಿ (BBMP, Metro, BMTC) ಅಬಕಾರಿ, ಆರೋಗ್ಯ ಇಲಾಖೆ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಎಂಆರ್ಸಿಎಲ್, ಬೆಸ್ಕಾಂ (BMRCL BESCOM) ಜೊತೆಗೆ ಮಾತುಕತೆ ನಡೆಸಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ, ಫಿನಿಕ್ಸ್ ಮಾಲ್ (Cubbon Park, Trinity, Phoenix Mall) ಕ್ಲಬ್ಗಳ ಮುಂಭಾಗ ಬಿಗಿ ಪೊಲೀಸ್ ಭದ್ರತೆ ಮಾಡಲಾಗುತ್ತದೆ ಮಾಹಿತಿ ನೀಡಿದರು.
ಭವ್ಯಶ್ರೀ ಆರ್ ಜೆ